ಪುಟ:Mrutyunjaya.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ಕಣ್ಣಿಗೆ ಚಿಕ್ಕೆ. ಹತ್ತಿರ ಬಂದಾಗಲೇ ಕಾಣಿಸೋದು ಅದರ ಗಾತ್ರ.” “ಆದರೂ ಶಿಲೆಯ ಭಾರ ಶಿಲೆಗೆ, ಮರಳಿನ ಭಾರ ಮರಳಿಗೆ.” “ಶಿಲೆಯ ಭಾರ ಶಿಲೆಗೆ, ಮರಳಿನ ಭಾರ ಮರಳಿಗೆ. ಮೆನೆಪ್ ಟಾ,ಇದನ್ನು ಬರೆದಿಡಬೇಕು." ಹಾಗೆ ಹೇಳಿ ಆ ಮಾತುಕತೆಗೆಲ್ಲ ತೆರೆ ಎಳೆದವನಂತೆ ಅಂಗೈ ಆಡಿಸಿ, ಆಮೆರಬ್ ಚಪ್ಪಾಳೆ ತಟ್ಟಿದ. ಓಡಿ ಬಂದ ಸೇವಕನೊಡನೆ, “ನಾನು ಆರ ಮನೆಗೆ ಹೋಗ್ತಿದ್ದೇನೆ. ಪಲ್ಲಕೀನ ಅಲ್ಲಿಗೆ ಕಳಿಸು,” ಎಂದ. ಪ್ರತಿಮೆಯಂತೆ ನಿಂತಿದ್ದ ಅಂಗರಕ್ಷಕ ಜೀವತಳೆದು ಅಮಾತ್ಯನ ಲಾಂಛನಕೋಲನ್ನು ತಂದು ಕೊಟ್ಟ' ಅಮಾತ್ಯ ಎದ್ದೋಡನೆ ಭಟ ಮುಂದಾದ.ಮೆನೆಪ್ ಟಾ ತಾನೂ ಎದ್ದ. ಓಡಿಬಂದ ಸೆನೆಬ್ ಗೆ ಅಮಾತ್ಯನೆಂದ: “ನಾಯಕರನ್ನು ಅತಿಥಿಗೃಹಕ್ಕೆ ತಲಪಿಸಿ ಬಾ.(ಮೆನೆಪ್ ಟಾನತ್ತ ತಿರುಗಿ, ಸ್ವರ ತಗ್ಗಿಸಿ) ಮಹಾಪ್ರಭು ನಾಳೆ ನಿಮ್ಮನ್ನು ಕರೀತಾರೆ.” “ಆಗಲಿ, ಕಾದಿರುತೆನೆ,” ಎಂದ ಮೆನೆಪ್ ಟಾ. ಎಳೆಯ ಲಿಪಿಕಾರರು ಮುಂದೆ ನಡೆದರು. ಅಮಾತ್ಯ ಹೆಜ್ಜೆ ಇರಿಸಿದ.ಆಂಗರಕ್ಷಕ ಹಿಂಬಾಲಿಸಿದ. ಸೆನೆಬ್ ಮೆನೆಪ್ ಟಾನ ಜತೆ ಹೊರಡುತ್ತ, “ಇಬ್ಬರೇ ಬಂದ್ವಿ.ఇಬ್ಬರೇ ಹೋಗಿದ್ದೇವೆ," ಎಂದ “ನಾಳೆ ಮಹಾ ಪ್ರಭುವನ್ನು ಕಾಣ್ತೇರಿ ಅಲ್ಲವಾ?” ಎಂದೂ ಕೇಳಿದ. “ಮಹಾಪ್ರಭು ನಾಳೆ ಕರೀತಾರೆ ಅಂತ ಅಮಾತ್ಯರು ಹೇಳಿದ್ದು ನಿಮಗೆ ಕೇಳಿಸಿರಬೌದು," ಎಂದ ಮೆನೆಪ್ ಟಾ ಯಾರು ಮಿತ್ರರು? ಯಾರಲ್ಲ? ಯಾರೊಡನೆ ಮಾತಾಡಬಹುದು ? ಯಾರೊಡನೆ ಮಾತಾಡಬಾರದು ? ಮೆನ್ನನ ಹಾಡು ನೆನಪಾಗಿ ನಾಯಕ ಮುಗುಳುನಕ್ಕ.