ಪುಟ:Kannada-Saahitya.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಹಿನ್ನುಡಿ ತ್ರಿದಶಸ್ತುತ ಇದಾದಿ ದೇವಚರಿತಂ ಕರ್ಣಾಮ್ಮ ತಂದೆಯ ಕೈದು ಭವ್ಯಾವಳಿಗೆಂದು ಹೇಳಿಕೆ ಬುಧರ್ ಸ್ವರ್ಗಾಪವರ್ಗಕ್ಕೆ ಮಾ ಸ್ಪದಮುಪ್ಪಾದಿ ಪುರಾಣ ವಸ್ತುಕೃತಿಯಂ ಶೇ ೯೦ ಬೆಡಂಗಪ್ಪಮಾ ರ್ಗದೊಳಂ ದೇಸಿಯೊಳಂ ಪೊದಲ್ಲೆಸೆವಿನಂ ಸಂಸಾರ ಸಾರೋದಯ [* ಇದು ಆದಿದೇವನ ಚರಿತ್ರೆ ; ದೇವತೆಗಳೆಲ್ಲ ಹೊಗಳುವಂಥದು. ಭವ್ಯ ಸಮೂಡದ (ಎಂದರೆ ಪುಣ್ಯವಂತರಾದ ಜೈನಭಕ್ತರ ಕಿವಿಗೆ ಇದು ಅಮೃತವನ್ನೆ ಯುವಂಥದಾಗಲಿ ಎಂದು ಪಂಡಿತರು ಹೇಳಿಸಿದರು. ಸ್ವರ್ಗ ಮೋಕ್ಷಗಳಿಗೆ ಆಸ್ಪದ ವಾದದ್ದು ಆದಿಪುರಾಣ, ಆದರ ವಿಷಯವನ್ನು ಎತ್ತಿಕೊಂಡು ಚಮತ್ಕಾರವಾಗಿರುವ ಮಾರ್ಗವೂ (ಪ್ರೌಢಶಾಸ್ತ್ರ ರೀತಿ ಸ್ವಾಭಾವಿಕವಾದ ದೆಸೆಯ (ನಾಡ ನುಡಿ ಕಟ್ಟು) ಹೊಂದಿಕೊಂಡು ಚೆನ್ನಾಗಿ ಕಾಣುವಂತೆ ಸಂಸಾರ ಸಾರೋದಯ( ನೆಂಬ ಬಿರುದುಳ್ಳ ಸಂಸನು ಕಾವ್ಯವಾಗಿ ಹೇಳಿದನು.} [ಈ ಕಥೆಯಲ್ಲಿ ವರ್ಣಿ ಸಿರುವ ಬಾಹುಬಲಿಯೇ ನಮ್ಮ ಗೊಮ್ಮಟೇಶ್ವರಸ್ವಾಮಿ, ಆ ಆದ್ಯುತ ಮನೋಹರ ಮೂರ್ತಿ ತಿಂದು ಬಾಹುಬಲಿ ಪ್ರತಿವಯೋಗದಲ್ಲಿ ನಿಂತ ರೀತಿಯನ್ನು ತೋರಿಸುತ್ತದೆ. ಈ ಕಥೆಯನ್ನು ಕನ್ನಡದಲ್ಲಿ ಬರೆದವನು ನಮ್ಮ ಆದಿ ಕವಿ ಸಂಸ. ಆತ ಕನ್ನ ಡದ ಮೇಲಿನ, ಕನ್ನಡ ನಾಡಿನ ಮೇಲಿನ ಅಕ್ಕರೆಯನ್ನು ಉಕ್ಕಿ ಹರಿಸಿದ್ದಾನೆ. ಆದಿ ಪುರಾಣ, ವಿಕ್ರಮಾರ್ಜುನ ವಿಜಯ ಎಂಬವು ಅವನು ರಚಿಸಿದ ಕೃತಿಗಳು. ಇಲ್ಲಿ ಕೊಟ್ಟಿರುವುದು ಆದಿಪುರಾಣದ ಕಥೆ, ವಿಕ್ರಮಾರ್ಜುನ ವಿಜಯ ದಲ್ಲಿ ಮಹಾಭಾರ ತದ ಕಥೆಯನ್ನು ವಿವರಿಸಿದ್ದಾನೆ. ಇದನ್ನು ಪಂಪ ಭಾರತ' ಎಂದು ಕರೆಯುವುದು ರೂಢಿ. ಇವೆರಡು ಗ್ರಂಥಗಳೂ ಆ ಕಾಲದ ಕನ್ನಡದಲ್ಲಿ--ಸಾವಿರ ವರ್ಷ ಹಿಂದಿನ ಹಳಗನ್ನಡದಲ್ಲಿ ಬರೆದಿವೆ, ಆದರ ಸ್ವರೂಪವನ್ನು ಇಲ್ಲಿ ಕೊಟ್ಟಿರುವ ಎರಡು ಪದ್ಯ ಗಳಿಂದ ತಿಳಿದುಕೊಳ್ಳಬಹುದು. ಪಂಪ ಒಳ್ಳೆಯ ಕವಿ ಮಾತ್ರವೇ ಅಲ್ಲ ; ದೊಡ್ಡ ಪಂಡಿತನೂ ಹೌದು. ಆಪ್ಟೆ ಆ೪ ; ರಾಜನ ದಂಡನಾಯಕನೂ ಆಗಿದ್ದನು. ನಾಡು, ನುಡಿ, ರಾಜಸೇವೆಗಳನ್ನು ಜನ ಮೆಚ್ಚುವಂತೆಯೂ ತನ್ನ ಮನಸ್ಸು ಮೆಚ್ಚುವಂತೆಯೂ ಮಾಡಿದ ಧನಾತ್ಮ. ಆತನಿಗೆ ಕವಿತಾಗುಣಾರ್ಣವ, ಸರಸ್ವತೀ ಮಣಿಹಾರ, ಸಂಸಾರ ಸಾರೋದಯ ಮೊದಲಾದ ಬಿರುದುಗಳಿದ್ದವು, ಈ ಆದಿಪುರಾಣವನ್ನು ಕ್ರಿ. ಶ. ೯೪೧-ri೨ರಲ್ಲಿ ರಚಿಸಿದನೆಂದು ಪಂಡಿತರು ಗೊತ್ತು ಮಾಡಿದ್ದಾರೆ.