ಪುಟ:Mrutyunjaya.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ “ಲಿಪಿಕಾರಯ್ಯ ಇವತ್ತು ಬಹಳ ವಿರಾಮವಾಗಿದ್ದಾರೆ ಅಂತ ಕಾಣ್ತದೆ.” ಬಟಾನೆಡೆಗೆ ತೀಕ್ಷ್ಮನೋಟ ಬೀರಿ ಸೆನೆಬ್ ನುಡಿದ: “ಅಮಾತ್ಯರು ಇವತ್ತು ಭವನಕ್ಕೆ ಬರೋದಿಲ್ಲ. (ಮೆನೆಪ್ ಟಾನೆಡೆಗೆ ತಿರುಗಿ) ಮಹಾ ಪ್ರಭುವಿನ ಸನ್ನಿಧಿಗೆ ಆಪ್ತಾಲೋಚನೆಗೆ ಹೋಗಿದ್ದಾರೆ.” ಮೆನೆಪ್ ಟಾ ಕೇಳಿದ : “ಸರು ಅಧಿವೇಶನದಲ್ಲಿ ಪೆರೋ ಭಾಗವಹಿಸ್ತಾರಾ?” “ಇಲ್ಲ, ಅಮಾತ್ಯರದೇ ಅಧ್ಯಕ್ಷತೆ. ಮಾತುಕೂಡಾ ಅವರದೇ ಜಾಸ್ತಿ. ಹಿರಿಯ ಸಲಹೆಗಾರರಲ್ಲಿ ಒಬ್ಬಿಬ್ರ ತುಟಿ ತೆರೆದರೆ ಹೆಚ್ಚು. ಎಲ್ಲರೂ ದೈವ ಭೀರುಗಳು. ತಮ್ಮ ತಮ್ಮ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿದವರು.” ಬಟಾನೆಂದ : “ನಮ್ಮಲ್ಲೂ, ಹಿರಿಯರ ಸಮಿತಿ ಇದೆ ." “ಹ್ಞ, ಪೂರ್ವಕಾಲದ ಪದ್ಧತಿ.” “ಲಿಪಿಕಾರಯ್ಯ, ನಾಳೆ ಸಂಜೆ ನಾಯಕರು ఔತಣ ಕೂಟಕ್ಕೆ ಹೋದ್ಮೆಲೇ ನಮ್ಮ ಗತಿ ? ನೀವು ವಿಚಾರಿಸ್ಕೋಬೇಕಪ್ಪ ನಮ್ಮನು." “ಹ್ಞ, ನೆನಪಾಯ್ತು (ನಾಯಕನಿಗೆ) ಔತಣದ ವಿಷಯ ನಿಮಗಿಷ್ಟು ಪೂರ್ವ ಮಾಹಿತಿ ಕೊಡ್ಬೇಕು. ದೊಡ್ಡವರ ಕೂಟ. ಎಲ್ಲರೂ ಸರಗಿರ ಹಾಕ್ಕೋಂಡು ಅಲಂಕೃತರಾಗಿ ಬರ‍್ತಾರೆ, ಸುಗಂಧದ್ರವ್ಯ ಇತ್ಯಾದಿ ಸಾಮಗ್ರಿ ಗಳನ್ನು ತಂದು ಕೊಡೋದಕ್ಕೆ ಅಧಿಕಾರಿಗಳಿಗೆ ಹೇಳ್ತೀನೆ. ಅಲ್ಲಿ ಪಾದರಕ್ಷೆ ಕಳಚೋದು ಬೇಡ...ಉಳಿದ ಶಿಷ್ಟಾಚಾರ ನಿಮಗೆ ಗೊತ್ತಿದೆಯಲ್ಲ?” ಬಟಾ ದುಂಬಾಲು ಬಿದ್ದ. “ನನಗೆ ಈಗಾಗಲೇ ನಾಲಿಗೆಯಲ್ಲಿ ನೀರೂತ್ತಿದೆ. ಪ್ರವೇಶವಿಲ್ಲದ ಸ್ಥಳ ನೀವು ಹೇಳೋದನ್ನಾದರೂ ಕೇಳಿ ಸಂತೋಷಪಡ್ತೇನೆ. ಹಳಿ ಲಿಪಿ ಕಾರಯ್ಯ.” “ಇಂಥ ಸಂದರ್ಭಗಳಲ್ಲಿ ಹೇಗೆ ವರ್ತಿಸ್ಬೇಕೂಂತ ಪ್ರಾಚೀನ ಹೆತನುಡಿಗಳೇ ಇವೆ. ఇరి. ಜ್ಞಾಪಿಸ್ಕೊಂಡು ಹೇಳ್ತೇನೆ. ನಿನಗಿಂತ ಶ್ರೇಷ್ಟನಾದವನ ಜತೆ ಉಣ್ಣಲು ಕುಳಿತಿದ್ದರೆ, ನಿನ್ನ ಮೂಗಿನ ಮುಂದೆ ಇಟ್ಟಿದ್ದರಲ್ಲಿ ಏನನ್ನು ಆತ ನಿನಗೆ ಕೊಡ್ತಾನೋ ಅದನ್ನು ಸ್ವೀಕರಿಸು... ನಿನ್ನ ಎದುರು ಇರೋದರ