ಪುಟ:Kannada-Saahitya.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಗಿತು, ಕಣ್ಣಪ್ಪನೂ ಅದು ಹೊಕ್ಕಲ್ಲಿ ಹೊಕ್ಕು, ನೆಗೆದಲ್ಲಿ ನೆಗೆದು, ಓಡಿದಲ್ಲಿ ಬೆಂಬತ್ತಿ ಓಡಿ ಅದನ್ನು ಎಡೆಬಿಡದೆ ಅನುಸರಿಸುತ್ತಿದ್ದನು. ಅವನ ಮನಸ್ಕೂ ಕಣ್ಣ ಮೃಗದ ಮೇಲೆ ; ಮನಸ್ಸಿನಲ್ಲಿ ಅತ್ಯಂತ ತವಕ ; ಎಷ್ಟು ತವಕ ಪಟ್ಟರೂ ಮೈ ಹಿಂದೆ ಹಿಂದೆ. ಆದರೂ ಛಲದಿಂದ ಕಣ್ಣಪ್ಪನು ಆ ಮೃಗ ವನ್ನು ಮರೆಯಾಗಗೊಡದೆ ಬೆಂಬತ್ತಿದನು. ಕಡೆಗೆ ಅದು ಬೆಟ್ಟವನ್ನು ಹತ್ತಿ ಕಣ್ಣಪ್ಪನನ್ನು ಹಿಂದೆಯೇ ಎಳೆದುಕೊಂಡು ಶಿವನ ದೇವಾಲಯದ ಬಳಿ ಮಾಯವಾಯಿತು. ಕಣ್ಣಪ್ಪ ಅಲ್ಲೆಲ್ಲ ಬಹಳ ಹೊತ್ತು ಹುಡುಕಿದನು. ಎಲ್ಲಿಯೂ ಕಾಣ ದಿರಲು ಅವನಿಗೆ ಕೋಪವೇರಿತು. ದಡದಡನೆ ದೇವಾಲಯದ ಬಳಿ ಬಂದು * ಎನ್ನವನೇ, ಎನ್ನವನೇ, ಕದ ತೆರೆ, ತೆರೆ ” ಎಂದು ಒಂದೇ ಸಮನೆ ಕೂಗಲು ಮೊದಲುಮಾಡಿದನು. ತಟ್ಟನೆ ಕದ ತೆರೆಯಿತು. ಕಣ್ಣಪ್ಪ ಒಳ ಹೊಕ್ಕು ಲಿಂಗದ ಮುಂದೆ ನಿಂತು, “ ನೋಡು ಮಾದೇವನೇ ! ಕೇಳು ನನ್ನ ವನೇ! ಈಗ ನಾನು ನಿನ್ನ ಸತ್ಯವನ್ನು ನೋಡಿಬಿಡುತ್ತೇನೆ. ಹೋದ ಹುಲ್ಲೆ ಯನ್ನು ತೋರಿಸಿದರೆ ನೀನು ನನಗೆ ಒಳ್ಳೆಯವನು. ತೋರಿಸಿ ಕೊಟ್ಟರೆ ಅದ ರಲ್ಲಿ ನಿನಗೂ ಪಾಲು ಕೊಡುತ್ತೇನೆ, ನಾನೇನು ವಂಚನೆ ಮಾಡುವುದಿಲ್ಲ. ನಿನ್ನ ಪಾಲನ್ನು ನೀನು ತೆಗೆದುಕೊ ” ಎಂದು ಕೇಳಿಕೊಂಡನು. ಈಶ್ವರನಿಗೆ ನಗು ಬಂತು. ನಕ್ಕು, “ ಇವನ ಮೇಲೆ ನನಗೆ ಕಡು ಮೋಹ ” ಎಂದು ಕೊಂಡು ಕಣ್ಣಪ್ಪನಿಗೆ ಮೃಗವನ್ನು ತೋರಿಸಿದನು. ಕಂಡು ಕಣ್ಣಪ್ಪನಿಗೆ ಪರಮಾನಂದವಾಯಿತು. " ಅಯ್ಯಯ್ಯ ! ಇಂಥ ಸತ್ಯವನ್ನು 'ಕಂಡೆನಲ್ಲ ! ಕೈಯ ಮೇಲೆಯೇ ತೋರಿಸುವ ಒಡೆಯ ನನ್ನು ಕಂಡುಬಿಟ್ಟೆ ! ಅಯ್ಯಾ, ಇನ್ನು ನಿನ್ನ ನಗಲುವುದಿಲ್ಲ, ಇದುವರೆಗೂ ನಿನ್ನ ವಿಚಾರ ತಿಳಿದಿರಲಿಲ್ಲ. ತಿಳಿಯದೆ ಕೆಟ್ಟೆ, ತಿಳಿದ ಮೇಲೆ ಇನ್ನು ಬಿಟ್ಟೆನೇ ? ನನಗಿರುವವನು ನೀನು ; ನಿನಗಿರುವವನು ನಾನು, ಇಷ್ಟು ದಿಟವು ನಿನ್ನನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಇಂದು ಮೊದಲಾಗಿ ನಿನ್ನ ಹೆಜ್ಜೆಯನ್ನು ಬಿಟ್ಟಗಲುವುದಿಲ್ಲ ನಾನು. • ರಸ ಬಸಿಯುವ ಹೊಸ ಮಚ್ಚೆಯನ್ನು ತಂದು ಕೊಡುತ್ತೇನೆ. ಸಂಜೆಯಾದ ಮೇಲೆ ನಿನ್ನನ್ನು ಒಂಟಿಯಾಗಿ ಬಿಟ್ಟು ಹೋಗು