ಪುಟ:Mrutyunjaya.pdf/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೦ ಮೃತ್ಯುಂಜಯ " ಕಂಡೂ ಕಾಣಿಸದ ಭವ್ಯತೆ; ಇದ್ದೂ ಇಲ್ಲದ ಠೀವಿ," ಎಂದು ಬಟಾ ಮೆಚ್ಚಿದ. "ಇಂಥ ಔತಣಗಳಲ್ಲಿ ಹೆಂಗಸರು ಕಾಟ ಇದ್ದೀತು. ಹುಷಾರಾಗಿರು, ಅಣ್ಣ” ಎಂದು, ನಗುತ್ತ ಆತ ಮಾತು ಸೇರಿಸಿದ. ಅರಮನೆಯ ಒಳಗೂ ಹೊರಗೂ ಇತರ ಕಟ್ಟಡಗಳಲ್ಲೂ ನೀಲಾಂಜನಗಳಿಗೆ, ಸಣ್ಣ ದೊಡ್ಡ ಹಣತೆಗಳಿಗೆ ಎಣ್ಣೆ ಸರಬರಾಜು. ಅಂದು ಸಂಜೆ ಕವಿಯು ವುದಕ್ಕೆ ಮೊದಲೇ ದೀಪ ಹಚ್ಚಿದರು. ಎಲ್ಲರಿಗೂ ಅಚ್ಚರಿ: ಹಗಲು ಮುಗಿದು ಇರುಳು ಮೆರೆಯತೊಡಗಿದ್ದು ಯಾವ ಕ್ಷಣದಲ್ಲಿ ? ಮಹಾದ್ವಾರದೆದುರು ರಾಜವೀಧಿ, ಜನದಟ್ಟಣೆ, ವೈಭವದ ದೀಪಾಲಂ ಕಾರವನ್ನು ನೋಡುವ ಹುಚ್ಚು ರಾಜಧಾನಿಯ ಪ್ರಜೆಗಳಿಗೆ. ಸೆನೆಬ್ ಓಡಿ ಬಂದು ಕೇಳಿದ : "ಸಿದ್ಧವಾಗಿದೀರಾ ?" “ ನಡೀರಿ. ಹೋಗೋಣ.” ಬಟಾನೆಂದ: “ ಮಹಾಮನೆಯ ಉದಾನದ ತನಕ ಅಂಗರಕ್ಷಕರಾಗಿ ಬರ್ತೇವೆ.” " ಹಹ್ಞ. ಬೇಗ." ನಡೆಯುತ್ತ ಸೆನೆಬ್ ಹೇಳಿದ: "ಸತ್ಕಾರಭವನದಲ್ಲಿ ಸರು ಸದಸ್ಯರನ್ನು ಬರಮಾಡಿಕೊಳ್ತಾ ನಿಂತಿದ್ದೆ, ಅಮಾತ್ಯರು ಗೇಬೂನ ಕರೆದು ಏನೋ ಹೇಳಿದ್ರು, ಗೇಬು ಬಾಗಿಲವರೆಗೆ ಹೋಗಿ, ಅಲ್ಲಿಂದ, ಒಳಗಿದ್ದ ನನಗೆ ಬಾ ಅಂತ ಸನ್ನೆ ಮಾಡಿದ್ರು." ಸ್ವಲ್ಪ ಆ ಮೆನೆಪ್ಟಾನ ಕರಕೊಂಡ್ಬಂದ್ಬಿಡಪ್ಪ" ಅಂತ ನನಗೆ ಹೇಳಿ, ರಾಣೀವಾಸ ದೊಳಗೆ ತಾವು ನುಸುಳಿದ್ರು, ಈಗ ನಾವು ಅಲ್ಲಿಗೆ ತಲಪೋದರೊಳಗೆ ಪುನಃ ಬಾಗಿಲ ಹತ್ತಿರ ನಿಂತಿರ್ತಾರೆ, ನೋಡಿ ಬೇಕಾದರೆ.” ಸೆನೆಬ್ ಸರಿಯಾಗಿಯೇ ತರ್ಕಿಸಿದ್ದ. ಗೇಬು ಮೆಟ್ಟಲುಗಳನ್ನು ಇಳಿದು ಬಂದ, ಮೆನೆಪ್ಟಾನ ತೋಳು ಹಿಡಿದು ಕುಲುಕಿ, "ಓ ಮೆನೆಪ್ಟಾ ಎಷ್ಟು ಸೊಗಸಾಗಿ ಕಾಣ್ತೀರಿ ! ನಿಮ್ಮ ವಿಷಯ ಯೋಚಿಸದ ದಿನವಿಲ್ಲ, ನಾಳೆ--ನಾಡದು ಅಂತ ಇಷ್ಟು ಕಾಲ