ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ ೧೧
"ಅವರು ಬಹಳ ನಿಯತಿನ ಮನುಷ್ಯ."
"ಹಾಗೋ? ಪಾಠ ಹೇಳೋದಕ್ಕೆ ಲಾಯಕ್ಕು. ನಿಮ್ಮ ಹುಡುಗನಿಗೆ ಅವನ ಕೈಲೇ ಪಾಠ ಹೇಳ್ಸಿ."
ವಿನಿಮಯ ಮುಗಿಯಿತು. ಸುರುಳಿಯನ್ನೂ ಒಳಗೊಂಡ ಗಂಟನ್ನು ನೆಫಿಸ್ ತನ್ನ ತಲೆಗೆ ಏರಿಸಿದಳು. ಆ ಮೂವರನ್ನೂ ಬೀಳ್ಕೊಡುತ್ತ ಲಿಪಿಕಾರ ಗಟ್ಟಿ ಸ್ವರದಲ್ಲಿ ನುಡಿದ: " ನನ್ನ ಹೆಸರು ಲಿಪಿಕಾರ ಅಮೋಸೆಸ್. ಮರಿಬೇಡಿ ! ನನಗೆ ಸಮಾ
ನರು ಆಬ್ಟುವಿನಲ್ಲಿ ಬೇರೆ ಯಾರೂ ಇಲ್ಲ. ಎಲ್ಲರಿಗೂ ತಿಳಿಸಿಬಿಡಿ. ಕುಡುಕರ ಹಾಡು,ಪ್ರಣಯ ಗೀತೆ___ಎಲ್ಲಾ ಇನೆ. ಬೆಲೆಯೂ ಕಮ್ಮಿ.......ಹೋಗಿ ಬನ್ನೀಪ್ಪಾ..."
ರಾಮೆರಿಪ್‍ಟಾ,ಅವನ ತಾಯಿ,ತಂದೆ___ಮೂವರಿಗೂ ನಗು ಬಂತು. ಮಾರ್ಗ ಕ್ರಮಿಸುತ್ತ ಮೆನೆಪ್‍ಟಾ ಅಂದ : "ಎಷ್ಟೊಳ್ಳೆ ವಿಚಾರ ಇದೆ ಆ ಸುರುಳೀಲಿ ! ಯಾವ ಕಾಲದಲ್ಲೋ ಯಾರೋ ಆಡಿದ ಮಾತು. ನಿನ್ನ ತಾಯಿ ನಿನಗಾಗಿ ಏನೇನು ಮಾಡಿದ್ದಾಳೆ ಅನ್ನೋದನ್ನು ಎಂದೂ ಮರೀಬಾರ್ದು....ಅವಳನ್ನು ಮರೆತರೆ ಆಕೆ ನಿನ್ನನ್ನು ದೂರಬಹುದು. ದೇವರಿಗೆ ಅದು ಗೊತ್ತಾಗ್ಬಹುದು." ಅಭಿಮಾನದಿಂದ ಬೀಗುತ್ತ ನೆಫಿಸ್ ದನಿಗೂಡಿಸಿದಳು : " ಕೇಳಿಸ್ಕೊಂಡ್ಯಾ ರಾಮೆರಿ ?" " ಹೂಂ, ಹೂಂ. ಆದರೆ ಆಪ್ಪ ಅವತ್ತು ಹೇಳಿದ ಹೋರಸ್ ಕಥೇಲಿ
ತಂದೆ ತಾಯಿ ಇಬ್ರನ್ನೂ ಹೋರಸ್ ಮರೀಲಿಲ್ಲ."
ಸಣ್ಣಗೆ ನಕ್ಕು ಮೆನೆಪ್‍ಟಾ ಆಂದ :
“ ಅದು ಒಳ್ಳೆ ಮಕ್ಕಳ ಲಕ್ಷಣ ”
ಹುಡುಗನೆಂದ:
"ಅಪ್ಪ, ನಾನು ಒಳ್ಳೇ ಮಗನೆ !ಗೋಲಿ ಕೊಡಿಸ್ಬಿಡು !”
* * * * "ವೀರರ ವೀರ ಹೋರಸ್ ಉಘೇ ! ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೇ !