ಪುಟ:Mrutyunjaya.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್‍ಯುಂಜಯ “ಯಾರನ್ನು ಕಾಣಬೇಕು?” “ಪ್ರಾಂತದ ನಾಯಕರನ್ನು.” “ನಮನ್ನು ಅನುಸರಿಸಿ ರಾಜಗೃಹಕ್ಕೆ ಬನ್ನಿ. ಇನ್ನೆರಡು ತಾಸು ಬಿಟ್ಟು ನಾಯಕರು ಅಲ್ಲಿಗೆ ಬರಾರೆ.” ದೂತ ನಸುನಕ್ಕ. ಸಶಸ್ತ್ರ ಭಟರು ಭುಜ ಕುಣಿಸಿದರು. "ಆಗಬಹುದು. ಮುಂದೆ ನಡೀರಿ."

ಖೈಮ್ ಹೊಟೆಪ್ బంದು ತಿಳಿಸಿದಾಗ ಮೆನೆಒಟಾ ತನ್ನ ನೇಗಿಲ ಮೊನೆಯನ್ನು ಮೊನೆಯನ್ನು ಸರಿಪಡಿಸುತ್ತ ಕುಳಿತಿದ್ದ. ಕೆಲಸವನ್ನು ಮುಂದುವರಿಸುತ್ತ ಅವನೆಂದ ;

"ಪೆರೊనింది ಸಂದೇಶ ತಂದಿರಬಹುದು." ನೆಫಿಸಳ ಮುಖದ ಮೇಲೆ ಕಾತರದ ಭಾವನೆ. ಮೆನೆಪ್ಟಾ ಅಸಾಧಾರಣವಾದುದೇನೂ ನಡೆದಿಲ್ಲ ಎನ್ನುವಂತೆ, ಶಾಂತ ಸ್ವರದಲ್ಲಿ ಅಂದ : "ವರ್ತಕ ಕೆಫ್ಟು, ಕಾರ್ಯಜಾಣ." “ಖ್ನೆಮ್ ನುಡಿದ : "ಮಾತು ಕೊಟ್ಟಂತೆ ಬಂದೇ ಬರ್‍ತಾನೆ. ಶಸ್ತ್ರಾಸ್ತ್ರಗಳನ್ನು ತರ್‍ತಾನೆ-ಅನಿಸ್ತದೆ" "ಹೂಂ. ಹೂಂ." ನೆಫಿಸಳ ಕಣ್ಣಿಗೆ ಕಟ್ಟಿತು, ಆಬ್ಟು ಬೆಟ್ಟದ ಮೇಲೆ ಮೆರವಣಿಗೆಯಲ್ಲಿ ತಾನು ಕಂಡಿದ್ದ ಪೆರೋನ ಚಿತ್ರ. ಭೂಮಿಯ ಮೇಲಣ ದೇವಪ್ರತಿನಿಧಿ. ಆತ ನಿಂದ ತನ್ನ ಪತಿಗೆ ಸಂದೇಶ. ಬೆಸ್ ದೇವತೆಯನ್ನು ಆಕೆ ಸ್ಮರಿಸಿದಳು. ಗಂಡಾಂತರಗಳನ್ನು ದೂರ ಮಾಡು ಎಂದು ಮನಸ್ಸಿನಲ್ಲೇ ಪಾರ್ಥನೆ ಸಲ್ಲಿಸಿದಳು. “ಸ್ನೊಫ್ರು, ಸೆಬೆಕ್ಖು; ಹಿರಿಯರನ್ನೆಲ್ಲ ರಾಜಗೃಹಕ್ಕೆ ಬರಹೇಳು," ಎಂದು ಮೆನೆಪ್ಟಾ ಖ್ನೆಮ್ಗೆ. ಖೈಮ್ ಹೊಟೆಪ್ ಹೊರಟು ಹೋದ ಸ್ವಲ್ಪ ಹೊತ್ತಿನಲ್ಲೇ ರಾಮೆರಿಪ್