ಪುಟ:Kannada-Saahitya.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಚಟು ವುದು, ಮೊದಲಾದ ಕ್ರಮವನ್ನು ವಿವರಿಸಿದನು. ಜನರ ಜೀವನೋಪಾಯ ಕಾಗಿ ಬರವಣಿಗೆ, ಕೃಷಿ, ವಾಣಿಜ್ಯ, ಹಸ್ತ ಕೌಶಲ್ಯದಿಂದ ಸಾಧಿಸುವ ಶಿಲ್ಪ, ಕತ್ತಿ ಹಿಡಿದು ರಕ್ಷಣೆ ಮಾಡುವ ಶಸ್ತ್ರಕರ್ಮ, ಪಶುಪಾಲನೆ, ಸೇವಾವೃತ್ತಿ ಮೊದಲಾದ ವೃತ್ತಿಗಳನ್ನು ಕಲ್ಪಿಸಿದನು. ಜನರನ್ನು ಕ್ಷತ್ರಿಯ, ವೈಶ್ಯ, ಶೂದ್ರ ರೆಂದು ಮೂರು ವರ್ಣಗಳಾಗಿ ವಿಂಗಡಿಸಿ ಅವರವರ ಕರ್ತವ್ಯಗಳನ್ನು ಗೊತ್ತು ಮಾಡಿದನು, ಈ ವ್ಯವಸ್ಥೆಯನ್ನು ಮಾರದೆ ನಡೆಯುತ್ತಿದ್ದರೆ ಈ ಕೀಳಾಲ ದಲ್ಲಿ ಜನ ಸುಖವಾಗಿ ಬಾಳಬಹುದೆಂದು ನಿಯಮಿಸಿದನು. ಆದಿನಾಥನು ಹೀಗೆ ಕಟ್ಟುಪಾಡು ಮಾಡಿದಂದಿನಿಂದ ಕೃತಯುಗ ಪ್ರಾರಂಭವಾಯಿತು. ಅದೇ ಕಾಲದಲ್ಲಿ ಋಷಭಸ್ವಾಮಿಗೆ ಪಟ್ಟಾಭಿಷೇಕವಾಯಿತು. ರಾಜ್ಯ ವಾಳುತ್ತ ತಾನು ಮಾಡಿದ ಲೋಕವ್ಯವಸ್ಥೆಯನ್ನು ಸರಿಯಾಗಿ ನಡಸು ವುದಕ್ಕೂ, ಮಾರಿದವರನ್ನು ಉಚಿತ ರೀತಿಯಲ್ಲಿ ಶಿಕ್ಷಿಸುವುದಕ್ಕೆ ಯೋಗ್ಯ ವಾದ ರಾಜಕುಲಗಳನ್ನು ಸ್ಥಾಪಿಸಿದನು, ಋಷಭಸ್ವಾಮಿಯೇ ಆದರ್ಶ ರಾಜ ನಾಗಿ ರಾಜ್ಯಪಾಲನೆ ಮಾಡುತ್ತಿರಲು ನೆಲವೆಲ್ಲ ಹರ್ಷಕ್ಕೆ ನೆಲೆಯಾಗಿತ್ತು. ಋಷಭನ ವೈರಾಗ್ಯ, ಪರಿನಿಷ್ಮ ಣ ಮೆಚ್ಚಿನ ಮಡದಿಯರು, ವಿದ್ಯಾ ವಿನಯ ಸಂಪನ್ನರಾದ ಮಕ್ಕಳು, ತೃಪ್ತರಾದ ಪ್ರಜೆಗಳು ಇವರಿಂದ ಕೂಡಿ ಪರಮಾನಂದಭರಿತನಾಗಿ ರಾಜ್ಯ ಭಾರ ಮಾಡುತ್ತ ಆದಿನಾಥನು ಅನೇಕ ವರ್ಷಗಳನ್ನು ಕಳೆದನು. ಬಳಿಕ ಒಮ್ಮೆ ಆತನು ಒಡೋಲಗದಲ್ಲಿರುವಾಗ ದೇವೇಂದ್ರನು ದೇವಸಮೂಹ ದೊಡನೆ ಆ ಸ್ಥಾನಕ್ಕೆ ಬಂದನು. ಅಪ್ಪರೆಯರ ನೃತ್ಯ ಸೇವೆಯಿಂದ ಪರಮ ನನ್ನು ಸಂತೋಷಪಡಿಸಬೇಕೆಂಬ ತಮ್ಮ ಬಯಕೆಯನ್ನು ಅರಿಕೆಮಾಡಿ ಕೊಂಡನು, ಆದಿನಾಥನು ತಾನು ಯಾವೊಂದು ಆಸೆಯೂ ಇಲ್ಲದವನಾದರೂ ಸಮಸ್ತ ಸುರ ನರರ ಆಸೆ ಪೂರ್ಣವಾಗಲೆಂಬ ಭಾವನೆಯಿಂದ ಅದಕ್ಕೆ ಸಮ್ಮತಿ ಯಿತ್ತನು. ದೇವವಾದ್ಯಗಳ ಮಧುರರವವೂ, ದೇವಸ್ತ್ರೀಯರ ಇಂಪಾದ ಗಾನವೂ ಅಮೃತದ ಮಳೆ ಸುರಿದಂತೆ ರಂಜಿಸುತ್ತಿರಲು ನೀಳಾಂಜನೆಯೆಂಬ ದೇವ ನರ್ತಕಿಯೊಬ್ಬಳು ನರ್ತನಕ್ಕೆ ಪ್ರಾರಂಭಿಸಿದಳು. ಅವಳ ಕೂಪಕ್ಕೂ ನರ್ತನ