ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೪
ಮೃತ್ಯುಂಜಯ ಮೆನೆಪ್ ಟಾ :"ಓಹೊ. ಓಹೊ." ಗೇಬು: "ಕುಸ್ತಿಯಲ್ಲಿ ನಿಸ್ಸಿಮ. ಈಗ ಮಾತ್ರ ಸ್ವಲ್ಪ ಕಷ್ಟ. ಎದುರಾಳೀನ ಒಂದೇ ಕಣ್ಣಲ್ಲಿ ನೋಡ್ಬೇಕು !” ಹೆಖ್ವೆಟ್ : "ಬಿದ್ದ ! " ಒಬ್ಬ ಇನ್ನೊಬ್ಬನನ್ನು ಎತ್ತಿ ಕೆಡವಿದ. ಕೆಳಗೆ ಬಿದ್ದವನು ನಿಂತಿದ್ದವನ ಕಾಲುಹಿಡಿದು ಎಳೆದ. ಆತ ಜಗ್ಗಲಿಲ್ಲ, ಬಿದ್ದವನಿಗೆ ಮತ್ತೆ ಮತ್ತೆ ಗುದ್ದು, ಅವನು ಸೋತು ಅಂಗಾತ ಮಲಗಬೇಕು. ಅಷ್ಟರಲ್ಲೆ ಅದು ಹೇಗಾಯಿತೊ ? ನಿಂತಿದ್ದವನು ಬಿದ್ದ, ಉರುಳಾಟ ನೆಲದ ಮೇಲೆ. ಧಿಗ್ ಧಿಗ್ ಧಿಗ, ಜೊಂಡು ವಾದ್ಯದ ಭೋರ್ಗರೆತ. ಮುಂದೆ ಎರಡೇ ಕ್ಷಣಗಳಲ್ಲಿ ಒಬ್ಬ ಎದ್ದ, ಇನ್ನೊಬ್ಬ ಬಿದ್ದ. ಗೆದ್ದವನು ಯಾರು ? ಮೊದಲು ಬಿದ್ದವನೊ ? ನಿಂತಿದ್ದವನೊ? ಕೆಲ ಕುಸ್ತಿ ಪ್ರಿಯರಿಗಷ್ಟೇ—ಹೆಚ್ಚಾಗಿ, ಅಲ್ಲಿದ್ದ ಪರಿಚಾರಕರಿಗೆ ಅದನ್ನು ತಿಳಿಯುವ ಕುತೂಹಲ.ಉಳಿದವರಿಗೆ ಬರಿಯ ರಂಜನೆ. ('ಅದೂ ಗೂಳಿ, ಇದೂ ಗೂಳಿ, ಯಾವುದು ಇದ್ದರೇನು? ಯಾವುದು ಹೋದರೇನು?') ('ಈ ಮುದುಕ – ಏನಪ್ಪ ಇವನ ಹೆಸರು__ಹೆಖ್__ಹೆಖ್ವೆಟ್.ಎಷ್ಟು ಚೆನ್ನಾಗಿ ಊಟ ಮಾಡ್ಡ ! ಈ ಬಡಕಲು ಜೀವನ ಹೊಟ್ಟೀಲಿ ಇಷ್ಟು ಜಾಗ ಇತ್ತೆ ? ಆಶ್ಚರ್ಯ ! ಆಶ್ಚರ್ಯ !') ಡೋಲು ಬಡೆಯುತ್ತಿಲ್ಲ. ಜೊಂಡುವಾದ್ಯದವನು ಉಸಿರಿನ ಕಸರತ್ತು ನಿಲ್ಲಿಸಿದ್ದಾನೆ. ಮತ್ತೆ ತಂತಿಗಳ ಮೊರೆತ, ನಿಧಾನವಾಗಿ ಆರಂಭವಾಗುತ್ತಿದೆ, ಜೋಡಿ ಚಪ್ಪಾಳೆ. ಗೇಬು ಉದ್ಗರಿಸಿದ: "ಆಹ್!" ಇಬ್ಬರು ನರ್ತಕಿಯರು ಬಂದು ದೂರದಿಂದಲೇ ರಾಜನಿಗೂ ರಾಣಿಗೂ ನಮಿಸಿದರು. ಚಪ್ಪಾಳೆಯನ್ನು ಅನುಸರಿಸಿ ಹೆಜ್ಜೆ ಇಟ್ಟರು. ಗೇಣುದ್ದದ ನಡುವಸ್ತ್ರ. ಹೆಣೆದ ನೀಳಕೇಶ. ಅಂಗಾಂಗಗಳಲ್ಲಿ.ಯೌವನದ ಸೊಬಗು.