ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ ಮಾ ಶ್ಚಾ ಸ೦ ಆ ವೀರಭದ್ರನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರ್ಷ ೧೫೬ನೆಯ ಪಾರ್ಥಿವ ಸಂವತ್ಸರದ ಮಾರ್ಗಶಿರ ಶುದ್ಧ ೧೦ಯಲ್ಲಿ ಚಿಕ್ಕಸಂಕಣನಾಯಕರ ಮಗ ಸಿದ್ದಪ್ಪನಾಯಕರ ಜೇಷ್ಠ ಕುಮಾರ ರಾದ ಶಿವಪ್ಪನಾಯಕರ್ಗೆ ವೇಣುಪುರದ ಅರಮನೆಯಲ್ಲಿ ರಾಜಪಟ್ಟಣ, ಇಂತು ನೆಗಳ್ವೆ, ಸಮುದಗ್ರಪರಾಕ್ರಮಿ ವೀರಭದ್ರನೂ ಕಾಂತನನಂತರಂ ರಿಪುಕನಾದಳೀವನಗಂಧಸಿಂಧುರಂ | ಏಂತಣ ರಾಯರಿಂ ಶತಗುಣಾಧಿಕಮಾದತಿಶೌರದೇ ಯಿಂ ಸಂತರೊಡಂಬಡಲ್ಲರೆಯನಾಳನುದಾರಶಿವವನೇಶ್ವರಂ ||೧ ಅದೆಂತನಲಾ ಶಿವಪ್ಪನಾಯಕರೆ ತಮ್ಮ ಪಿತಾಮಹನಾದ ಚಿಕ್ಕ ಸಂಕಣನಾಯಕರ ಅಗ್ರಜರಾದ ದೊಡ್ಡ ಸಂಕಣನಾಯಕರ ಪ್ರಪೌತ್ರ ರಾದ ವೀರಭದ್ರನಾಯಕರಾಳಿಬರುತಿರ್ದ ದೇಶ ಕೋಶ ಪ್ರಜೆ ಪರಿವಾರ ಪರಿಸ್ಕರಣ ಪರಿಜನ ಪುರಜನ ಬಂಧುಜನ ಮಂತ್ರಿ ಸಾಮಾಜಿಕ ನಿಯೋಗಿ ಜನ ಸೇವಕಜನರ್ಮುಂತಾದ ಸಮಸ್ತ ಜನರು ಪಾಲಿಸುತ್ತು, ತಮ್ಮನುಜ ವೆಂಕಟಪ್ಪನಾಯಕರಂ ಪ್ರೀತಿಯಿಂ ನಡೆಸಿಕೊಳುತ್ತು, ತಮ್ಮ ಸಹೋದರಿ ಪರಮೇಶ್ಚರಮ್ಮನನ್ನು ...... ವಿವಾಹಮಂ ರಚಿಸಿ ನಾಗಾಜಮ್ಮನೆಂಬನುಜೆಯಂ .......ಗಿತ್ತು ವಿವಾಹಮಂ ರಚಿಸಲಾಷೆ ೯ಣಿಯೊಳೊರ್ವ ಕುಮಾರನುದಿಸಲಾ ಕುಮಾರಂಗೆ ಅಳಿಯ ಶಿವಲಿಂಗ ನಾಯಕನೆಂದು ನಾಮಕರಣಮಂ ರಚಿಸಿ ಫೋಸುತ್ತು, ಮತ್ತು ತಮ್ಮ ಕನಿಷ್ಠ ಸಹೋದರಿಯಾದ ಚನ್ನ ಮನೆಂಬ ಪೆಣ್ಮಣಿಯಂ ಮೈದುನಕೆಂಚಣ್ಣಂಗಿತ್ತು ವಿವಾಹಮಂ ರಚಿಸಲಾ ಚನ್ನಮ್ಮನ ಗರ್ಭ ದೊಳೆ ಸಿದ್ದಯ್ಯನೆಂಬ ಕುಮಾರನುಂ ಸಿದ್ದಮ್ಮ ಗೌರಮ್ಮ ನೆಂಬಿವ ರ್ಪಣತಿಗಳುಮುದಿಸಲವರುಮಂ ಸಂರಕ್ಷಿಸುತ್ತುವಾಶಿವಪ್ಪನೆಯ