ಪುಟ:Mrutyunjaya.pdf/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಇವಳು ಮಹಾ ಕಳ್ಳಿ–ಎನಿಸಿತು ಹೆಖ್ವೆಟ್ ಗೆ. ತನ್ನ ನಿಶ್ಯಕ್ತಿಗಾಗಿ ಮೌನವಾಗಿ ರೋದಿಸುತ್ತ ಬೆರಳಿನ ಉಗುರುಗಳಿಂದ ದಾಸಿಯ ಮೈಮೇಲೆ ಗುರುತುಗಳನ್ನು ಉಳಿಸಲು ಆತ ಯತ್ನಿಸಿದ.

ಅತಿಥಿಗೃಹದ ಹೊರಗಿನಿಂದ ಕೇಳಿಸುತ್ತಿದ್ದ ಹೆಜ್ಜೆ ಸಪ್ಪಳ ಹಾಗೂ ಗಂಟಲು ಧ್ವನಿಗಳು ಮೆನೆಪ್ ಟಾಗೆ ಪರಿಚಿತವಾದುವು. ಎದುರುಗಡೆಯಿಂದ ಹಾದುಹೋದವರು ಯಾರು ? ಮಾತು ಯಾರದು ?-ಎಂದು ಕುಳಿತಲ್ಲಿಂದಲೇ ಗುರುತು ಹಿಡಿಯಲು ಅವನು ಶಕ್ತನಾದ.

ಬಟಾ ಊರಿಗೆ ಹೋದಂದಿನಿಂದ ಮೆನೆಪ್ ಟಾಗೆ ಬೇಸರ . ಅದು ಅಂಟು ಜಾಡ್ಯವಾಗಬಾರದೆಂದು , ಬೆಕ್ _ಔಟರೆದುರು ಸಾಧ್ಯವಾದಷ್ಟು ಮಟ್ಟಿಗೆ ಪ್ರಸನ್ನ ಭಾವದಿಂದಿರಲು ಅವನು ಯತ್ನಿಸಿದ.ಔಟನ ಜತೆಗೋ ಬೆಕ್ ನ ಜತೆಗೋ ಚೌಕಮಣೆ ಆಟ ಆಡುತ್ತಿದ್ದ. ಅತಿಥಿಗೃಹದ ಎದುರಿನ ಉದ್ಯಾನದಲ್ಲಿ ಹೊತ್ತು ಕಳೆಯುತ್ತಿದ್ದ. ಆಗೊಮ್ಮೆ ಈಗೊಮ್ಮೆ ಅರಮನೆಯ ಕೆಲಸಗಾರರು ಉದ್ಯಾನದ ಅಂಚಿನಲ್ಲಿ ವಿನಮ್ರ ಭಾವದಿಂದ ನಿಂತಾಗ, ಅವರೊಡನೆ ಅವರ ಸುಖದುಃಖದ ಒಂದೆರಡು ಮಾತು ಆಡುತ್ತಿದ್ದ. ಅತಿಥಿಗೃಹದ ದ್ವಾರಪಾಲಕ ಭಟರು ಆ ಅಳುಗಳನ್ನು ಓಡಿಸಲು ಒಮ್ಮೆ ಯತ್ನಿಸಿದಾಗ ಅವನೆಂದ : " ಓಡಿಸ್ಬೇಡಿ. ನನಗೇನೂ ತೊಂದರೆಯಾಗೋದಿಲ್ಲ."
 ಎಚ್ಚರದ ಶಯನ, ಮಂಪರು, ಮಾತು.

ಅಮಾತ್ಯ ಭವನದ ಲಿಪಿಕಾರ ಸೆನೆಬ ದಿನಕ್ಕೊಮ್ಮೆ ಮಾತನಾಡಲು ವಿಷಯದ ಅಭಾವ. (" ಉಪಾಹಾರ (ಭೋಜನ) ಆಯ್ತೆ?" ಅಥವಾ, “ಬಟಾ ಊರು ಸೇರಿದ ಏಳನೇ ದಿವಸ ಯಾವನಾದರೂ ದೋಣಿಕಾರ ಸಂದೇಶ ತರಬಹುದು ಅನ್ತೇನೆ." ಇಲ್ಲವೆ, " ಒಂಟಿಯಾಗಿ ಹೊತ್ತು ಕಳೆಯೋದು ಕಷ್ಟವಾಗಿರ್ಬೇಕು." ಒಮ್ಮೊಮ್ಮೆ ಕಣ್ಣು ಮಿಟುಕಿಸಿ, " ಇದೊಳ್ಳೇ ಸೆರೆಮನೆ ಇದ್ದ ಹಾಗೆ ನಿಮಗೆ !")