ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೩೧೧
ಇದೊಂದೇ ಬಟ್ಟಲು," ಎಂದ ಮೆನೆಪ್ಟಾ. ಆತ ಒಂದು ಗುಟುಕು ಸೇವಿಸಿದಾಗ, ಆಗಲೇ ಅರ್ಧ ಬಟ್ಟಲನ್ನು ಬರಿದು ಗೊಳಿಸಿದ್ದ ಗೇಬು ಕೇಳಿದ: "ಹೇಗಿದೆ?" ಚೆನ್ನಾಗಿದೆ. ನಿಜ ಹೇಳಲೆ? ಇಂಥ ರುಚಿಗೆ ನಾನು ಅಪರಿಚಿತ. ಖಿವವ ಬಿಟ್ಟು ಬೇರೆ ಯಾವ ಸುರೆಯನ್ನೂ ನಾನು ಮುಟ್ಟಿದವನಲ್ಲ." "ಹಾಂ? ಇನ್ನೊಂದನ್ನು ಮುಟ್ಟಿದವನಲ್ಲ! ನೆಹನಗೆ ಇದನ್ನ ಹೇಳ್ಬೇಕು!" ....ದಾಸದಾಸಿಯರು ಬರಿದಾದ ಬಟ್ಟಲುಗಳನ್ನು ತುಂಬುತ್ತ ಬಂದರು. ಎರಡನೆಯ ಸಲ ಬಟ್ಟಲನ್ನೆತ್ತಿಕೊಂಡು ಗೇಬು ಅಂದ: " ಹೆಖ್ವೆಟ್, ನನಗೆ ಯಾರ ಜತೆಗೂ ಜಗಳಬೇಡ." "ಜಗಳ ಕಾಯೋಕೆ ತೋಳ್ಬಲ ಬೇಕಪ್ಪ ಗೇಬು," ಎಂದು ಹೆಖ್ವೆಟ್ ಕಡ್ಡಿಯಂಥ ತನ್ನ ಎಡ ತೋಳನ್ನು ಎತ್ತಿ ಮಡಚಿ ತೋರಿಸಿದ. ಇಬ್ಬರು ವಾದಕರೂ ತಂತಿಗಳನ್ನು ಮಿಟತೊಡಗೆದ್ದರು. ಧ್ವನಿ ಪುಷ್ಟಿ ಪಡೆದಿತ್ತು. ಮಾತುಗಳೂ ಬಲಪಡೆದು ತಾರಕಕ್ಕೇರಿದುವು. ದಾಸದಾಸಿಯರ ಇರುವೆ ಸಾಲು ಬೆಳ್ಳಿಯ ತಾಟುಗಳನ್ನು ಹೊತ್ತು ತಂದಿತ್ತು. ಪೆರೋಗೂ ಪಟ್ಟದ ಮಹಿಷಿಗೂ ಬಂಗಾರದ ತಾಟುಗಳು, ಪುಟ್ಟ ಮೇಜುಗಳು ಮೇಲೆ ಅವನ್ನಿಟ್ಟರು. ತನಗೆ ತುಸು ಮತ್ತೇರಿದಂತೆ ಅನಿಸಿತು ಮೆನೆಪ್ಟಾಗೆ. ಬಟಾನೊಡನೆ ಮಾತನಾಡಬೇಕೆಂಬ ಹಂಬಲ, ("ತಟಕ್ಕನೆ ತಿರುಗಿ 'ಬಟಾ' ಅಂತ ಕೂಗ್ಬೇಡ. ನಾನು ಅಲ್ಲಿರೋದಿಲ್ಲ") ದೃಷ್ಟಿ ನಿರ್ಲಜ್ಜವಾಗಿ ನೆಹನವೇಯ್ಟಳ ಬಲಮೊಲೆಯ ತೊಟ್ಟಿನತ್ತ ಸರಿಯುತ್ತಿತ್ತು. (ಇವಳು ನನ್ನನ್ನು ನೋಡ್ತಿರೋ ಹಾಗಿದೆಯಲ್ಲ್ಲ. ನನ್ನನ್ನೋ? ಗೇಬುವನ್ನೋ? ಊಹೂಂ. ಗೇಬುವಿನ ದೃಷ್ಟಿ ದಾಸಿಯರ ಮೇಲಿದೆ.) ಸಂಧಿಸುವ ದೃಷ್ಟಿಗಳು (ಮುಗುಳು ನಗೆಯೋ? ಅಟ್ಟಹಾಸವೋ ? ವಿಕಾರವಾಗಿ ಕಾಣಿಸುತ್ತಿದೆಯಲ್ಲ ಅವಳ ಮುಖ ? ಕೆಂಪು ತುಟಿಗಳಿಗಿಂತ ಮೇಲು ಕಡುಗೆಂಪು, ಕಪ್ಪು ಬೆರೆತ ಮೂಲೆತೊಟ್ಟು. ಇವರೆಲ್ಲ ಹಾಲೂಡುವ ತಾಯಂದಿರು. ನಾವೆಲ್ಲ ಮಕ್ಕಳು.)