ಪುಟ:Mrutyunjaya.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೦೩ ಉತ್ತರ ಬಂದುದು ಖೈಮ್ ಹೋಟೆಪ್‌ನಿಂದ :
“ ನಾವು ಮಾಡ್ತಿರೋದು ಎಲ್ಲರ ಒಳ್ಳೇದಕ್ಕೆ. ಒಪ್ದೆ, ಏನ್ಮಾಡ್ತಾರೆ ?
ಅಷ್ಟಕ್ಕೂ ನಮ್ಮ ತಂದೆ ಅಲ್ವಾ ಅವರು ? ಒಮ್ಮೆಯಾದರೂ ನಮ್ಮ
ಪ್ರಾಂತಕ್ಕೆ ಬಂದಿದ್ರಾ ? ಬರಲಿ, ಮಾತಾಡೋಣ.
ಆತ ಮಾತು ಮುಗಿಸುವಷ್ಟರಲ್ಲಿ, “ ಅನ್ಪು ಹ್ಯಾಗೆ ಹ್ಯಾಗೋ ಮಾಡ್ತಿ
ದಾನೆ” ಎಂಬ ಕಳವಳದ ಸುದ್ದಿಯೊಡನೆ ಇಬ್ಬರು ಬಂದರು. ಎಲ್ಲರೂ
ಹೊರಡಲು ಎದ್ದರು.

  • * * *

ಮಧ್ಯಾಹ್ನದ ವೇಳೆಗೆ ಅನ್ಪು ತೀರಿಕೊಂಡ. ಶ್ರಮ ಪಟ್ಟು ದುಡಿಯು
ತ್ತಿದ್ದ, ನ್ಯಾಯ ನಿಷ್ಟುರನಾಗಿದ್ದ ಯುವಕ ಅವನು.
“ ನನಗೇ ತಗಲಬಹುದಾಗಿತ್ತು ಬಾಣ. ಬದಲು ಅವನಿಗೆ ನೆಟ್ಟಿತು,”
ಎಂದ ಸೊಪ್ಪು ದುಃಖಿಸುತ್ತ.
ಹಿಂದಿನ ದಿನದ ಘಟನೆಗಳೆಲ್ಲ ಕಣ್ಣಿಗೆ ಕಟ್ಟಿದಂತಾಗಿ ಮೆನೆಪ್‌‍ಟಾ ಬಿಕ್ಕಿ
ಬಿಕ್ಕಿ ಅತ್ತ, ಅವನಿಗನಿಸಿತು : ಬೆಲೆ ತೆರದೆ ಯಾವ ವಿಜಯವೂ ಇಲ್ಲ; ತ್ಯಾಗ
ವಿಲ್ಲದೆ ಯಾವ ಸಾಧನೆಯೂ ಇಲ್ಲ.
ಸೊಫ್ರುವಿನ ಪತ್ನಿ ನೆಜಮುಟ್__ ಮಕ್ಕಳಿಲ್ಲದ ಜೀವ__ ಅನ್ಪುವಿನ
ವಿಧವೆಯನ್ನು ಸಂತೈಸಿದಳು.
“ ಅಳಬೇಡ, ನಿಮ್ಮನ್ನೆಲ್ಲ ನಾವು ನೋಡ್ಕೊತೇನೆ.”
ಶವವನ್ನು ಸೆಬೆಕ್ಕುವಿನ ಮನೆಯಿಂದ ಅದ್ಭುವಿನ ಪುಟ್ಟ ಗುಡಿಸಲಿಗೆ
ಒಯ್ದರು. ಅಲ್ಲಿ ಮಗ್ಗದಲ್ಲಿತ್ತು ಅರ್ಧ ನೇಯ್ದು ಬಿಟ್ಟಿದ್ದ ಸೆಣಬಿನ ಬಟ್ಟೆ.
ಹಿಂದಿನ ದಿನ ನೇಯ್ಯುತ್ತ ಕುಳಿತಿದ್ದ ಅನ್ಪು ಗದ್ದಲ ಕೇಳಿಸಿದೊಡನೆ, ಕೆಲಸವನ್ನು
ಅಲ್ಲಿಗೇ ನಿಲ್ಲಿಸಿ ಹೊರಟಿದ್ದ. ಶವ ಬಂದೊಡನೆ ಜನ ನೆರೆದಿದ್ದರು. ಸಂದಣಿ
ವಿಪರೀತವಾಗಿ ಹೊರಕ್ಕೆ ಹರಿಯಿತು. ಬೀದಿಯ ಉದ್ದಗಲಕ್ಕೂ ಅದು
ದಟ್ಟೈಸಿತು.
"ಸಾವಧಾನ ! ತಳ್ಳಬೇಡಿ ! ಶಿಸ್ತು ಪಾಲಿಸಿ !” ಎಂದು ಖ್ನೆಮ್
ಹೊಟೆಪ್ ಜನಜಂಗುಳಿಯ ಎಡೆಗೆ ಕೂಗಿ ಹೇಳಿದ.