ಪುಟ:Mrutyunjaya.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೮೧ “ಜನಸಾಮಾನ್ಯರಿಗೆ ಬಂಡಾಯದಿಂದ ತೊಂದರೆಯಾಗಿಲ್ಲ. ಈಗ ತಾವೇ ಯಜಮಾನರು ಆಂತ ತಿಳಕೊಂಡಿದ್ದಾರೆ. ನಮ್ಮಂಥವರ ಪಾಡು ಮಾತ್ರ ಹೇಳತೀರದು.” “ಲೋಕದಲ್ಲೇ ಇದು ಅಪೂರ್ವ ಘಟನೆ. ನಾವು ಸಹನೆಯಿಂದ ವರ್ತಿ ಸ್ಬೇಕು. ನೀವು ಇಲ್ಲಿಯೆ ಬೀಡುಬಿಟ್ಟಿದ್ದೀರಿ ಅಂತ ಕೇಳಿದ್ದೇನೆ.” ಅಮಾತ್ಯರು ಎಲ್ಲವನ್ನೂ ಬಲ್ಲವರು. ನೀರಾನೆ ಪ್ರಾಂತಕ್ಕೆ ನಾನು ವಾಪ್ಸು ಹೋಗೋದು ಸಾಧ್ಯವಾಗೋ ತನಕ ರಕ್ಷಣೆ ನೀಡ್ಬೇಕು.” ”ಯಾವ ಬಗೆಯ ರಕ್ಷಣೆ?” “ರಾಜಧಾನಿಯಲ್ಲಿ ಖರ್ಚು ಜಾಸ್ತಿ. ಜೀವನ ನಿರ್ವಹಣಕ್ಕೆ ಬೇಕಾದ್ದೆಲ್ಲ ರಾಜಬೊಕ್ಕಸದಿಂದಲೂ ಉಗ್ರಾಣದಿಂದಲು ದೊರೆಯೋ ಹಾಗೆ ಅಪ್ಪಣೆ ಯಾಗ್ಬೇಕು." ಕಿರಿಯ ಲಿಪಿಕಾರನತ್ತ ನೋಡಿ, ಬರೆದುಕೊಳ್ಳುವಂತೆ ಸೂಚಿಸಿ, ಅಮಾತ್ಯ "ಆಗಲಿ" ಎಂದ. ನೀರಾನೆ ಪ್ರಾಂತದಿಂದ ಕೆಲ ತಿಂಗಳ ಬಳಿಕ ಸೆತೆಕ್ ನಖ್ತ್, ಸೆನ್ ಉಸರ್ಟ್ ಮತ್ತು ಹೆಜಿರೆ ಸಕುಟುಂಬರಾಗಿ ಮೆಂಫಿಸಿಗೆ ಓಡಿಬಂದ ಮೇಲೆ, ನುಟ್ಮೋಸ್ಗೆ ಸ್ವಲ್ಪ ಕಿರಿಕಿರಿಯಾಯಿತು. ಅವನ ಸ್ವಚ್ಛಂದ ಬದುಕಿಗೆ ಒಂದು ಬಗೆಯ ಅಡ್ಡಿ.ತನ್ನ ಹೆಂಡತಿ ಮಕ್ಕಳು ಊರಲ್ಲೇ ನಿಂತಿದ್ದು ಅವನ ಪಾಲಿಗೆ ಸಮಾಧಾನದ ಸಂಗತಿ. ಆದರೆ ಆಭರಣಗಳೆಲ್ಲ ಅವರ ವಶದಲ್ಲೇ ಉಳಿದುವೆಂದು ಅವನಿಗೆ ವ್ಯಥೆ. “ಬಂಡಾಯಗಾರರು ಸಾವಿನ ಬೆದರಿಕೆ ಹಾಕಿದ್ದರಿಂದ ನನ್ನ ಹೆಂಡತಿ ಮಕ್ಕಳು ಹೊರಡೋದಕ್ಕಾಗಲಿಲ್ಲ" ಎಂದು, ನುಟ್ಮೋಸ್ ರಾಜಧಾನಿತಯು ಮಿತ್ರರಿಗೆ ವಿವರಣೆ ನೀಡಿದ.ಅದು ಸುಳ್ಳೆಂದು ಸೆತೆಕ್ ನಖ್ತ್ ಆಗಲೀ ಇತರ ರಾಗಲಿ ಹೇಳಿಲ್ಲ ರಾಜಧಾನಿಯಲ್ಲೀಗ ತಾನು ಪ್ರಭಾವಶಾಲಿ ಎಂದು ನುಟ್ಮೋಸ್ ತಿಳಿಸಿದ್ದನಲ್ಲ ? ಹೊಸ ಜಾಗದಲ್ಲಿ ಜೀವಿಸಲು ಅವನ ನೆರವು ಬೇಡ ಎನ್ನುವುದುಂಟೆ ? ಸೆತೆಕ್ ನಖ್ತ್ ಮತ್ತಿತರರಿಗೂ ಸೆನೆಬ್ ಸ್ನೇಹಿತನಾದ--ಸ್ವಲ್ಪ ಮಟ್ಟಿಗೆ.