ಪುಟ:Mrutyunjaya.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಮೃತ್ಯುಂಜಯ

ಕೇಳಿಸಿತು:
"ನನ್ನನ್ನು ಪ್ರೀತಿಸಿ! ನನ್ನನ್ನು ಪ್ರೀತಿಸಿ!"
ಅಂಗಲಾಚುತ್ತಿದ್ದವನು ಭಿಕ್ಷುಕ. ಎದ್ದು ನಡೆಯಲಾಗದ ಹೆಳವ
ಕುಳಿತೇ ಇದ್ದ.
ನೆಫಿಸ್ ತಲೆಯಮೇಲಿದ್ದುದನ್ನು ಕೆಳಗಿಳಿಸಿ, ಬುತ್ತಿಯ ಗಂಟನ್ನು
ಸಡಿಲಿಸಿ, ಒಂದು ತುಣುಕು ಮೀನನ್ನು ಭಿಕ್ಷುಕನ ಪಾತ್ರೆಗೆ ಹಾಕಿದಳು.
ಒಮ್ಮೆಲೆ ಮೂರು ನಾಲ್ಕು ಕಂಠಗಳಿಂದ ಕೇಳಿ ಬಂತು :
"ನನ್ನನ್ನು ಪ್ರೀತಿಸಿ !" "ನನ್ನನ್ನು ಪ್ರೀತಿಸಿ !"
ಚುರುಕು ನಡಿಗೆಯ ನಾಲ್ವರು ಭಿಕ್ಷುಕರು ನೆಫಿಸಳನ್ನು ಮುತ್ತಿದರು.
"ನಡೀರಿ ಆಚೆಗೆ" ಮೆನೆಪ್ಟಾ ತೋಳು ಬೀಸಿದೊಡನೆ, ಅವರು
ಚೆದರಿದರು.
"ಮೈಗಳ್ಳರು !" ಎಂದು ಅವನು ಹೀಗಳೆದ: "ರಾತ್ರಿ ಕುಡಿದು ಮಲ
ಗಿದೋರು ಈಗ ಎದ್ದು ಗುಡ್ಡದಿಂದ ಇಳಿದು ಬರ್ತಿದಾರೇಂತ ತೋರ್ತದೆ."
"ಅಮ್ಮಾ, ಗಂಟು ನಾನು ಹಿಡಕೊಳ್ಲಾ?"
"ಬೇಡ ಮಗೂ."
ನಾಲ್ಕು ಮಾರುಗಳಾಚೆ, ತಲೆ ಬೋಳಿಸಿಕೊಂಡವನೊಬ್ಬ ನಾರು
ಬೇರುಗಳನ್ನು ಒಂದು ಕಲ್ಲಿನ ಮೇಲಿರಿಸಿ ಇನ್ನೊಂದು ಕಲ್ಲಿನಿಂದ ಅದನ್ನು ಚಚ್ಚು
ತ್ತಿದ್ದ. ರೋಗಿಯಂತೆ ಕಾಣುತ್ತಿದ್ದ ಸೊರಗಿದ ಶರೀರದವನೊಬ್ಬ ಅವನೆದುರು
ಕುಳಿತಿದ್ದ. ಅಲ್ಲೇ ನಿಂತಿದ್ದೊಬ್ಬ ಹುಡುಗ ಕೀರಲು ಗಂಟಲಲ್ಲಿ ಅರಚ
ತೊಡಗಿದ:
"ನನ್ನ ಯಜಮಾನರು ಎಂಥ ಕಾಯಿಲೆ ಇದ್ರೂ ವಾಸಿ ಮಾಡ್ತಾರೆ.
ಇವರು ಅಬ್ಟುವಿನ ಪ್ರಖ್ಯಾತ ಚಿಕಿತ್ಸಾಪಟು, ಅಸಮಾನ ಜಾದುಗಾರ !
ಉಸಿರಾಟದ ಕಾಯಿಲೆ, ಹೊಟ್ಟೆ ನೋವು, ತಲೆ ಸಿಡಿತ___ಎಲ್ಲ ಗುಣ
ಮಾಡ್ತಾರೆ. ಕೂದಲು ಉದುರೋದನ್ನು ನಿಲ್ಲಿಸ್ತಾರೆ; ನರೆಗೂದಲು ಕರೇದು
ಮಾಡ್ತಾರೆ. ಹೆಂಗಸರ ಕಾಯಿಲೆಗಳಿಗೆ...."
ವೈದ್ಯನ ಗದರುವ ಧ್ವನಿ ಕೇಳಿಸಿತು:
"ಕತ್ತೆ! ಆಗಲೇ ಹೇಳ್ಲಿಲ್ವಾ ಬಿಡಿಸಿ ಬಿಡಿಸಿ ಅರಚೂಂತ?"