ಪುಟ:Mrutyunjaya.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಮೃತ್ಯುಂಜಯ

ರಾ ಮುಳುಗಿದ. ಅರಮನೆಯ ಮಹಾದ್ವಾರವನ್ನು ಮುಚ್ಚಿದರು.
ಅರಮನೆಯ ಪ್ರದೇಶದಲ್ಲಿ ಸಹಸ್ರಾರು ದೀಪಸ್ತಂಭಗಳು ಉರಿದುವು; ಕತ್ತಲನ್ನು 

ಓಡಿಸಿದುವು.

   ಅತಿಥಿಗೃಹವೂ ಬೆಳಗಿತು.
   ಮದಿರೆಯ ಪಾತ್ರೆಗಳು ಬಂದಾಗ ಮೆನೆಪ್ ಟಾನೆಂದ:
   “ನಾವು ಹುಷಾರಾಗಿರ್ಬೇಕು ಅಂತ ಆಗಲೇ ಯಾರೋ ಅಂದರು!”
   ಬಟಾ ನಕ್ಕ. ಸೂಕ್ಷ್ಮ ಹೊಳೆದು, ಔಟ ಮತ್ತು ಬೆಕ್ ಬಾಯಿಗೆ 

ಅಂಗೈ ಅಡ್ಡ ಹಿಡಿದು, ಹಲ್ಲು ಕಿಸಿದರು.

    ತುಸು ಗಂಭೀರನಾಗಿ ಒಟಾ ಅಂದ :
    “ನೀರಡಿಕೆಯಾದಾಗ ಒಂದು ಗುಟುಕು ನೀರು ಕುಡಿದರೆ ಹೇಗೋ ಹಾಗೆ
ಒಂದು ಬಟ್ಟಲು ಮದಿರೆ, ನನಗೆ. ಅದಕ್ಕಿಂತ ಹೆಚ್ಚು ಮುಟ್ಟೋದಿಲ್ಲ.ನಾಳೆ
ಯಿಂದಂತೂ ಪೆರೋನ ಅತಿಥಿಯಾಗಿರುವಷ್ಟು ಕಾಲ ದಿವಸಕ್ಕೆ ಒಂದೇ
ಬಟ್ಟಲು."
   ತನ್ನ ನೌಕರರೆಡೆಗೆ ನೋಡಿ ಅವನೆಂದ :
   "ಒಂದೊಂದು ಗುಟುಕು ಕುಡಿದು ದೋಣಿಕಟ್ಟೆಗೆ ಹೋಗಿ ದೋಣೀಲೆ

ಮಲಕ್ಕೊಳ್ಳಿ. ಗಂಟೂ ಇಲ್ಲ ನಂಟೂ ಇಲ್ಲ ಅಂತ ಅದೀತು. ಬೆಳಿಗ್ಗೆ ಎದ್ದು ಇಲ್ಲಿಗೆ ಬಂದ್ಬಿಡಿ. ನಾಳೆ ಬರ್ತೇವೆ ಅಂತ ಇಲ್ಲಿನ ಕಾವಲಿನವರಿಗೆ ತಿಳಿಸ್ಬಿಟ್ಟು ಹೋಗಿ.”

  'ಅಪ್ಪಣೆ'ಎನ್ನುವಂತೆ ತಲೆ ಆಡಿಸಿ, ಅಂಬಿಗರು ಕಾರ್ಯೋನ್ಮುಖ
ರಾದರು.
  ಅವರನ್ನು ಕಳುಹಿಸಿಕೊಟ್ಟ ಬಟಾ ತನ್ನ ಬಟ್ಟಲನ್ನು ನಿಧಾನವಾಗಿ 

ಬರಿದು ಮಾಡತೊಡಗಿದ.

  ಕಿಟಕಿಯಿಂದ ಹೊರನೋಡುತ್ತ ನಿಂತಿದ್ದ ಮೆನೆಪ್ ಟಾನನ್ನು ಬೇಸರ 

ಆವರಿಸಿತು. ಸೆಡ್ಉತ್ಸವದ ದಿನವನ್ನೇ ಇನ್ನೂ ಗೊತ್ತು ಮಾಡಿಲ್ಲ.ಮಹಾ ಅರ್ಚಕ ರಾಜಧಾನಿಗೆ ಬರುವುದು ತಡವಾದರೆ ? ತಾನು ತೀರಾ ಬೇಗನೆ ಬಂದಂತಾಯೆತು. ಅಮಾತ್ಯರು ಏನು ಕೇಳುವರೊ? ಪೆರೋಗೆ ಕಾಣಿಕೆ