ಪುಟ:Mrutyunjaya.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ

   ಅ೦ದು ಉಗುರಿನವನ ಸರದಿ ಕೂಡಾ. (ಮೂರು ದಿನಗಳಿಗೊಮ್ಮೆ ತನ್ನ 
 ಸಹಾಯಕನೊಡನೆ ಅವನು ಬರುತ್ತಿದ್ದ.)
     ಮು೦ದೆ,ಸ್ನಾನದ ಮನೆಯ ದಾಸದಾಸಿಯರ ಹೊಣೆ.ಭುಜಗಳನ್ನು 
    ಮುಟ್ಟುತ್ತಿದ್ದ ಅರಸನ ನೀಳ ಕೇಶವನ್ನು ಮೇಲಕ್ಕೆ ಎತ್ತಿಕಟ್ಟಿ, ಸುಗಂಧ ದ್ರವ್ಯ ಬೆರೆಸಿದ್ದ ನಸುಬೆಚ್ಚಗಿನ ನೀರಿನಲ್ಲಿ ಸ್ನಾನ. ಮೈ ಒರೆಸಲು ಗರಿಗರಿಯಾದ ಬಟ್ಟೆ. ಪ್ರತಿ ಬೆಳಗ್ಗೆ ಉಡುವುದು ಅಗಸ ತಂದ ಮಡಿಮಾಡಿದ ಅರಿವೆಯನ್ನು. ಕಣ್ಣಿನ ರೆಪ್ಪೆಗೆಳಿಗೂ ಕಾಡಿಗೆ. ನರೆತ ಕೂದಲುಗಳಿಗೆ ಕಪ್ಪು. ಬಳಿಕ ಅಂಗಾಂಗಗಳಿಗೆ ಸುಗಂಧ ಸಾಮಗ್ರಿಗಳ ಲೇಪನ.  ಮುಖದ ಕೆನ್ನೆಗಳಿಗೂ ತುಟಿಗಳಿಗೂ ಕೆಂಪು.  ಬೆರಳು ತುದಿಗಳ ಹಿಮ್ಮೈಗಳಿಗೆ ರಂಗು.
   ಅಲ೦ಕರಣ ಆಧಿಕರಿಯೂ ಅವನ ಸಿಬ್ಬ೦ದಿಯೂ ನಿಷ್ಕ್ರಮಿಸಿದೊಡನೆ   ಪಾದುಕೆಗಳ ಅಧಿಕಾರಿ ಬಂದ.  ಅರಸ ಬಂಗಾರದ ಹಾವುಗೆಗಳನ್ನು ಮೆಟ್ಟಿದ.
    ಅಲ್ಲಿ೦ದ ಪೆರೋ ಏಳು ಜನ ಅ೦ಗರಕ್ಷಕರಿ೦ದ__ಅನುಚರರಿ೦ದ__                                   
 ಆವೃತನಾಗಿ ದೇವಮ೦ದಿರಕ್ಕೆ ಹೊರಟ.        
     ಪವಿತ್ರೋದಕದ ಪ್ರೋಕ್ಷಾಳನದಿ೦ದ ಶುಚಿರ್ಭೂತವಾದ ಹೊಸ ನಡು 

ಬಟ್ಟಿಯಿ೦ದ, ಅಲಂಕೃತವಾದ, ಧೂಪಧೂಮದಿಂದ ಮುಸುಕಿದ ಸೂರ್ಯನ, ಹೊಂಗಿರಣದಿಂದ ಬೆಳಗಿದ ಪ್ಟಾ ದೇವತಾಮೂರ್ತಿಗೆ ಅರಸನಿಂದ ಪುಷ್ಪ ಪೂಜೆ, ಮೌನ ಪ್ರಾರ್ಥನೆ, ಭಕ್ತಿಪೂರ್ವಕ ಪ್ರಣಾಮ.....

  ಇದಾದೊಡನೆ ಗರ್ಭಗುಡಿಯ ಬಾಗಿಲನ್ನು ಇಕ್ಕಿದರು. 
  ಅರಮನೆಯ  ಅಭಿಮುಖವಾಗಿ ಪೆರೋ ಹೊರಬೀಳುತ್ತಿದ್ದ೦ತೆ ಇನೇನಿಯೂ        ಅವನ ಸಹಾಯಕರೂ ಫೋಷಿಸಿದರು :
    "ಪೆರೋನ ಆಯುರಾರೋಗ್ಯ ವರ್ಧಿಸಲಿ!" 
      ಅಲ್ಪೋಪಹಾರದಾ  ಆಮಾತ್ಯರೊಡನೆ ಔಪಚಾರಿಕ ಭೇಟಿ.         
     ಅದಾದ ಮೇಲೆ ಈ ದಿನ__ 
   ಲಾಂಛನಗಳಾದ ಕೊಂಡಿಕೋಲನ್ನೂ ಅಡಕತ್ತರಿಯನ್ನೂ ಒಂದಕೊಂದು ಅಡ್ಡವಾಗಿ ಎದೆಯ ಮೇಲ್ಗಡೆ ಹಿಡಿದು ವೇದಿಕೆಯ ಮೇಲಣ ರತ್ನ