ಪುಟ:Mrutyunjaya.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

  ನಾಯಕ ನುಡಿದ :

“ನಮ್ಮೂರಿನ ದೇವಮಂದಿರದ ಅರ್ಚಕ ಅಪೆಟ್ ತಮ್ಮ ಕೆಲಸ ಎಷ್ಟೋ ಅಷ್ಟನ್ನು ಮಾಡ್ಕೊಂಡು ಹೋಗ್ತಾರೆ. ಮಂದಿರದ ಖರ್ಚು ವೆಚ್ಚ ನಾವು ನೋಡ್ಕೊಳ್ತೇವೆ.” “ಅಷ್ಟೇ ಸುಲಭವಾಗಿ ದೇಶದ ವ್ಯಾಪ್ತಿಯಲ್ಲೂ ಆ ಸಮಸ್ಯೇನ ಬಗೆಹರಿ ಸೋದು ಸಾಧ್ಯವಿದ್ದರೆ !” ಪಾದಕ್ಕೆ ಮುಳ್ಳು ನೆಟ್ಟ ಅನುಭವ ಆಮರೆಬ್ ಗೆ.ಯಾರ ಪಾದಕ್ಕಾದರೂ ನೆಡಬೇಕಾದ ಮುಳ್ಳು ತನಗೆ ನೆಟ್ಟಿತು ಎಂದು ಆತ ತನ್ನನು ತಾನೇ ಮನಸ್ಸಿನಲ್ಲಿ ಸಂತೈಸಿದ. ಮುಂದುವರಿದು ಆತನೆಂದ: “ನೀವೇ ನೋಡಿದಿರಿ. ಶಿಲ್ಪಿ,ಚಿತ್ರಕಾರ,ಅಕ್ಕಸಾಲಿಗ...ಒಂದು ಪಿರಮಿಡ್ಡು ನಿರ್ಮಿಸಬೇಕಾದರೆ ಹಲವು ಸಹಸ್ರ ಜನ, ವರ್ಷಗಟ್ಟಲೆ ಕಲ್ಲುಗಳ ಜತೆ ಸೆಣಸಾಡಬೇಕು ಗೋರಿ ನೆಲದಲ್ಲಿ. ಇಲ್ಲಿ, ಅರಮನೆಯ ಕರ್ಮಾಗಾರ ಗಳಲ್ಲಿ, ನೂರಾರು ಕುಶಲ ಕರ್ಮಿಗಳು ಗೋರಿಯೊಳಗಿನ ಅಲಂಕರಣ ಸಾಮಗ್ರಿಗಳನ್ನು ಸಿದ್ಧಗೊಳಿಸಬೇಕು. ಕೊನೆಯ ಹಂತದಲ್ಲಿ ಗೋರಿಯೊಳಗೂ ಇವರು ಕೆಲಸ ಮಾಡ್ಬೇಕು. ಇಂಥ ಕೆಲಸ ಆಗಿ ಮುಗಿಯೋ ಹೊತ್ತಿಗೆ ಕಣಜ ಉಗ್ರಾಣ, ಬೊಕ್ಕಸ ಬರಿದು. ಅದು ಬರಿದಾದರೆ ಆಪತ್ತು. ಆಗದ ಹಾಗೆ ನಾವು ನೋಡ್ಕೊಳ್ಭೇಕು. ಈ ಕಾರ್ಯದಲ್ಲಿ ದೇವಮಂದಿರಗಳಿಂದ ನೆರವು ನಿರೀಕ್ಷಿಸೋದು ತಪ್ಪೇ?" ದೇಶವಾಪ್ತಿಯ ಚೌಕ ಮಣೆ ಆಟದಲ್ಲಿ ತಾನೊಂದು ಕಾಯಿ. ತಾನು ಅಂದರೆ ನೀರಾನೆ ಪ್ರಾಂತ. ಆ ಸೂಕ್ಷ್ಮ ಎಂದೋ ಮೆನೆಪ್ ಟಾಗೆ ಹೊಳೆದಿತ್ತು. ಹೌದೋ ಅಲ್ಲವೋ ಎನ್ನುವಂತೆ ಮೆಲುನಗೆ ನಕ್ಕು ಕಾಯಿ ಅಂದಿತು: “ಮಹಾ ಅರ್ಚಕರ ವಶದಲ್ಲಿ ಅಪಾರ ಸಂಪತ್ತಿದೆ ಅಂತ ಹೇಳೋದನ್ನು ಕೇಳಿದ್ದೇನೆ.” “ಎల్ల ಕಿಂವದಂತಿಗಳೂ ಸುಳ್ಳಲ್ಲ. ಆಡಳಿತಗಾರರು ಇದನ್ನು ನೆನಪಿಟ್ಕೊಬೇಕು.ನೀವು ಕೇಳಿರೋದು ಅಂಥ ಒಂದು ಕಿಂವದಂತಿ....ದೂರದ ದೊಣಿ,