ಪುಟ:Kannada-Saahitya.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

th

  1. ನ್ನರ ಬೊಮ್ಮಯ್ಯ ಆ ಭಕ್ತ ಸಮೂಹದ ನಡುವೆ ಉಳ್ಳಿಗಳ ಗೊಂಚಲಿನಿಂದ ಕಟ್ಟಿದ ಶಿರೋಮಾಲೆ ಗಳನ್ನು ಧರಿಸಿ, ಉಳ್ಳಿಗಳಿಂದ ಮಾಡಿದ ಬಾಗು ಬಳೆಗಳನ್ನು ತೊಟ್ಟು, ಉಳ್ಳಿಯ ಕಂಠಮಾಲೆಯನ್ನು ಹಾಕಿಕೊಂಡು, ಉಳ್ಳಿಯನ್ನು ಮುಡಿದು, ಉಳ್ಳಿಯನ್ನು ಕೈಯ್ಯಲ್ಲಿ ಹಿಡಿದು ಒಳ್ಳೆಯ ಮನಸ್ಸುಳ್ಳ ಬಸವಣ್ಣನು ನಡೆದು ಬರುತ್ತಿದ್ದನು. ಬೆಳೊಡೆಗಳು ಗಗನವನ್ನು ಮುಸುಕಿದವು, ಬಗೆಬಗೆಯ ಆಯುಧಗಳು ಭೋರ್ಗರೆದು ಮೊಳಗಿದವು. ಜಂಗಮರು ಸಂಭ್ರಮದಿಂದ ಕೋಲಾಹಲಮಾಡುತ್ತ ಓರಣವಾಗಿ ಬರುತ್ತಿದ್ದರು. ಪುರಜನರೂ ಪ್ರೀತಿ ಯಿಂದ ಜೊತೆಗೆ ನಡೆದರು. ಬಸವಣ್ಣನ ಎಡಬಲಗಳಲ್ಲಿ ನೀರಮಾಹೇಶ್ವರರು ( ಭಕ್ತ ಜನ ಚರಣ ಸರಸಿರುಹ ಷಟ್ಟಿದಾ ! ಭಕ್ತ ಜನ ಕುಮುದವನ ಕವು ನೀಯ ಶಶೀ ! ಜಂಗಮದ ಕಿಂಕರ! ಜಂಗಮದ ಪ್ರಾಣ ! ಎಂದು ಮುಂತಾಗಿ ಬಿರುದೆ ಹೊಗಳುತ್ತಿದ್ದರು. ಹೀಗೆ ಉಳ್ಳಿಯ ಮೆರವಣಿಗೆ ಕೈಲಾಸದ ಹಾದಿಯ ಹಾಗೆ, ಚಂದ್ರಶೇಖರನ ನಿಬ್ಬಣದ ಹಾಗೆ ಮುಂಬರಿದು ಬರುತ್ತಿತ್ತು, - ಕಿನ್ನ ರಯ್ಯನಿಗೆ ದೂರದಿಂದಲೆ ಈ ಮೆರವಣಿಗೆಯ ಕೋಲಾಹಲ ಕೇಳಿ ಸಿತು ; ಅದರ ಸಂಭ್ರಮ ಕಾಣಿಸಿತು. ಇದೇನಿರಬಹುದೆಂದು ಸ್ವಲ್ಪ ಹೊತ್ತು ಯೋಚಿಸಿದನು. ತನ್ನ ಮುನಿಸನ್ನು ತಿಳಿಸುವುದಕ್ಕಾಗಿ ಬಸವಣ್ಣ ಬರುತ್ತಿರುವ ರೀತಿಯದೆಂದು ಮಸಸ್ಸಿಗೆ ಹೊಳೆಯಿತು. ಆ ಭಾವ ಹೊಳೆಯಿತೋ ಇಲ್ಲವೋ ಮನಸ್ಸಿನಲ್ಲಿ ಮನೆ ಮಾಡಿದ್ದ ಮುನಿಸು ಮಾಯವಾಗಿ ಒಲವು ನೆಲೆ ನೆಲಸಿತು. ಆ ಭಕ್ತನ ನೆನಹು ಬಸವನತ್ತ ತಿರುಗಿತು. ಮೈ ಪುಳಕಗೊಂಡಿತು. ಸದಾ ಶಿವನ ಧ್ಯಾನದಲ್ಲಿ ನಿರತನಾದ ಆ ಸಾತ್ವಿಕ ಶರಣನು ಬಸವಣ್ಣನನ್ನು ಎದುರು ಗೊಳ್ಳಲು ನಡೆದನು, - ಬಸವಣ್ಣ ತನ್ನ ಕಡೆಗೆ ನಗುಮೊಗದಿಂದ ನಲಿದು ಬರುತ್ತಿದ್ದ ಕಿನ್ನರಯ್ಯ ನನ್ನು ಕಂಡನು. ಸಂಗಮೇಶ್ವರನೆ ತನ್ನನ್ನು ಹರಸಬರುತ್ತಿರುವಂತೆ ತೋರಿತು. ಅಕ್ಕರೆಯಿಂದ ಹತ್ತಿರ ಹೋಗಿ ತನ್ನ ಸರ್ವಾಂಗವನ್ನೂ ಕಿನ್ನರಯ್ಯನ ಪಾದ ಗಳ ಮೇಲೆ ಇಳಿಸಿಬಿಟ್ಟನು. ಗಳಗಳನೆ ಆನಂದಾಶ್ರುಗಳನ್ನು ಸುರಿಸಿದನು. ಹೀಗೆ ಉತ್ತಮೋತ್ತಮ ಭಕ್ತಿಯಾಚಾರವನ್ನು ಮೆರೆಯುತ್ತಿರುವ ಬಸವರಾಜ ನನ್ನು ಕಿನ್ನರಯ್ಯನು ಪ್ರೀತಿಯಿಂದ ಎತ್ತಿ ತಬ್ಬಿಕೊಂಡನು. ಇಬ್ಬರಲ್ಲಿ ಒಬ್ಬ