ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

viji ನಡೆದಹಾಗೆ ತಿಳಿಸತಕ್ಕ ಚರಿತ್ರಗ್ರಂಥಗಳು ಒಂದೆರಡು ಮಾತ್ರ. ಇದಕ್ಕೆ ಕಾರಣವನ್ನು ಇಲ್ಲಿ ವಿಚಾರಮಾಡಬೇಕಾದುದಿಲ್ಲ. ಒಟ್ಟಿನಲ್ಲಿ ಹಿಂದೆ ನಮ್ಮವರು ಧಾರ್ಮಿಕ ವಿಷಯಗಳಿಲ್ಲದ ಕಾವ್ಯವನ್ನು ರಚಿಸುತ್ತಿ ದ್ದುದು ಕೇವಲ ಅಪರೂಪ'ವೆಂದು ಹೇಳಬಹುದು. ಆದುದರಿಂದ ಒಂದು ಕಡೆ ಚರಿತ್ರೆಯ ಬಣ ವುಳ್ಳ 'ವಿಕ್ರಮಾರ್ಜುನವಿಜಯ' 'ಸಾಹಸ ಭೀಮ ವಿಜಯ' ಮುಂತಾದ ಪ್ರಾಣಿಕ ಚಂಪೂ ಕಾವ್ಯಗಳೂ, ಮತ್ತೊಂದು ಕಡೆ ಚಿಕ್ಕದೇವರಾಯ ವಂಶಾವಳಿ ' ಮುಂತಾದ ಗೌಡಶೈಲಿಭೂಯಿಷ್ಠ ವಾಗಿಯು ಶಬ್ದಾಲಂಕಾರಾರ್ಥಾಲಂಕಾರಪರಿಪೂರ್ಣವಾಗಿಯೂ ಇರುವ ಗದ್ಯಗ್ರಂಥಗಳ ಹುಟ್ಟಿದುವು. ಇವುಗಳಿಂದ ಕೆಲವು ಸ್ಕೂಲವಾದ ಐತಿ ಹಾಸಿಕ ಸಂಗತಿಗಳು ತಿಳಿದುಬರುತ್ತವೇ ವಿನಾ ಆಯಾ ಕಾಲದ ಚರಿ ತ್ರೆಯು ಪೂರ್ಣವಾಗಿ ಗೊತ್ತಾಗುವುದಿಲ್ಲ,

  • ಕೆಳದಿನ್ನಪವಿಜಯವೂ ಇಂತಹ ಗ್ರಂಥವೇ ಆದರೂ ಇದರಲ್ಲಿ ಕಾವ್ಯಾಂಶಕ್ಕಿಂತಲೂ ಚರಿತ್ರಾಂಶವೇ ಹೆಚ್ಚಾಗಿದೆ. ಮೊದಲಿನಿಂದ ಕೊನೆಯವರೆಗೆ ಮುಖ್ಯವಾಗಿ ಕೆಳದಿಯ ಅರಸರ ಚರಿತ್ರೆಯ ಪ್ರಾಸಂ ಗಿಕವಾಗಿ ಚಿತ್ರದುರ್ಗದ ನಾಯಕರು, ಬೇಲೂರ ಅರಸರು, ವಿಜಯ ನಗರದ ಅರಸರು, ಪಾಹಿರಾಜರು, ಮರಾಟೆರಾಜರು, ಡಿಳ್ಳಿಯ ಸುಲ್ತಾ ನರು ಇವರ ವಿಷಯವೂ ಹೇಳಿದೆ. ಶಾಸನಗಳನ್ನು ನೋಡಿದರೆ ಇಲ್ಲಿ ಹೇಳಿರುವ ಕೆಳದಿಯ ಅರಸರ ಕಾಲಕರಾದಿಗಳು ಸತ್ಯವೆಂದು ಹೇಳ ಬೇಕಾಗುತ್ತದೆ , ರೈಸ ಮುಂತಾದ ಪಂಡಿತರೂ ಹಾಗೆಯೇ ಒಪ್ಪಿಕೊಂಡಿ ದಾರೆ. ಆದರೆ ಈ ಗ್ರಂಥದ ಮಧ್ಯದಲ್ಲಿ ಅಲ್ಲಲ್ಲಿ ಬರುವ ಇತರ ರಾಜರ

1 ಮನುಷ್ಯಮಾತ್ರನಾದವನ ಚರಿತ್ರೆಯನ್ನು ಬರೆದುದರಿಂದ ರಾಘವಾಂಕ ನನ್ನು ಅವನ ಮಾವನಾದ ಹರಿಹರನು ಶಿಕ್ಷೆ ಮಾಡಿದನೆಂದು ಹೇಳುತ್ತಾರೆ, 2 ಆದರೆ ಚೌಡಪ್ಪನಿಗೆ ಹಾವು ನಿಧಿಯನ್ನು ತೋರಿಸಿಕೊಟ್ಟುದು ದೊಡ್ಡ ಸಂಕಣ್ಣನಾಯಕನು ಡಿಳ್ಳಿಗೆ ಹೋಗಿ ಅಂಕುಶಖಾನನೊಡನೆ ಹೋರಾಡಿ ಅವನನ್ನು ಗೆದ್ದುದು, ಮುಂತಾದ ಕೆಲವು ಸಂಗತಿಗಳು ಕೇವಲ ಜನಜನಿತವಾದ ಕಥೆಗಳೆಂದು ತೋರುತ್ತದೆ,