ಪುಟ:Keladinrupa Vijayam.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vii ಯನಾಗಿದ್ದನೆಂದು ಅವನ ಕಾಲದಲ್ಲಿ ಹುಟ್ಟಿದ ಗ್ರಂಥಗಳಿಂದ ಗೊತ್ತಾಗು ತದೆ 1. ಇದರಿಂದ ಅವನ ಕಾಲದಲ್ಲಿಯೇ ಲಿಂಗಣ್ಣನ ಇದ್ದನೆಂದು ಹೇಳುವುದಕ್ಕಾಗುವುದಿಲ್ಲ, ಏಕೆಂದರೆ ಈ ಗ್ರಂಥದಲ್ಲಿ ಶಕ ೧೬v೫ ರ ವರೆಗೂ ನಡೆದ ಚರಿತ್ರೆಯಲು ಹೇಳಿದೆ. ಆದ್ದರಿಂದ ಈತನು ಎರಡನೆಯ ಬಸವಪ್ಪನ ಕಾಲದಲ್ಲಿ ಎಂದರೆ ಕ್ರಿ. ಶ. ೧೭೫೦ ರ ಸುಮಾರಿನಲ್ಲಿದ್ದನೆಂದು ಹೇಳಬಹುದು. ಈತನು ಜೀವಿಸಿದ್ದ ಕಾಲವನ್ನು ಖಂಡಿತವಾಗಿ ಗೊತ್ಮ ಮಾಡುವುದಕ್ಕೆ ಸದ್ಯದಲ್ಲಿ ಯಾವಸಾಧನಗಳೂ ದೊರೆತಿಲ್ಲ. ಈ ಗ್ರಂಥದ ಒಂದು ನಕಲನ್ನು ಶಕವರ್ಷ ೧೭೦೬ ನೆಯ ಕೆ ಧನ ಸಂವತ್ಸರದ ಆಷಾಢಮಾಸದಲ್ಲಿ ಮೇಜರ ಮೆಕಂಜೈಸಾಹೇಬರ ಕಡೆಯ ಮುತ್ಸದ್ದಿ ನಾರಾಯಣರಾಯರು ಬರೆಸಿಕೊಂಡು ಹೋದರೆಂದು ಬಂದು ಪ್ರತಿಯ ಕೊನೆಯಲ್ಲಿ ಬರೆದಿದೆ. ಇದರಿಂದ ಈ ಕಾವ್ಯವು ಶಕ ೧೬V-Hರ ಮೇಲೆ ಮತ್ತು ಶಕ ೧೭-೧೬ರ ಒಳಗೆ ಎಂದರೆ ಕ್ರಿ. ಶ. ೧೭೬೩ರ ಮೇಲೆ ೧vo೪ರ ಬಳಿಗೆ ಹುಟ್ಟಿತೆಂದು ಹೇಳಬಹುದು. ಹಳಗನ್ನಡದಲ್ಲಿ ಚರಿತ್ರೆಯನ್ನು ಇದ್ದದ್ದಿದ್ದ ಹಾಗೆ ಬರೆದ ಗ್ರಂಥ ಗಳೇ ಇಲ್ಲ. ಆದಿಪಂಪನನ್ನು ಮೊದಲುಮಾಡಿಕೊಂಡು ಅನೇಕ ಕವಿ ಗಳು ತಮಗೆ ಆಶ್ರಯದಾತರಾದ ರಾಜರಮೇಲೆ ತಮಗೆ ಆದ ಕತ ಜ್ಞತೆಯನ್ನು ತೋರಿಸುವ ಉದ್ದೇಶದಿಂದ ಚರಿತ್ರಾಂಶಗಳನ್ನು ಗರ್ಭಿ ಕರಿಸಿ ಕಾವ್ಯಗಳನ್ನೇನೋ ಮಾಡಿದ್ದಾರೆ. ಆದರೆ ಮೊದಲಿನಿಂದ ಕೊನೆ ಯವರೆಗೂ ರಾಮಾಯಣಭಾರತಾದಿ ಪುರಾಣ ಕಥೆಯನ್ನು ಅವಲಂಬನ ವಾಗಿಟ್ಟುಕೊಳ್ಳದೆ, ಕವಿಯ ಹಕ್ಕೆಂದು ಅತಿಶಯೋಕ್ಯಾಲಂಕಾರಗ ಳನ್ನು ತುಂಬದೆ, ರಾಜನ ಸಂಬಂಧವಾಗಿ ತಾವು ತಿಳಿದ ವಿಷಯಗಳನ್ನು ಯಥಾರ್ಥವಾಗಿ ಬರೆದಿಡಬೇಕೆಂಬ ಉದ್ದೇಶದಿಂದಲೇ ಬರೆದುವುಗಳಲ್ಲ. ಅವರು ಕವಿಗಳು ; ಚರಿತ್ರಕಾರರಲ್ಲ. ಅದಕ್ಕೋಸ್ಕರವೇ ಅವರ ಗ್ರಂಥ ಗಳು ಒಟ್ಟಿನಮೇಲೆ ಕಾವ್ಯಗಳ ಹೊರತು ಚರಿತ್ರೆಗಳಲ್ಲ. ಕನ್ನಡ ಸಾಹಿತ್ಯಕ್ಕೆ ಮಾತ್ರ ಸ್ವರೂಪವಾದ ಸಂಸ್ಕೃತದಲ್ಲಿಯೂ ನಡೆದುದನ್ನು 1 ೧೭೫ ಮತ್ತು ೧೬೬ ನೆಯ ಪುಟಗಳನ್ನು ನೋಡಿ, R