ಪುಟ:Mrutyunjaya.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೧೪೯; ಮಾತನಾಡುವ ಓಡಾಡುವ ಜನರು ಹೊರಗೆ. ನದಿಯ ಕಡೆಗೆ ಹೊರಟವರು.
ನೆಫಿಸ್ ಏಳು. ರಾಮೆರೀನ ಎಬ್ಬಿಸು. ಹೋತ್ತಾಯ್ತು
ಕ್ಷೀಣವಾಗಿ ಆರಲು ಚಡಪಡಿಸುತ್ತಿದ್ದ ಕೆ೦ಡಗಳಿ೦ದಲೇ ಮೆನೆ‍ಪ್‍ಟಾ ದೀಪ ಹಚ್ಚಿದ.
ಸೊಥಿಸ್ ಕಾಣಿಸ್ಕೊಳ್ತಾ ? ಎಲ್ಲಿ ? ಎನ್ನುತ್ತ ಗಡಬಡಿಸಿ ಎದ್ದ, ರಾಮೆರಿಪ್‍‍ಟಾ.
ಸ್ನಾನದ ಬಳಿಕ ಉಡಲು ಹೊಸ ಉಡುಪನ್ನು ನೆಫಿಸ್ ಎತ್ತಿಕೊಂಡಳು. ಅನ್ಪುವಿನ ವಿಧವೆ ನೆಫಿಸಳಿಗೆಂದೇ ನೆಯ್ದು ಪ್ರೀತಿಯಿಂದ ಕೊಟ್ಟಿದ್ದ ಮೇಲುದವೂ ಆ ಕಟ್ಟಿನಲ್ಲಿ ಇತ್ತು.
ಹೊರಗೆ ತಮ್ಮ ಮನೆಯ ಮುಂದುಗಡೆ ಸ್ನೋಫು, ನೆಜಮುಟ್ ಹೊರಡಲು ಅನುವಾಗಿ ನಿಂತಿದ್ದರು ಎಲ್ಲರೂ ಒಟೈಗೆ ನದಿಯ ಕಡೆಗೆ ನಡೆದರು
ಬೀದಿಯ ಕೊನೆಯಲ್ಲಿ ಒಬ್ಬ ಕಾವಲು ಭಟನನ್ನು ಕಂಡು ಸ್ನೊಫ್ರುವಿಗೆ ಸಂತೋಷವಾಯಿತು.
“ಎಲ್ಲರೂ ನದೀಸಾನಕ್ಕೆ ಹೋದಾಗ ಕಳ್ಳರು ಬರಬಹುದು ಅ೦ತ ಖೈಮುಗೆ ಹೇಳಿದ್ದೆ. ಆ ವಿಷಯ ನೀವು ಚಿ೦ತಿಸ್ಲೇಬೇಡಿ ಎಂದಿದ್ದ."
"ನಾವಂತೂ ಬಾಗಿಲಿಗೆ ಬೀಗಮುದ್ರೆ ಒತ್ತಿಲ್ಲ," ಎಂದಳು ನೆಸಿಫ್.
ನೆಜಮುಟ್ ಅಂದಳು : "ನಾವೂ ಇಲ್ಲ."
ನದೀ ತಟದಲ್ಲಿ ಖೈಮ್ ಮತ್ತು ಬಟಾ ಇವರಿಗಾಗಿ ಕಾಯುತ್ತಿದ್ದರು.
ಇಳಿದನಿಯಲ್ಲಿ ಖೈಮ್‍ಹೊಟೆಪ್ ವರದಿಮಾಡಿದ :
“ ನಾವು ಗಸ್ತಿ ಮುಗಿಸಿ ಬಂದ ಸ್ವಲ್ಪ ಹೊತ್ನಲ್ಲೇ ಓಡಿಹೋದ್ರು. ಜತೇಲಿ , ಹೆ೦ಡತಿ ಮಕ್ಕಳು ಒಬ್ಬಿಬ್ಬರು ದಾಸದಾಸಿಯರು. ಸಿನ್ಯುಹೆ ಮಾತ್ರ ಇಲ್ಲೇ ಇದ್ದಾನೆ. ನುಟ್‍ಮೋಸನ ಕುಟುಂಬವೂ ಇದೆ. ಆಭರಣ ಬೆಲೆ ಬಾಳೋ ಸಾಮಾನು ತಗೊ೦ಡು ಹೋಗಿದ್ದಾರೆ. ಬಿತ್ತನೆ ಹೊತ್ತಿಗೆ ೧೦