ಪುಟ:Mrutyunjaya.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ತಾನೇ ಇಷ್ಟವಿಲ್ಲ? ಅರಮನೆಯ ಬೇರೆ ಕೆಲ ಅಧಿಕಾರಿಗಳಿಗೂ ಅವನು ಪರಿಚಿತನಾದ.

   ನಡಳಿತದ ಚೌಕಮಣೆಯ ಕಾಯಿಗಳನ್ನೇನೋ ಗುರುತಿಸಿದ್ದ. ಹೇಗಾದರೂ ಮಾಡಿ ಅವನ್ನು ಸರಿಸಲು ಶಕ್ತನಾದೆನೆಂದರೆ ತನ್ನ ಉನ್ನತಿ ಖಚಿತ_ ಎಂದುಕೊಂಡ.
   ಆ ಆಟದ ನಿಯಮಗಳನ್ನು ಅವನು ಕಲಿತುದು ಅಮಾತ್ಯನ ಹಿರಿಯ ಲಿಪಿಕಾರ ಸೆನೆಬ್‍ನಿಂದ. ನುಟ್‍ಮೊಸ್‍ಗೆ ಅಮಾತ್ಯರ ಭೇಟಿ ಲಭಿಸಿದ್ದೂ ಅವನ ಪ್ರಯತ್ನದಿಂದಲೇ. ಅಮಾತ್ಯನೊಡನೆ ಆತ ಸೆನೆಬ್ ಹೇಳಿಕೊಟ್ಟಂತೆಯೇ ವರ್ತಿಸಿದ.
   ಅಮಾತ್ಯ: "ಈ ಕಾಣಿಕೆಗಳನ್ನೆಲ್ಲ ಯಾಕೆ ತಂದಿರಿ?"
   ನುಟ್‍ಮೋಸ್‍:
   "ನನ್ನ ಕಥೆ ಮುಗಿಯೋದಕ್ಕೆ ಮುಂಚೆ ಈ ಅಲ್ಪ ಕಾಣಿಕೆ_"
   "ಕಥೆ?"
   "ಇನ್ನೇನು, ನಮ್ಮ ಆಸ್ತಿಪಾಸ್ತಿ ಎಲ್ಲ ಹೋಯ್ತಲ್ಲ?"
   "ನೀವು ನೀರಾನೆ ಪ್ರಾಂತಕ್ಕೆ ವಾಪ್ಸು ಯಾಕೆ ಹೋಗ್ಬಾರ್ದು?"
   "ಅಲ್ಲಿ ನನ್ನನ್ನು ಜೀವದಿಂದ ಬಿಡ್ತಾರಾ? ಸ್ವತಃ ತಾವೇ ಬಂದರೂ_"
   "ಜೀವದಿಂದ ಬಿಡೋದಿಲ್ಲ, ಅಲ್ಲವೆ?....ಬಂಡಾಯಕ್ಕೆ ಕಾರಣ ಏನು?"
   "ನಾನು ಆಬ್ಟು ಯಾತ್ರೆಗೆ ಹೋಗಿದ್ದೆ." 
   "ಗೊತ್ತಿದೆ. ಪೆರೋನ ಬೋಯಿಯಾಗಿದ್ರಿ."
   "ಹೆಹ್ಹೆ!.... ಆದರೆ ನಾನು ರಾಜಧಾನಿಗೆ ವಾಪಸು ಬರೋದರೊಳಗೆ ಅಲ್ಲಿ ಬಂಡಾಯವಾಯ್ತು."
   "ಯಾಕೆ ಆಯ್ತೂಂತ?"
   "ಯಾಕೆ ಅಂದರೆ_ (ಸೆನೆಬ್ ಹೇಳಿಕೊಟ್ಟುದನ್ನು ಸ್ಮರಿಸಿಕೊಳ್ಳುತ್ತ ) ಹಿರಿಯ ಅಧಿಕಾರಿ ಟೆಹುಟ ಸ್ವಲ್ಪ ಖಾರವಾಗಿ ಮಾತಾಡಿದ್ರು. ಈಗಾಗಲೇ ಗೇಬು ಅವರಿಂದ ಈ ವಿಷಯ ನಿಮಗೆ ತಿಳಿದಿರಬೌದು. ಸ್ವಲ್ಪ ನಯವಾಗಿ ವರ್ತಿಸಿದ್ದರೆ_"
   "ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರಲಿಲ್ಲ. ಗೇಬು ಅದನ್ನೂ ಹೇಳಿದ್ದಾರೆ.”