ಈ ಪುಟವನ್ನು ಪ್ರಕಟಿಸಲಾಗಿದೆ
ಒಳಜನ್ಯ ಖಿನ್ನತೆ | ಹೊರಜನ್ಯ ಚಿತ್ತಚಂಚಲತೆಯ ಖಿನ್ನತೆ |
---|---|
ರೋಗಿಗಳಿಗೆ ಒಂಟಿಯಾಗಿ ಇರಲು ಇಷ್ಟ. | ಜನರ ಜೊತೆಯಲ್ಲಿರಲು ಇಷ್ಟ. |
ಪರಿಸರದ ಗುಣಮಟ್ಟವು ರೋಗಿಯ ಮೇಲೆ ಯಾವ ಪರಿಣಾಮವೂ ಬೀರದು | ಪ್ರಚೋದಕ, ಸಂತೋಷ ದಾಯಕ ಪರಿಸರದಿಂದ ವ್ಯಕ್ತಿ ಸ್ವಲ್ಪ ಗೆಲುವಾಗಿರುತ್ತಾನೆ. |
ಖಿನ್ನತೆ ಬೆಳಿಗ್ಗೆ ಹೆಚ್ಚಾಗಿರುತ್ತದೆ. | ಖಿನ್ನತೆ ಸಂಜೆ-ರಾತ್ರಿಗೆ ಹೆಚ್ಚಾಗುತ್ತದೆ. |
ಬೆಳಗಿನ ಜಾವಕ್ಕೆ ಎಚ್ಚರವಾಗಿ ಮತ್ತೆ ನಿದ್ದೆ ಬರುವುದಿಲ್ಲ. (LATE INSOMNIA) | ನಿದ್ರೆ ಬರಲು ಕಷ್ಟ ಅಥವಾ ಮಧ್ಯೆ ಮಧ್ಯೆ ಎಚ್ಚರ (INITIAL MIDDLE INSOMNIA) |
ತೂಕ ಕಡಿಮೆಯಾಗುತ್ತದೆ. | ತೂಕ ಹೆಚ್ಚಬಹುದು. |
ನಿರಾಶೆಯ ತೀವ್ರತೆ ಹೆಚ್ಚು. | ಕಡಿಮೆ ನಿರಾಶೆ. |
ಹೆಚ್ಚು ಅಸಹಾಯಕತೆ, ಇವರ ಬೇಕು ಬೇಡಗಳನ್ನು ಇತರರು ಗಮನಿಸಬೇಕು. ಪರಾವಲಂಬನೆ ಹೆಚ್ಚು. | ತನ್ನ ಬೇಕು ಬೇಡಗಳನ್ನು ರೋಗಿ ಗಮನಿಸುತ್ತಾನೆ. |
ಚಲನೆ ನಿಧಾನ. | ಚಲನೆ ಮಾಮುಲು. |
ಅನಾಸಕ್ತಿ ತೀವ್ರ | ಕಡಿಮೆ/ಸಾಧಾರಣ ಅನಾಸಕ್ತಿ |
ಆತ್ಮಹತ್ಯೆಗೆ ತೀವ್ರ ಬಗೆಯ ವಿಧಾನಗಳ ಆಯ್ಕೆ (ನೇಣು, ಆಸಿಡ್, ಪಿಸ್ತೂಲು, ಅತೀ ಎತ್ತರದ ಕಟ್ಟಡದಿಂದ ಕೆಳಕ್ಕೆ ಹಾರುವುದು). | ಕಡಿಮೆ/ಮಧ್ಯಮ ಮಟ್ಟದ ವಿಧಾನಗಳ ಆಯ್ಕೆ. |
ಪಾಪಪ್ರಜ್ಞೆ ಹೆಚ್ಚು. | ಪಾಪಪ್ರಜ್ಞೆ ಕಡಿಮೆ. |
ಚಿತ್ತವಿಕಲತೆ ಲಕ್ಷಣಗಳು (ಭ್ರಮೆ) | ಭ್ರಮೆಯಿಲ್ಲ. |
24 / ಖಿನ್ನತೆ: ಬನ್ನಿ ನಿವಾರಿಸೋಣ