ಪುಟ:Mrutyunjaya.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೨೭

ಲಿಪಿಕಾರ ಗಿರಾಕಿಗಳ ಹೆಸರು ಬರೆದುಕೊಡುತ್ತಿದ್ದ. ಇಬ್ಬರು ಮೂವರು
ಯುವಕ ಶಿಲ್ಪಿಗಳು ಎರಡು ಗೇಣುದ್ದ ಅಗಲದ ఒంದು ಮೊಳ ಎತ್ತರದ ಶಿಲಾ
ಫಲಕಗಳ ಮೇಲೆ ಆ ಅಕ್ಷರಗಳನ್ನು ಕೊರೆಯುತ್ತಿದ್ದರು.
ಆ ಫಲಕಗಳನ್ನು ಒಸೈರಿಸನ ಗೋరిಯ బಳಿ ನೆಡುವುದರಿಂದ ಆಗುವ
ಲಾಭವನ್ನು ಲಿಪಿಕಾರ ಪದೇ ಪದೇ ವಿವರಿಸುತ್ತಿದ್ದ.
ಗೋರಿ ಕಟ್ಟೋ ಹಕ್ಕು ಮೊದಲು ಪೆರೋಗೆ ಮಾತ್ರ ಇತ್ತು. ಅವರಿಗೆ
ಸಾವಿಲ್ಲ. ಯಾಕೆ ಅಂದರೆ ಒಸೈರಿಸನ ಕೃಪೆಯಿಂದ ಪೆರೋಗೆ ಪುನರುತ್ಥಾನ
ಸಾಧ್ಯ. ಮೂರು ಸಾವಿರ ವರ್ಷ ಅವರು ಬಾಳೋದು ಖಚಿತ. ....ಆಮೇಲೆ,
ಅಮಾತ್ಯರಿಗೂ ಗೋರಿ ನಿರ್ಮಾಣಕ್ಕೆ ಅನುಮತಿ ಸಿಕ್ತು . ಮುಂದೆ
ಭೂಮಾಲಿಕ ಪ್ರಭುಗಳೂ ಗೋರಿ ಕಟ್ಟಬಹುದೂಂತಾಯ್ತು. ನೀವು
ಭೂಮಾಲಿಕರಲ್ಲವಲ್ಲ. ಏನು ಮಾಡ್ತೀರಿ? ಇಲ್ಲಿನ ಕಥೆ ಮುಗಿದ್ಮೇಲೆ ಸುಖ
ಜೀವನ ಬೇಕೂಂತಾದ್ರೆ ಪರಲೋಕದಲ್ಲಿ ಒಸೈರಿಸನ ರಾಜ್ಯಕ್ಕೆ ಪ್ರವೇಶ
ಸಿಗ್ಬೇಕು. ಆ ನ್ಯಾಯಮೂರ್ತಿ ನಿಮ್ಮ ಮೇಲೆ ದಯೆ ತೋರಿಸ್ಬೇಕು. ಆ
ದೇವನ ಗೋರಿಯ ಹತ್ತಿರ ನಿಮ್ಮ ನಾಮಫಲಕವನ್ನಾದರೂ ನೆಟ್ಟರೆ, ಅದು
ಆತನ ಕಣ್ಣಿಗೆ ಬೀಳ್ತದೆ. నిಮ್ಮ ಹೆಸರು ಅವನ ನೆನಪಿನಲ್ಲಿ ಉಳೀತದೆ.
ಹ್ಞಾ....ಈಗ ಗೊತ್ತಾಯ್ತಾ ? ಹೇಳಿ. ಇನ್ನು ಯಾರಿಗ್ಬೇಕು? ಏನು
ಹೆಸರು?"
ದಿಬ್ಬವನ್ನಾಗಲೇ ಬಹಳ ಜನ ಏರಿದ್ದರು. ಅಲ್ಲಿ ಇಲ್ಲಿ ತುಸು ಸ್ಥಳ
ವಿತ್ತು.
ಮೆನೆಪ್ಟಾನ ತಂಡವನ್ನು ಕಂಡು ಒಬ್ಬನೆಂದ:
"ಬೇಗ ಸ್ಥಳ ಹಿಡೀರಿ. ಉತ್ಸವದ ತುದಿಬುಡ ಎಲ್ಲ ನೋಡ್ಬೇಕು
ಅಂದ್ರೆ ಒಬ್ಬೊಬ್ಬನೂ ಹಲವು ರೂಪ ಧರಿಸ್ಬೇಕು. ಸೆತ್ ತನ್ನ అಣ್ಣನನ್ನು
ಹದಿನಾಲ್ಕು ಹೋಳು ಮಾಡಿ ಹದಿನಾಲ್ಕು ಕಡೆ బಚ್ಚಿಟ್ಟ . ಐಸಿಸ್ ಗಂಡನ
ಮೃತ ಶರೀರದ ಹದಿಮೂರು ಹೋಳು ಕಂಡುಹಿಡಿದ್ಲು. ಪ್ರತಿಯೊಂದು
ಕಡೆಯೂ ಸಿಕ್ಕ ಹೋಳಿನ ಆಧಾರದ ಮೇಲೆ ಉಳಿದ ದೇಹವನ್ನು ಕಲ್ಪಿಸಿ ಇಡೀ
ಶರೀರ ನಿರ್ಮಿಸಿದ್ಲು. ಒಂದೇ ರೀತಿಯ ಹದಿಮೂರು ಶರೀರ, ಹದಿಮೂರು
ಕಡೆ ಹುಗಿದ್ಲು. ಅಬ್ಟುವಿನಲ್ಲಿ ಸಿಕ್ಕಿದ್ದು ತಲೆ___ಕಿರೀಟ ಹೊತ್ತ ತಲೆ. ಅದೇ