________________
108 ಕೆಳದಿನೃಪವಿಜಯಂ ಸೋಮಶೇಖರನಾಯಕರ್ವೆರಸು ಸುಖವಿರುತುಂ ನಾಸೆಯೊಳಿರ್ಪ ವರ್ತಕ ಪೈರುದಾರ ಗಂದಿಗೆ ಕೊಂಕಣಿಗರ್ರುಂತಾದ ಮಹಾನಾಡವರಂ ಬರಿಸಿ ವೇಣುಪುರವರದೊಳೆ ಸ್ಥಳ ನಿವೇಶನಪೇಟೆಸಾಲ ಕ್ಲುಪ್ತಿಗಳಂ ಮಾ ಡಿಸಿ ಸ್ಥಿರಲೇಖನಂಗಳಂ ಬರೆಸಿತ್ತು ಮತ್ತಮದಲ್ಲದೆ, ಚಿತ್ರಕ ಶಿಲ್ಪಕ ವರ್ಣಕ ಕಾಂಸ್ಯಕಾರ ತೈಲಯಂತ್ರಿಕ ಕುಂಭಕಾರ ಸ್ವರ್ಣಕಾರ ವರ್ಧಕಿ ಕಾರಕ ವಸ್ಯ ಶೋಧಕ 1 ದಿವಾಕೀರ್ತಿಕ (ಮುಂತಾದ) ನಾನಾ ಕೈವಾಡ ಕರಣಚಮತ್ಕಾರವಿಶಾರದರಾದ ನಾನಾವಿಧಜಾತಿಜನ ರ್ಗಾಸ್ಪದನಿವೇಶನಂಗಳಂ ಕಲ್ಪಿಸಿಯವರ್ಗಳಂ ಸ್ಥಾಯಿಗಳಾಗಿ ನಿಲಿಸಿ, ಈ ಪ್ರಕಾರದಿಂ ವೇಣುಪುರಮಂ ಬಹುವಿಧರಚನೆಗಳಿ೦ ವಿಸ್ತಾರಂಗೈಸಿ, ಬ್ರಹ್ಮಕ್ಷತ್ರಿಯಾದಿ ವರ್ಣಾಶ್ರಮಾಚಾರ ಧರ್ಮ-ಕರ್ಮಂಗಳಂ ಶ್ರುತಿ ಸ್ಮೃತ್ಯುಕ್ಮಾರ್ಗೋಲ್ಲಂಘನವಾಗದಂತು ನಡೆಯಿಸಿ, ಶೈವವೈಷ ವಾದಿ ಪಡ್ಡರ್ಶನವರ್ತಿಗಳಂ ತದುಕ್ತಮಾರ್ಗದೊಳ್ಳಡೆವಂತು ನಿಯಾ ಮಕಂಗೈಸಿ, ಸ್ವರಾಷ್ಟ್ರ ಸ್ಥಿತ ಸಮಸ್ತ ಜನರೊಳೆ ಜಾತಿಸಂಕರವಾಗಿ ನಡೆಯದಂತಾಜಾ ಸಿನಿ ತಾಂ ಧರ್ಮದಿಂ ರಾಜ್ಯಭಾರವಿಚಾರತತ್ಪರರಾಗಿ ರಾಜಧರ್ಮದಿಂ ವರ್ತಿಸುತ್ತು ಮಿದು~ ಕತಿಷಯದಿನಂಗಳೊಗಿ ಡನೆ | ವಸುಧಾರೆಯ ಕೊಂಟೆನಾ ವಸುಧೀಶಂ ಕೊಂಡು 2 ಸಕ್ಕರೆಯಪಟ್ಟಣವಂ || ಮರ್ವರೊಳ್ ಬಸವ್ರರ ಸೋಮಯ್ಯನ ಕುಮಾರಿ ಭದ್ರಜಿಯವರ ಗರ್ಭ ದೊಳೊರ್ವ ಕುಮಾರಿಯುದಿಸಲಾ ಕುಮಾರಿಗೆ ಬಸವಲಿಂಗವಾಜೆಯೆಂದು ಹೆಸ ರಿಟ್ಟು ಆ ಬಸವಲಿಂಗಮ್ಮಾಜಿಯಂ ಕೊರಾನ್ಮದ ಶಿವಲಿಂಗದೇವರ ಶಿಷ್ಯ ಬಸವ ಲಿಂಗಯ್ಯಂಗೆ ವಿವಾಹಮಂ ರಚಿಸಲಾ ಬಸವಲಿಂಗಮ್ಮಾಜಿಯ ಬಸಿರೊಳೊರ್ವ ಕುವಾಲಯದಿಸಲಾ ಕುಮಾರಿಗೆ ಸೋಮಮ್ಮನೆಂದು ಹೆಸರಿಟ್ಟು, ಸೋಮಮ್ಮನಂ ಗರಜಿನ ಚನ್ನವೀರವೊಡೆಯರ್ಗೆ ವಿವಾಹಮಂ ರಚಿಯಿಸಿದರೆ, (ಕ) • 1 ವಸ್ಯ ಚೋದಕ [ಒ] 2 ಸರ್ವಜಿತ್ಸಂವತ್ಸರದಿಂ ಸಾಹಸಂಗೈದು ಖರಸಂವತ್ಸರದಿ (*)