ಪುಟ:Mrutyunjaya.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೬೩ "ನೀವು ಸೊಗಸಾಗಿ ಮಾತಾಡ್ತೀರಿ." "ಆ ಪ್ರಶಂಸೆಗೆ ಅರ್ಹನಲ್ಲವದರೂ ಸವಿಮಾತು ಕೇಳಿ ಸಂತೋಷ್ ವಾಗ್ತದೆ...ಇನ್ನು ಮುಂದೆ ನೀವು ತಿರುಗಾಟಕ್ಕೆ ಹೊರಟಾಗ ಅರಮನೆ ಯೋಧರು ನಿಮ್ಮ ಅಂಗರಕ್ಷಕರಾಗಿ ಇರಲೇಬೇಕೂಂತ ಅಮಾತ್ಯರು ಕಟ್ಟಪ್ಪಣೆ ಮಾಡಿದ್ದಾರೆ.” “ಬರಲಿ, ಬರಲಿ. ಆದರೆ ಪಲ್ಲಕಿ ಮಾತ್ರ ಒಲ್ಲೆ.” “ಹಾಗೆಂತ ಅಮಾತ್ಯರಿಗೆ ತಿಳಿಸಲಾ ?” “ದಯವಿಟ್ಟು ತಿಳಿಸಿ.” - ಅನಂತರದ ಮೌನವನ್ನು ಔಟನ 'ಆಕ್ಷಿ' ಭೇದಿಸಿತು. ಒಂದರ ಬಳಿಕ ಒಂದರಂತೆ ಮೂರು ಸೀನು. “ಈ ಆಕ್ಷಿ ಶುಭವೊ, ಅಶುಭವೋ ? ಅದೂ ಊಟಕ್ಕೆ ಮುಂಚೆ! ಮಂದಿರದ ಅರ್ಚಕರನ್ನು ಕೇಳ್ಬೇಕು !” ಎಂದ ಬಟಾ. ಅತಿಥಿಗೃಹದ ಅಧಿಕಾರಿ ಬಟಾನ ಹತ್ತಿರಕ್ಕೆ ಸರಿದು, ಮೆಲ್ಲನೆ, “ಭೋಜನ ಸಿದ್ಧವಾಗಿದೆ," ಎಂದ. ಬಟಾನೆಂದ : “ಸಂತೋಷ. ನಾವೂ ಹಸಿದಿದ್ದೇವೆ! (ಸೆನೆಬ್ನತ್ತ ಹೊರಳಿ) ನೀವೂ ನಮ್ಮ ಜತೆಯೇ ಉಣ್ಣಬಹುದಲ್ಲ ಲಿಪಿಕಾರಯ್ಯ ?" “ಛೆ ! ಸಲ್ಲದು ! ಭೋಜನದಲ್ಲೂ ಇಲ್ಲ. ಔತಣದಲ್ಲೂ ಇಲ್ಲ.” “ಅಂದ ಹಾಗೆ, ಔತಣ-ಔತಣ ಅಂತೀರಲ್ಲ. ಅದು ಯಾವತ್ತು ?” ಸೆನೆಬ್ ಹಿಂದೆ ಮುಂದೆ ನೋಡಿದ. ನಕ್ಕು. “ಎಷ್ಟೋ ರಾಜರಹಸ್ಯಗಳನ್ನು ಕಾಯ್ತೇನೆ. ನನ್ನನ್ನು ಸೀಳಿದರೂ ಸುಳಿವು ಸಿಗೋದಿಲ್ಲ, ಆದರೆ ಔತಣದ ವಿಷಯ ಮಾತ್ರ ಗೋಪ್ಯವಾಗಿಡೋ ದಕ್ಕೆ ನಾನು ಅಶಕ್ತ !” “ಹಾಗೋ ಹೇಳಿ ಮತ್ತೆ!” “ಯಾವಾಗ ಅಂತ ಖಚಿತವಾಗಿ ಗೊತ್ತಿಲ್ಲ, ಇನ್ನೆಂಟು ದಿನಗಳಲ್ಲೇ ಇರಬಹುದು. ಅಥವಾ ಇನ್ನೆರಡು ವಾರ ಬಿಟ್ಟು ಇರಬಹುದು. ಅದು ನೆಫರ್ ಟೀಮ್ ಮಹಾರಾಣಿಯವರ ಮರ್ಜಿ.ಗೇಬು ದಂಪತೀನ ಅರಮನೆಗೆ ಕರೀ.