ಪುಟ:Mrutyunjaya.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೮ ಮೃತ್ಯುಂಜಯ

ರೊಳಗೆ ಅರಮನೆಯ ಪಲ್ಲಕಿ ಇಲ್ಲಿಗೆ ಬರ್ತದೆ. ನಿನ್ನ ಪ್ರಯಾಣ ಸುಖಕರವಾಗಲಿ. ಪೆರೋನ ಆಯುರಾರೋಗ್ಯ ವರ್ಧಿಸಲಿ !” ಪ್ರತಿಯಾಗಿ ಹೆಖ್ವೆಟನೂ ಆಂದ: “ಪೆರೋನ ಆಯುರಾರೋಗ್ಯ ವರ್ಧಿಸಲಿ.ಮಹಡಿಯ ಬಾಗಿಲು ಜೋಪಾನ.ತಲೆ ತಗಲೀತು.” ಹಾಯಿ ಬಿಚ್ಚದೆಯೇ ಅಳಿವೆಯ ದಿಕ್ಕಿಗೆ ಪಯಣ.ಹರಿಯುತ್ತಿದ್ದ ನದಿಯ ಮಂದಗತಿಗೆ ಅನುಗುಣವಾಗಿ ದೋಣಿಯ ಚಲನೆ.ಅರಮನೆಯ ಪ್ರದೇಶದ ಪ್ರಕಾರ ಮುಗಿಯಿತು. ಹಳ್ಳಿ .ಗುಡಿಸಲುಗಳು, ಹೊಲಗಳು ಆ ಕಡೆ ಈ ಕಡೆ ಉದ್ದಕ್ಕೂ ಹಸುರು. ('ಕಣ್ಣಿಗೆ ಈ ಬಣ್ಣ ಒಳ್ಳೇದು....ನೆಫರ್ ಟೀಮ್ ಮೊನ್ನೆ ಕಣ್ಣುಗಳಿಗೆ ಹಸುರು ಬಳಕೊಂಡಿದ್ಲು.' 'ಇಷ್ಟು ನಿಧಾನವಾಗಿ ಹೋದರೆ ಆನ್ ತಲಪೋದು ಯಾವಾಗ? ಅಮಾತ್ಯ ಹೇಳಿದ ಹಾಗೆ ಮುಚ್ಚಂಜೆಯ ಹೊತ್ತಿಗಾದರೂ ಊರು ಸೇರಬೇಕು. ಮಹಾ ಅರ್ಚಕ ಅಲ್ಲಿ ಏನು ಕಿತಾಪತಿ ನಡೆಸಿದಾನೊ ? ಕತ್ತಲಲ್ಲಿ ಅಪಾಯಗಳಿರ ಬಹುದು. ದೋಣಿಕಾರನನ್ನು ಉದ್ದೇಸಶಿಸಿ ಹೆಖ್ವೆಟ್ ಅಂದ : “ರಾಜನಾವೆ ಕತ್ತೆ ಕೆಟ್ಟುಹೋಯ್ತು? ಊಟ ಮಾಡಿಲ್ಲವಾ ನಿನ್ನ ಅಂಬಿಗರು.ಹುಟ್ಟು ಹಾಕೋದಕ್ಕೆ ಹೇಳು." ಅಪ್ಪಣೆ ಎನ್ನುವಂತೆ ದೋಣಿಕಾರ ತಲೆ ಅಲುಗಿಸಿದ.ಅಂಬಿಗರು ಹುಟ್ಟುಗಳಿಗೆ ಕೈ ಹಾಕಿದೊಡನೆ ದೋಣಿ ಒಮ್ಮೆ ಅಲುಗಿತು. ಚಲನೆಯ ಗತಿ ಕ್ರಮೇಣ ತೀವ್ರಗೊಂಡಿತು. "ನನಗಿಂತ ಎಷ್ಟೋ ಮೊದಲು ನೀನೇ ಅಮಾತ್ಯನಾಗಬೇಕಿತ್ತು. ಎಲ್ಲಿಯೋ ಎಳೆ ತಪ್ಪು” ಹೆಖ್ವೆಟ್ ಯೋಚಿಸಿದ : ನಿರ್ವಹಿಸಬೇಕಾದ ಹೊಣೆಯ ಭಾರ ದುಸ್ಸಾಹಸ ಆಮೆರಬ್ ಆ ಮಾತನ್ನು ಆಡಿದ. నిజ.ಜೀವನಪ್ರವಾಹ ತಮ್ಮಿಬ್ಬರದೂ ఒంದೇ బಗೆ. (ಆದರೆ ಕೆಲ ವರ್ಷಗಳ ಅಂತರದಲ್ಲಿ.) ಅರಮನೆಯ ಉಗ್ರಾಣದ ಅಧಿಕಾರ; ಗೋರಿಗಳ ಪ್ರದೇಶದ ಉಸ್ತುವಾರಿ; ಕಲ್ಲುಗಳನ್ನು ಕಡಿದು ಅವುಗಳ ಸಾರಿಗೆ.