ಪುಟ:Mrutyunjaya.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯಂಜಯ

೧೮೯

ಮರಳು ಕಣ ಬಿದ್ದರೂ ಸಪ್ಪಳವಾಗುವ ಮೌನ. ಮೆನೆಪ್ಟಾ ಸುತ್ತಲೂ
ನೋಡಿದ .ಇವರನ್ನೆಲ್ಲ ಬಲ್ಲೆ--ಎನಿಸಿತು; ಇಲ್ಲ, ಇವೆಲ್ಲ ಅಪರಿಚಿತ ಮುಖ
ಗಳು ಎಂದೂ ತೋರಿತು. ಇದಲ್ಲವೆ ನಿರೀಕ್ಷೆಯ ನೋಟ ? ನಿರೀಕ್ಷೆಯನ್ನು
ಈಡೇರಿಸುವುದು ఎಷ್ಟು ಕಷ್ಟ !
ಉಮ್ಮಳ, ಉಸಿರಾಟಕ್ಕೂ ತೊಡಕು. ಎನಾದರೂ ಹೇಳಬೇಕು.
ಏನನ್ನಾದರೂ.
ಇದ್ದಕ್ಕಿದ್ದಂತೆ, ಬಿಗಿಯುತ್ತಿದ್ದ ಗಂತಟಲನ್ನು ಭೇದಿಸಿಕೊಂಡು ಧ್ವನಿ:
“ ನಾನು-ನಾನು–ಮೆಂಫಿಸ್ ಗೆ ಹೋಗಿ ಬರ್ತೇನೇ."
ಮೆನೆಪ್ಟಾ ವೇದಿಕೆಯಿಂದ ಕೆಳಕ್ಕೆ ಜಿಗಿದ. ತನ್ನವರೇ ಆದ ಜನರ
ತೋಳ ತೆಕ್ಕೆಗೆ.ಅಶ್ರು ಅವನ ಎರಡು ಕಪೋಲಗಳಿಂದಲೂ ಬಿಕ್ಕುತ್ತ
ಬಿಕ್ಕುತ್ತ ಧುಮ್ಮಿಕ್ಕಿತು
. ಈತ ರಾಮೆರಿಪ್ಟಾ. ಈಕೆ ನೆಫಿಸ್.
ಮಗನನ್ನು ಬರಸೆಳೆದು ನೆತ್ತಿಯನ್ನು ಮೂಸಿದ.. (' ಎತ್ತರಕ್ಕೆ ಬೆಳೀತಿ
ದ್ದಾನೆ.') ನೆಫಿಸಳ ತೋಳು ಮುಟ್ಟಿದ, అంಗೈ ಬೀಸಿದ.
ದೋಣಿಯಲ್ಲಿ ಗಡಿಯಾರವಿದ್ದ ಪೆಟಾರಿ. ಬಟ್ಟೆಬರೆಗಳೂ ಮೌಲ್ಯ
ವಿನಿಮಯದ ಕೆಲ ಸಾಮಗ್ರಿಗಳೂ ಇದ್ದ ಇನ್ನೊಂದು ಪೆಟಾರಿ, ಎಣಿಕೆ ಕಷ್ಟ
ವಾಗುವಷ್ಟು బుತ್ತಿಯ ಗಂಟಳನ್ನು, ಹುಟ್ಟ ಹಾಕುವವರು.
ಮೆನೆಪ್ಟಾ ದೋಣಿಯನ್ನೇರಿದ.ಕಣ್ಣುಗಳಲ್ಲಿ ನೀರು.ಮಂಜು
ಕವಿದಂತೆ ನೋಟ. ದೋಣಿ ಏರುತ್ತಿರುವ ಈ ಇಬ್ಬರು ? ಹಾಂ. ಔಟ,
ಬೆಕ್........
ಜನಜಂಗುಳಿಯಿಂದ ಹುಡುಗರ ಧ್ವನಿ ಕೇಳಿಸಿತು :
" ಔಟ.....ಬೆಕ್...."
ಬಟಾನ ಹೆಂಡತಿ ಸಾಮಾನ್ಯವಾಗಿ ದಂಡೆಗೆ ಬರುತ್ತಿರಲಿಲ್ಲ. ಇಂದು
ಆಕೆಯೂ ಇದ್ದಳು, ಎಲ್ಲ ಮಕ್ಕಳ ಜತೆಗೆ ಬಟಾನ ನೌಕರರ ಸಂಸಾರಗಳೂ
ಇದ್ದುವು.
ಅಂತ್ಯ ಕಾಣದ ಬೀಳ್ಕೊಡುಗೆ.