ಪುಟ:Mrutyunjaya.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೨೭ “ದೇವತಾಮೂರ್ತಿಗಳು. ಸ್ವಲ್ಪ ಪ್ರೋಕ್ಷಾಳನ....” “ಕೊಡು. (ಬಟಾ ನೀಡಿದುದನ್ನು ಕೈಗಳಲ್ಲಿ ಹಿಡಿದು ಪರೀಕ್ಷಿಸುತ್ತ) ಎಲ್ಲಿ ಕೊಂಡದ್ದು? ಬಹಳ ಸೊಗಸಾಗಿವೆ.” ಹೇಳದೆ ಇರುವುದು ಸರಿಯಲ್ಲವೆನಿಸಿ ಬಟಾ ನುಡಿದ : “ಕೊಂಡದ್ದು ಅಪೋಫಿಸ್ ನ ಅಂಗಡೀಲಿ. ಆದರೆ ಮೂಲತಃ ಇವು ನಮ್ಮ ಪ್ರಾಂತದ್ದೇ." "ಹಾಗಾ? ಅಪೋಫಿಸ್ ದೊಡ್ಡ ಕಳ್ಳ. ದೈವಭಕ್ತಿ ಕಡಿಮೆ. ಒಂದಕ್ಕೆ ಹತ್ತು ಪಟ್ಟು ಬೆಲೆಗೆ ಮಾರ್ತಾನೆ. ಹೊರಗಿನಿಂದ ಬರೋ ಭಾರಿ ಭಾರೀ ವರ್ತಕರ ಜತೆಗೆಲ್ಲ ಅವನ ಸ್ನೇಹ. ಅಂದ ಹಾಗೆ ಬಟಾ,ಊರಿನಿಂದ ಬರ್ತಾ ಒಂದುನೂರು ಮೂತ್ರಿಗಳನ್ನು ಯಾಕೆ ತರಬಾರದು ನೀನು ?” ಮೋಸವಾಯಿತು; ಅಪೋಫಿಸನ ಅಂಗಡಿ ಮಗ್ಗುಲಲ್ಲೇ ಮೂರ್ತಿಗಳಿಗೆ ಪವಿತ್ರಸೇಚನ ಮಾಡಿಸಬೇಕಾಗಿತ್ತು---ಏನಿಸಿತು ಬಟಾನಿಗೆ.ಆತ ಸುಮ್ಮನಿದ್ದುದನ್ನು ಕಂಡು ಇನೇನಿಯೇ ಮಾತು ಮುಂದುವರಿಸಿದ: “ಯೋಚಿಸಿ ನೋಡು. ನನ್ನ ಹತ್ತಿರವೇ ಮೂರ್ತಿಗಳಿದ್ದರೆ ಪವಿತ್ರ ಸೇಚನ ಮಾಡಿ ನೇರವಾಗಿ ಭಕ್ತರಿಗೇ ಕಡಿಮೆ ಮೌಲ್ಯಕ್ಕೆ ಕೊಡಬಹುದು. ಪ್ ಟಾ ದೇವರಿಗೂ ಇದು ಇಷ್ಟವಾಗ್ತದೆ.” “ಹೌದು. ನೀವು ಹೇಳೋದು ನಿಜ, ಅರ್ಚಕರೇ.” “ಅಪೋಫಿಸ್ ಏನಾದರೂ ಕೇಳಿದ್ನೆ ?” “ಕೇಳ್ದ. ಆದರೆ ವರ್ತಕರ ವ್ಯವಹಾರಕ್ಕೆ ನಾವು ಅಡ್ಡ ಬರಬಾರ್ದು ಅಂದ್ಬಿಟ್ಟೆ." "ಒಳ್ಳೇ ಕೆಲಸ ಮಾಡ್ದೆ,” ಎಂದು ಹೇಳಿ ಇನೇನಿ ಮೂರ್ತಿಗಳನ್ನು ಮಗ್ಗುಲು ಕೊಠಡಿಗೆ ಒಯ್ದು, ಪವಿತ್ರ ಜಲಸೇಚನಕ್ಕಾಗಿ. ಅಲ್ಲಿಂದ ಪ್ರಾರ್ಥನಾ ಸ್ತೋತ್ರವನ್ನು ಗಟ್ಟಿಯಾಗಿ ಆತ ಪಠಿಸಿದ. ಹೊರಗೆ ಬಂದವನು ಮೂರ್ತಿಗಳನ್ನು ಬಟಾನಿಗೆ ಕೊಟ್ಟು, ನೆಲದ ಮೇಲಿದ್ದ ಕಸೂತಿ ಚೀಲವನ್ನೆತ್ತಿಕೊಂಡು, “ಕುಸುರಿ ಕೆಲಸ. ಚೆನ್ನಾಗಿದೆ. ನಿಮ್ಮೂರಿನ್ದಾ ?" ಎಂದ.