ಪುಟ:Kannada-Saahitya.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಕೇಳಿ ಬಸವಣ್ಣ ಆ೦ಜಿ ಸಬ್ಬ ನಾಗಿ ನಿಂತನು ; ಮನಸ್ಸಿಗೆ ಎಣೆಯಿಲ್ಲದ ಸರಿತಾಪವುಂಟಾಯಿತ, ಕಂದಿ ಕುಂದಿ, “ ಬಂದ ಸುಕೃತ ತಿರುಗಿ ಹೋಯಿತು ! ” ಎಂದು ಹಂಬಲಿಸಿ ಹಲುಬಿದನು. ತಿನ್ನರಯ್ಯ ಮುನಿ ದನು. ಇನ್ನೇನು ಮಾಡೋಣ ? ಇದರಿಂದ ಇನ್ನೆನೇನಾಗುವುದೋ ? 12 ಎಂದು ಭಯಪಟ್ಟು ಗಣಸಮೂಹಕ್ಕೆ ಮೈಯಿಕ್ಕಿದನು, ಅಂದು ಬಸವಣ್ಣನ ಉಬ್ಬುಡುಗಿಹೋಯಿತು, 1 ಗೊತ್ತಾಯ್ತು ಗೊತ್ತಾಯ್ತು ! ಈ ಕೆಟ್ಟ ನಾಲಗೆಯದೇ ಅಪರಾಧ, ಉಳ್ಳಿಯನ್ನು ನಿಂದಿಸಿದ ಅಪರಾಧಕ್ಕೆ ಒಂದು ದಂಡವನ್ನು ವಿಧಿಸಿರಿ ” ಎಂದು ಶಿವಶರಣರನ್ನು ಕೇಳಿಕೊಂಡನು. ಆಗ ಆವರು, ಈಗ ಸಿದ್ದ ಮಾಡಿರುವ ಅನ್ನ ಎಲ್ಲ ಹಾಗೆಯೇ ಇರಲಿ. ಕಿನ್ನ ರಯ್ಯ ನನ್ನು ಕರೆದುಕೊಂಡು ಬಂದು ಆತನಿಗೆ ಉಳ್ಳಿಯಿಂದ ಬಂದಿರುವ ಮುನಿ ಸನ್ನು ಉಳ್ಳಿಯ ದಲೆ ತೀರಿಸೋಣ ' ಎಂದರು. - ಬಸವಣ್ಣ ನವೇರಿದನು, ಶರಣರ ಅಪ್ಪಣೆಯಂತೆ ಒಳ್ಳೆಯ ಉಳ್ಳಿ ಯನ್ನು ತರಹೇಳಿದನು. ಶಿವಭಕ್ತರೆಲ್ಲ ಒಟ್ಟುಗೂಡಿ ನಲಿನಲಿದು ಉಳ್ಳಿ ಯನ್ನು ತರುತ್ತಿದ್ದರು. ಬಸವಣ್ಣನ ಅಪ್ಪಣೆಯಾಯಿತೋ ಇಲ್ಲವೋ ಉಳ್ಳಿ, ನಾಲ್ಕು ದಿಕ್ಕುಗಳಿಂದಲೂ ಬಂಡಿಬಂಡಿಯಲ್ಲಿ ತುಂಬಿ ಬರತೊಡಗಿತು, ಆಗ ಭಕ್ತರ ಉತ್ಸಾಹರ್ವೆ ಉತ್ಸಾಹ ! ಉಳ್ಳಿಯ ಮುಂದೆ ಕಹಳೆ, ಮದ್ದಳೆ, ಶಂಖ ಮೊದಲಾದ ಬಗೆಬಗೆಯ ವಾದ್ಯಗಳನ್ನು ಮೊಳಗುವರು ! ಹಾಡುವರು, ಹರಸು ವರು, ಕುಣಿಯುವರು ! ನಲಿನಲಿದು ನೋಡುವರು ; ನೋಡುತ್ತ ಆಡುವರು. ಉಳ್ಳಿಯ ಮುಂದೆ ವೃಷಭಧ್ವಜಗಳನ್ನು ಹಿಡಿದೆತ್ತುವರು ! ಹೀಗೆ ಸಂಭ್ರಮ ದಿಂದ ತಂದ ಉಳ್ಳಿಯನ್ನು ಬಸವಣ್ಣ ಎಮರುಗೊಂಡು ತೆಗೆದುಕೊಂಡನು. ಕಿನ್ನರಯ್ಯನನ್ನು ಕರೆತರಲು ತಕ್ಕ ಸಿದ್ಧತೆಗಳನ್ನು ಮಾಡತೊಡಗಿದನು. ಆನೆಯ ರತ್ನಗಂಬಳಿ, ಕುದುರೆಯ ಹಲ್ಲಣ ಮೊದಲಾದವುಗಳನ್ನೆಲ್ಲ ಉಳ್ಳಿಯಿ೦ದಲೆ ಅಣಿಮಾಡಿದರು. ಉಡುವ ಧೋತ್ರ, ಹೊದೆಯುವ ವಲ್ಲಿ, ತೊಡುವ ಕವಚ, ಸುತ್ತುವ ವಾಗು, ಹಿಡಿಯುವ ಕೋಲು, ಆಯುಧಎಲ್ಲಕ್ಕೂ ಉಳ್ಳಿಯ ಆಲಂಕಾರವಾಯಿತು. ಎಲ್ಲೆಲ್ಲಿಯೂ ಉಳ್ಳಿಯ ಚಪ್ಪರ ತೋರಣಗಳಿದ್ದವು. ಊರೆಲ್ಲ ಉಳ್ಳಿಯ ಮಯವಾಯಿತು. ಸಾವಿರಾರು ಭಕ್ತರು ನೆರೆದರು. ನೂರಾರು ವೃಷಭ ಧ್ವಜಗಳೆ ಹಿಡಿದು ವು.