ಪುಟ:Kannada-Saahitya.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು 'ಕರ್ಮಲತೆಯಂತಿದ್ದ ಜನಿವಾರವನ್ನು ಕಿತ್ತೊಗೆದು ಆತ ಬಾಗೇವಾಡಿಯನ್ನು ಬಿಟ್ಟು ಹೊರಟನು ; ಕಪ್ಪಡಿ ಸಂಗಮಕ್ಷೇತ್ರಕ್ಕೆ ಹೋಗಿ ಅಲ್ಲಿ ಸಂಗಮೇಶ್ವರ ನನ್ನು ಭಕ್ತಿಯಿಂದ ಪೂಜಿಸುತ್ತಿದ್ದನು, ಕಾಲ ಕಳೆಯಿತು. ಒಂದು ದಿನ ದೇವಾಲಯದ ರಂಗಮಂಟಪದಲ್ಲಿ ಮಲಗಿದ್ದ ಬಸವಣ್ಣನ ಕನಸಿನಲ್ಲಿ ಸಂಗಮೇಶ್ವರನು ಕಾಣಿಸಿಕೊಂಡು ಬಿಜ್ಜಳರಾಯನ ರಾಜಧಾನಿಯಾದ ಮಂಗಳವಾಡಕ್ಕೆ ಹೋಗೆಂದು ಹೇಳಿ ದಂತಾಯಿತು. ಬಸವಣ್ಣ ಬೆಚ್ಚಿದನು ; ಸಂಗನನ್ನು ಅಗಲಿ ಹೋಗಲಾರದೆ ಪರಿಪರಿಯಾಗಿ ಹಂಬಲಿಸಿದನು. ಶಿವ ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು * ಎಲೆ ಮಗನೆ, ಎಲೆ ಕಂದ ಬಸವ, ನಿನ್ನನ್ನಗಲಿ ನಾನಿರಲಾರೆ. ನಿನ್ನೆಡ ನೊಡನೆ ಬಿಡದೆ ಬರುತ್ತೇನೆ ನಾಳೆ ಮಧ್ಯಾಹ್ನ ಶುದ್ಧನಾಗಿ ಬಂದು ನಂದಿಕೇಶ್ವರನ ಮುಂದೆ ನನ್ನನ್ನು ನೆನೆಯುತ್ತ ಕೂತಿರು, ಆಗ ವೃಷಭನ ಮುಖಾಂತರದಿಂದ ನಾವೆ ಬರುತ್ತೇವೆ. ಆತ ನಿನಗೆ ಸದ್ದು ರು. ಅಲ್ಲಿಂದ ಬಳಿಕ ನಮ್ಮನ್ನರ್ಚಸುತ್ತ ಭಕ್ತರ ಬಂಧುವಾಗಿ ಶರಣರ ಪರುಷದ ಕಣಿ ಯಾಗಿ ಪರಮ ಸುಖದಿಂದಿರುವುದು” ಎಂದು ಅಪ್ಪಣೆಮಾಡಿದನು. - ಬಸವಣ್ಣನು ಸಂಗಮೇಶ್ವರನ ಅಪ್ಪಣೆಯಂತೆ, ಮರುದಿನ ಮಿಂದು ವಿಭೂತಿಯಿಟ್ಟು, ಬಿಳಿಯ ಬಟ್ಟೆಯನ್ನುಟ್ಟು, ಸ್ವಾಮಿಗೆ ಅಭಿಷೇಕ ಪೂಜೆಗಳನ್ನು ಮಾಡಿ ನಮಸ್ಕರಿಸಿ ನಂದೀಶ್ವರನ ಮುಂದೆ ಕುಳಿತು ಸಂಗಮೇಶ್ವರನನ್ನು ಧ್ಯಾನಿ ಸುತ್ತಿದ್ದನು. ಆಗ ನಂದಿಕೇಶ್ವರನ ಹೃದಯ ಕಮಲದಿಂದ ಸಂಗಮೇಶ್ವರ ಲಿಂಗ ಹೊರಹೊರಟು ಬಂತು. ವೃಷಭನ ಮುಖ ಅರಳಿತು. ಬಸವಣ್ಣ ನಂದಿಯ ಬಾಯಿಂದ ಬರುತಿ ರುವ ದಿವಲಿಂಗವನ್ನು ಕಂಡು ಸಂತೋಷಿಸಿ ಕೆ ಚಾಚಿದನು. ನಂದಿ ಶಿವನಾಜ್ಞೆಯಂತೆ ಸಂಗಮೇಶ್ವರ ಲಿಂಗವನ್ನು ಬಸವನ ಕೈಗೆ ಬಿಜಯಮಾಡಿಸಿದನು. ಬಸವಣ್ಣನಿಗೆ “ ಪಂಚಾಕ್ಷರಿ 'ಯನ್ನು ಉಪ ದೇಶಿಸಿದನು. ಹೀಗೆ ನಂದಿಕೇಶ್ವರನಿಂದ ಮಂತ್ರೋಪದೇಶ ಹೊಂದಿ ಬಸ ವಣ್ಣನು ಸಂಗಮೇಶ್ವರನನ್ನು ನಿಷ್ಠೆಯಿಂದ ಪೂಜಿಸುತ್ತ ಮತ್ತೆ ಕೆಲವು ದಿನ ಅಲ್ಲೇ ಇದ್ದನು. ಬಳಿಕ ಸಂಗನನ್ನಗಲಾರದೆ ಸಂಕಟಪಡುತ್ತ ಬಹು ದುಃಖದಿಂದ ಸ್ವಾಮಿಯನ್ನು ಬೀಳ್ಕೊಂಡು ಮಂಗಳವ - ಡಕ್ಕೆ ಪ್ರಯಾಣ ಮಾಡಿದನು. ಅಲ್ಲಿ