ಪುಟ:Kannada-Saahitya.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಪರಾಕ್ರಮ ಪ್ರದರ್ಶನದಿಂದ ಆವನಿನ್ನೂ ಕೆರಳುತ್ತಾನೆ. ಆದ್ದರಿಂದ ಸಾಮ ದಿಂದಲೆ ವಶಪಡಿಸಿಕೊಳ್ಳಬೇಕು. ಅದು ಸಾಗದಿದ್ದರೆ ನನ್ನ ಮೆಚ್ಚಿನ ದಂಡ ಇದ್ದೇ ಇದೆ ” ಎಂದು ಭಾವಿಸಿ ಮಂತ್ರಿಗಳೊಡನೆ ಆಪ್ತಾಲೋಚನೆ ನಡೆಸಿ ದನು. ಅವರೂ ಒಪ್ಪಿದರು. ಆಗ ಚಕ್ರವರ್ತಿಯ ಅಪ್ಪಣೆಯ ಪ್ರಕಾರ ಸಂಧಿವಿಗ್ರಹಿಯು ಸಂಧಾನ ಕುಶಲನೂ ಯೋಗ್ಯನೂ ಆದ ಒಬ್ಬ ಮಹತ್ತರವನ್ನು ಬಾಹುಬಲಿಯ ಬಳಿಗೆ ಕಳಿಸಿದನು. ಆ ರಾಯಭಾರಿಯು ಕೆಲವು ದಿನಗಳಲ್ಲಿ ಪೌದನಪುರವನ್ನು ಸೇರಿ ತನ್ನ ಬರವನ್ನು ಹೇಳಿ ಕಳಿಸಿದನು. ಅಪ್ಪಣೆ ಪಡೆದು ಆಸ್ಥಾನವನ್ನು ಹೊಕ್ಕು ನೆಲಕ್ಕೆ ಬಗ್ಗಿ ನಮಸ್ಕಾರ ಮಾಡಿದನು. ಪಚ್ಚೆಯ ಬೆಟ್ಟದಿಂದ ಉತ್ತಮ ಮನುಷ್ಯಾಕೃತಿಯನ್ನು ಆದಿಬ್ರಹ್ಮನು ನಿರ್ಮಿಸಿದನೋ ಎಂಬಂತೆಯ ಕ್ಷಾತ್ರ ತೇಜಸ್ಸೆ ದೊರೆಯ ರೂಪದಿಂದ ಅವತಾರ ಮಾಡಿದೆಯೋ ಎಂಬಂತೆಯೂ ಸುಂದರ ರೂಪಿನಿಂದ ಪ್ರಕಾಶಿಸು ತಿದ್ದ ಬಾಹುಬಲಿಯನ್ನು ಕಣ್ಣಿಟ್ಟು ನೋಡಿದನು. ನೋಡಿ, 'ಈ ಕುಮಾರನ ತೇಜಸ್ಸು ಚಕ್ರವರ್ತಿಗೂ ಇಲ್ಲ' ಎಂದುಕೊಂಡನು. ಬಳಿಕ, 'ದೇವಃ, ಇದು ನಿಮ್ಮ ಅಣ್ಣನಾದ ರಾಜಾಧಿರಾಜನು ನಿಮಗೆ ಕಳಿಸಿರುವ ಮಹಾಪ್ರಸಾದ, ಒಪ್ಪಿಸಿಕೊಳ್ಳಬೇಕು' ಎಂದು ಉಪಾಯನ ರತ್ನ ಕರಂಡಕವನ್ನರ್ಪಿಸಿದನು. ಮಹಾಸಂಧಿ ವಿಗ್ರಹಿಯು ಅದನ್ನು ಕೈಗೆ ತೆಗೆದು ಕೊಂಡು ಮುದ್ರೆಯೊಡೆದನು. ರತ್ನಾಭರಣಗಳನ್ನು ಕೋಶಾಧ್ಯಕನ ವಶಕ್ಕೆ ಕೊಟ್ಟು ಲೇಖನವನ್ನು ಓದತೊಡಗಿದನು. “ಸ್ವಸ್ತಿ. ಸಮಸ್ತಲೋಕಾಧೀಶ್ವರನಾದ ಪುರುಷರಮೇಶ್ವರನ ಪಾದಪದ್ಮ ಗಳಿಗೆರಗಿ, ಚಕ್ರರತ್ನದ ಕಾಂತಿಯಿಂದ ನಿಖಿಲ ದಿದ್ದೇಶಗಳನ್ನೂ ಜಯಿಸಿರುವ ಭರತೇಶ್ವರ ಚಕ್ರವರ್ತಿಯು ತನ್ನ ಪ್ರಿಯಾನುಜನಾದ ಬಾಹುಬಲಿ ಕುಮಾರ ನನ್ನು ಪರಮಾಶೀರ್ವಾದಗಳಿಂದ ಹರಸಿ, ಬಿಲ್ಲುಗಳೆಂಬ ಲತೆಗಳಿಗೆ ಊರೆ ಗಂಬಗಳೂ ತನ್ನ ವಿಜಯೋತ್ಸವ ತೋರಣಸ್ತ೦ಭಗಳೂ ವೀರಶ್ರೀಯೆಂಬ ಹೆಣ್ಣು ಸರ್ಪಕ್ಕೆ ಆಶ್ರಯನಾದ ಚಂದನಕಾಂಡಗಳೂ ಆದ ಬಾಹುದಂಡಗಳಿಂದ ಅತಿಗಾಢವಾಗಿ ಆಲಿಂಗಿಸಿ, ಕಾವ್ಯವನ್ನು ಬೆಸಸಿದ್ದಾನೆ. ಮತ್ತೇನೆಂದರೆ ....”