ಪುಟ:Mrutyunjaya.pdf/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೦ ಮೃತ್ಯುಂಜಯ ನೆಮ್ಮದಿಯಿಂದ ಬದುಕೋದು ಸಾಧ್ಯವಾಗ್ಬೇಕು. ರಾಜಧಾನಿ ಇದಕ್ಕೆ ಆಸ್ಪದ ಇತ್ತರೆ ಎಲ್ಲರಿಗೂ ಹಿತ. ಅದಕ್ಕಾಗಿ ಇಲ್ಲಿದ್ದು ನಾನು ಪ್ರಯತ್ನಿಸ್ತೇನೆ. ಊರಲ್ಲಿ ಎಲ್ಲರಿಗೂ ಇದನ್ನು ವಿವರಿಸಿ ಹೇಳು.” “ಆಗಲಿ, ನೀರಿಗಿಳಿದ್ಮೆಲೆ ಈಸಲೇಬೇಕಲ್ಲ?" ಹೊರಗೆ ಜನರ ಗುಜುಗುಜು ಕೇಳಿಸಿತು.ಔಟ ಓಳಗೆ ಬಂದು ನುಡಿದ : “ಬಟಾ ಅಣ್ಣ ಊರಿಗೆ ಹೋಗ್ತಾರೇಂತ ಸುದ್ದಿ ಹಬ್ಬಿ ಅರಮನೆ ಕೆಲಸ ಗಾರರು ಒಂದಷ್ಟು ಜನ ಬಂದಿದ್ದಾರೆ ನೋಡೋದಕ್ಕೆ.” “ಅಷ್ಟು ಸಂತೋಷವಾಗಿದೆಯೆ ಅವರಿಗೆ ?” “ಸಂತೋಷ ಅಲ್ಲಣ್ಣ.” “ಅಲ್ಲವಾ ? ದುಃಖ ಅನ್ತೀಯಾ ? (ನಾಯಕನತ್ತ ನೋಡಿ) ನಾನು ಇಷ್ಟೊಂದು ಜನಪ್ರಿಯ ಅಂತ ಮೊದಲೇ ಗೊತ್ತಾಗಿದ್ದಿದ್ರೆ ಊರಿಗೆ ಹೋಗೋ ಯೋಚ್ನೇನೇ ಮಾಡ್ತಿರ್‍ಲಿಲ್ಲ. ಇಲ್ಲಿಯೇ ಇನ್ನೊಂದು ಮದುವೆ ಯಾಗಿ, ದೇವತಾಮೂರ್ತಿಗಳನ್ನು ಸರಬರಾಜು ಮಾಡ್ಕೊಂಡು-” ದುಗುಡವನ್ನು ಮರೆಸಿ ಲವಲವಿಕೆ. ಮೆನೆಪ್ ಟಾನೂ ಉಲ್ಲಸಿತನಾದ. “ಹೊರಗೆ ಜನ ಮುತ್ತಿದರು. “ಇವತ್ತು ಸಂಜೆ ಹೊರಡ್ತೀರಾ ?” “ನಾಳೆ ಬೆಳಿಗ್ಗೇನಾ ?” “ಹೋಗ್ಬನ್ನಿ.” “ನಿಮ್ಮ ನಾಯಕರನ್ನು ನಾವು ನೋಡ್ಕೋತೇವೆ.” “ನೀನಲ್ಲದೆ ನಮಗೂ ಬೇಜಾರು." బేజారు.” “ಬಂದ್ಮೇಲೆ ಒಂದ್ಸಲ ಕೊಳಲು ಬಾರಿಸ್ಬೇಕು ಅಣ್ಣ." ಬಟಾನ ಕಣ್ಣುಗಳಲ್ಲಿ ಹನಿ ಆಡಿತು. ಬಟಾ ಗಲ್ಲವನ್ನು ಮೇಲಕ್ಕೆತ್ತಿ ಮುಖವರಲಳಿಸಿ ನಕ್ಕ.... ....ಅತಿಥಿಗೃಹದ ಅಧಿಕಾರಿಗೆ ಬಟಾನೆಂದ : ನಾಳೆಯಿಂದ ಊಟಕ್ಕೆ-ಅಲ್ಲ,ಭೋಜನಕ್ಕೆ-ಮೂವರೇ". “ಗೊತ್ತಾಯ್ತು"." ರಾತ್ರಿ ಪರಿಚಾರಕರು ಬಟಾನಿಗೂ ಅಂಬಿಗರಿಗೂ ದಾರಿಯ ಬುತ್ತಿ ತಂದು ಕೊಟ್ಟರು .ಒಂದು ತೊಗಲಿನ ಚೀಲವನ್ನು ಖಿವವ ಬಂತು. ಅತಿಥಿಗೃಹ, ಪಾಕಶಾಲೆ, ಉಗ್ರಾಣಗಳ ಮುಖ್ಯಸ್ಥ್ರರ ಗಮನಕ್ಕೆ ಈ ಅಂಶವನ್ನು ತರುವುದು