ಪುಟ:Mrutyunjaya.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

గృ్యుంజయ 3GT3 ಇಳಿದ ಬಳಿಕ ಆ ಪಲ್ಲಕಿಗಳನ್ನು ಅರಮನೆ ಮತ್ತು ದೇವಮಂದಿರಗಳ ನಡುವಣ ವಿಶಾಲ ಬಯಲಲ್ಲಿ ಅರಮನೆಯ ಗೋಪುರದ ನೆರಳಿನಲ್ಲಿ ಸಾಲಾಗಿ ಇರಿಸಿದರು. ಮಧ್ಯಾಹ್ನದ ಹೊತ್ತಿಗಷ್ಟೇ ಎರಡು ಮೂರು ತಾಸು ತಡೆಯಲಾಗದ ಬಿಸಿಲು. ಆ ಬಳಿಕ ಪಲ್ಲಕಿಗಳಿಗೂ ಬೋಯಿಗಳಿಗೂ ಅರಮನೆ ಗೋಡೆಯ ನೆರಳಿನ ರಕ್ಷೆ. - ಮಹಾದ್ವಾರದ ಮೂಲಕ ಒಳಗೆ ಬರುತ್ತಿದ್ದ ಪಲ್ಲಕಿಗಳನ್ನೆಲ್ಲ ಬಟಾ, ಅರಮನೆಯ ಉದ್ಯೋಗಿಗಳ ಜತೆ ತಾನೂ ಒಬ್ಬನಾಗಿ నింತು, ಕೌತುಕದಿ೦ದ ಈಕ್ಷಿಸಿದ. ರಾಣೀವಾಸದಲ್ಲಾ ಅಂದು ವಿಶೇಷ ಚಟುವಟಿಕೆ, ದಾಸಿಯರು ಅತ್ತ ಇತ್ತ ಅಲ್ಲಿಗೆ ಇಲ್ಲಿಗೆ ಓಡಾಡುತ್ತಲೇ ಇದ್ದರು. ಅಮಾತ್ಯರ ಭವನದಲ್ಲಿ ಸರು ಅಧಿವೇಶನ. ಹೊರೆಗೆ ನೋಡಿ బంದ బಟಾ ನಾಯಕನಿಗಿ೦ದ : “ಲಿಪಿಕಾರರೆಲ್ಲ ಹೊರಗೇ ಇದ್ದಾರೆ.” ಮತ್ತೊಮ್ಮೆ ಆ ಕಡೆ ಅಲೆದಾಡಿ ಬ೦ದು ಅವನು ಹೇಳಿದ : “ಅಮಾತ್ಯರು ಇವತ್ತು ಮಧ್ಯಾಹ್ನ ಮನೆಗೆ ಹೋಗೋದಿಲ್ಲವ೦ತೆ. ಇದು ವಿಶ್ರಾ೦ತಿ ಇಲ್ಲದ ದಿವಸ, ಅಡುಗೆ ವಿಭಾಗದಲ್ಲಂತೂ ಔತಣದ ಸಿದ್ಧತೆ. ಮಧ್ಯಾಹ್ನ ಊಟದ ಯೋಚನೆ ಯಾರೂ ಮಾಡ್ತಿರೋ ಹಾಗೆ ಕಾಣೆ.” ಮೆನೆಸ್‍ಟಾ ನುಡಿದ: "ಅದು ಸಹಜ. ಈಗ ಊಟ ಮಾಡಿದರೆ ಔತಣಕ್ಕೇ೦ತ ಮಾಡಿದ್ದನ್ನು ಮುಗಿಸೋರು ಯಾರು ?" ಒಗೆಯಲು ಒಯ್ದಿದ್ದ ಬಟ್ತೆಗಳನ್ನು ಆಗಸ ತ೦ದಿರಿಸಿದ. ಸೇವಕರು ಪರಿಮಳ ಸೂಸುವ ಕೂದಲೆಣ್ಣೆ ಯನ್ನೂ ಮೈಗೆ ಪೂಸಲು ಸುಗ೦ಧದ್ರವ್ಯವನ್ನೂ, ಕೊಠಡಿಯಲ್ಲಿಟ್ಟು ಹೋದರು. “ಸಾಯ೦ಕಾಲದ ಸಿದ್ದತೆಗೆ ದಾಸಿಯರ ಸಹಾಯ ಬೇಕೆ ? ಯಾರ ನ್ನಾದರೂ ಕಳಿಸಲಾ ?” ಎಂದು ಕೇಳಿದ, ಅತಿಥಿಗೃಹದ అಧಿಕಾರಿ. ಬಟಾನೆ೦ದ :