ಪುಟ:Mrutyunjaya.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೧೯

ಸಾರುವ ಎತ್ತರದ ಜೋಡಿ ಕಿರೀಟ. ಮೇಲಣ ಐಗುಪ್ತದ ಬಿಳಿಕಿರೀಟ ; అದ
ರಲ್ಲಿ ರಾಜಲಾಂಛನ ಸರ್ಪ.. ಆ ಕಿರೀಟವನ್ನು ಆವರಿಸಿ ಕೆ೦ಪು ಕಿರೀಟ___
ಕೆಳಗಣ ಐಗುಪ್ತದ್ದು. ಅದರಲ್ಲಿ ಗಿಡುಗ ಚಿಹ್ನೆ. ಮೂಲದಲ್ಲಿ ಬಿಳುಪಾಗಿ
ದ್ದರೂ ಬಿಸಿಲಿನ ಝಳಕ್ಕೆ ಗೋದಿಗೆ೦ಪಾಗಿ ಮಾರ್ಪಟ್ಟಿದ್ದ ಮೈಬಣ್ಣ___
ಪ್ರಜೆಗಳ ಕರಿಬಣ್ಣಕ್ಕಿಂತ ಭಿನ್ನ. ನಡುವಯಸ್ಸು ದಾಟಿದ್ದ ನುಣುಪು ಮುಖ.
ಕೆನ್ನೆ ತುಟಗಳಿಗೆ ಹಚ್ಚಿದ ಕೆಂಪು. ತುಸು ಬಾಗಿದ ನೀಳ ಮೂಗು. ಕಾಠಿಣ್ಯ
ಬೆರೆತ ಗಾ೦ಭೀರ್ಯ.ನಿರ್ಭಯವಾದ ತಿವಿಯುವ ನೋಟ.ಕತ್ತಿನಿಂದ
ತುಸು ಕೆಳಗಿನವರೆಗೂ ಹಾರಗಳ ಎದೆಗವಚ. బల ಎಡ ಕೈಗಳು ವಕ್ಷ
ಸ್ಥಲಕ್ಕೆ ಅಡ್ಡವಾಗಿ ಹಿಡಿದಿದ್ದ ಲಾಂಛನಗಳು : ಕಾಳು ಒಡೆಯುವ ಸಾಧನ
ಮತ್ತು ಕುರುಬನ ಕೊಂಡಿಕೋಲು. ಸೊಂಟಪಟ್ಟಿಯಿಂದ ಮೊಣಕಾಲಿನ
ವರೆಗೂ ಕಸೂತಿ ಹಾಕಿದ ಅಂಗವಸ್ತ್ರ....
ಜನರದು ಮೌನ ವ೦ದನೆ. ಪೆರೋ ಗುಡಿಯ ಮೂರ್ತಿಯ೦ತೆ ನಿಶ್ಚಲ.
ಪಲ್ಲಕಿಯ ಹಿಂದೆ ಮತ್ತೆ ನೂರುಜನ ಕಾವಲು ಭಟರು___ಬಿಲ್ಲಾಳುಗಳು.
ಬಲ ಮಗ್ಗುಲಲ್ಲಿ ಅವರ ಮುಖ್ಯಸ್ಥ. ಅವರ ಹಿಂದೆ ಹೇರು ಹೊತ್ತ ಗುಲಾ
ಮರು. ಗುಲಾಮರ ಹಿಂದೆ, ಶಿಸ್ತಿಲ್ಲದೆ ಗುಂಪು ಕಟ್ಟಿಕೊಂಡು ವೇಗವಾಗಿ
ನಡೆಯಲೆತ್ನಿಸುತ್ತಿದ್ದ ಜನರು.
ಅರಸನನ್ನು ನೋಡಿದ ಸಂಭ್ರಮದ ಕಲರವ ಅಡಗುವುದಕ್ಕೆ ಮುನ್ನವೇ
ಪುನಃ ಕೇಳಿಸಿತು :
"ದಾರಿ ಬಿಡಿ! ದಾರಿ ಬಿಡಿ!"
ಬರುತ್ತಿದ್ದುದು ಐಗುಪ್ತ ದೇಶದ ಮಹಾ ಅರ್ಚಕ ಹೇಪಾಟ್. ಸಾಂಪ್ರ
ದಾಯಿಕವಾಗಿ (ಅರಸ ಪ್ರಧಾನ ದೇವಸೇವಕ ಎಂಬ ಬಿರುದು ಹೊತ್ತಿದ್ದರೂ
ಧಾರ್ಮಿಕ ವಿಚಾರಗಳಿಗೆ ಸ೦ಬ೦ಧಿಸಿ ಮಹಾ ಅರ್ಚಕನದೇ ಕೊನೆಯ
ಮಾತು.)
ಬೋಳು ತಲೆಯ ಯುವಕ ದೇವಸೇವಕರು ಹೇಪಾಟ್ ಕುಳಿತಿದ್ದ
ಪಲ್ಲಕಿಯನ್ನು ಹೊತ್ತಿದ್ದರು. ಅವರ ಹಿಂದೆ ಸಾಮಾನು ಸರಂಜಾಮುಗಳ
ಹೊರೆ ಭಾರದಿಂದ ಬಾಗಿದ್ದ ಗುಲಾಮರಿದ್ದರು.
ಜನಸ್ತೋಮವನ್ನು ಅನುಸರಿಸಿ ಹೇಪಾಟ್ಗೂ ಮೆನೆಪ್ಟಾ ನಮಿಸಿದ.