ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೨೦೯
“ಎರಡನೇದು, ನಮ್ಮಿಷ್ಟದ ಹಾಗೆ ಇಲ್ಲಿಂದ ಹೊರಗೆ ಹೋಗೋದಕ್ಕೂ ಒಳಗೆ ಬರೋದಕ್ಕೂ ನಮಗೆ ಸ್ವಾತಂತ್ರ್ಯ ಇದೆಯೊ ?” “ಇಲ್ಲ ಅನಿಸುತ್ತಾ ?" "ಗೇಬು ಹೋಗುತ್ಲೇ ದ್ವಾರ ಮುಚ್ಚಿದ್ರು.ನಾವು ಒಳಗೆ ಬಂದೆವಲ್ಲ?
ಅದನ್ನು.”
ಮೆನೆಪ್ ಟಾನ ಹಣೆ ನೆರಿಗೆ ಕಟ್ಟಿತು. ಒಂದು ಕ್ಷಣ ಸುಮ್ಮನಿದ್ದ.
ನೆರಿಗೆ ಸಡಿಲಗೊಂಡಿತು. ನಸುನಕ್ಕು ಅವನೆಂದ:
" ನೀರಾನೆ ಪ್ರಾಂತದ ಸಾರಿಗೆ ಮುಖ್ಯಸ್ಥ ಬಟಾ ತಟ್ಟಿದಾಗ ಎಲ್ಲ ಬಾಗಿಲುಗಳೂ ತೆರೆದುಕೊಳ್ಳಲೇ ಬೇಕು.” “ನಿನಗೆ ಪರಿಹಾಸ್ಯ. ಅತಿಥಿಗೃಹಕ್ಕೆ ಕಾರಾಗೃಹ ಬಹಳ ಹತ್ತಿರ, ಔಟ, ಬೆಕ್-ನಾವು ಹುಷಾರಾಗಿರ್ಬೇಕು.” ಹೌದು ಎನ್ನುವಂತೆ ತಲೆ ಆಡಿಸಿದರು ಅಂಗರಕ್ಷಕರು. “ದೋಣಿಕಟ್ಟೆಗೆ ಹೋಗಿ ಕಾಣಿಕೆ ಪೆಟಾರಿ ಮತ್ತು ನಮ್ಮ ಪೆಟಾರಿ ತರ ಬೇಕಲ್ಲ,” ಎಂದು ಮೆನೆಪ್ ಟಾ ವಿಷಯಾಂತರಿಸಿದ. “ನಾನೇ ಹೊತ್ತು ತಂದೇನು. ಅದಕ್ಕೆ ಇವರ ಕತ್ತೆ ಬೇಕು ?” “ಹಾಗಲ್ಲ ಬಟಾ, ಅವರ ಆತಿಥ್ಯವನ್ನು ಸ್ವೀಕರಿಸುವಾಗ ಕತ್ತೆ ಯಾಕೆ ಬೇಡ? ಅದು ಸಾಧು ಪ್ರಾಣಿ. ಯಾರನ್ನು ಬೇಕಾದರೂ-ಯಾರ ಸಾಮಾನು ಬೇಕಾದರೂ-ಹೊರ್ತದೆ.” "ಸರಿ.ಅಗಲಿ " “ದೋಣಿಯ ಜವಾಬ್ದಾರಿ ಕಟ್ಟೆಯ ಅಧಿಕಾರಿಗೆ ಒಪ್ಪಿಸಿ ಅಂಬಿಗರನ್ನು
ಕರಕೊಂಡ್ಬಾ. ಆಮೇಲೆಯೇ ಅರಮನೆ ಊಟ."
* * * * ಪ್ರಾಕಾರದ ಬಾಗಿಲು ತೆರೆಯಿತು, ಮುಚ್ಚಿತು.
ಮೆನೆಪ್ ಟಾ ಅತಿಥಿಗೃಹದ ಗೋಡೆಗಳ ಮೇಲಿನ ಚಾಪೆ ಚಿತ್ರಗಳನ್ನು
ನೋಡಿಡ.ಪೇಪಿಯ ದೋಣಿ ವಿಹಾರ, ಪೇಪಿಯ ದೇವಪೂಜೆ,ಪೇಪಿಯ
೧೪