ಪುಟ:Mrutyunjaya.pdf/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಅತಿಥಿಗೃಹದ ಉಸ್ತುವಾರಿಯ ಅಧಿಕಾರಿ ಕ್ರಮಬದ್ಧವಾಗಿ ದಿನಕ್ಕೆ ಮೂರು ಸಲ ಮುಖ ತೋರಿಸುತ್ತಿದ್ದ. (" ಭೋಜನಕ್ಕೆ ನಿಮಗೆ ಇಷ್ಟವಾದದ್ದು ಏನು ಬೇಕಾದರೂ ಹೇಳಿ. ಮಾಡಿಸ್ತೇನೆ.”) ಮೆನ್ನ ಬಂದಿರಲಿಲ್ಲ. ಆದರೆ ಇರುಳಲ್ಲಿ ఒಮ್ಮೆ ಔಟನನ್ನು ಕಂಡು, "ಕೆಫ್ಟು ವಿಷಯ ನೆನಪಿದೆ. ಕಟ್ಟೆಯ ಮೇಲೆ ಲಕ್ಷ್ಯವಿಟ್ಟದ್ಧೇನೆ. ನಾವೆ ಬಂದ ತಕ್ಷಣ ಅವನನ್ನು ಕಾಣ್ತೇನೆ," ಎಂದಿದ್ದ. ....ಬಟಾ ಹೋದ ಮಾರನೆಯ ದಿನ. ಮೆನೆಪ್ಟಾ ಅಂದುಕೊಂಡ ಃ “ಬಟಾ ಅರ್ಧಕ್ಕೂ ಹೆಚ್ಚಿನ ದೂರ ಕ್ರಮಿಸಿರಬೇಕು. ಇನ್ನು ಎರಡು ಮೂರು ದಿನಗಳಲ್ಲೇ ಬಂಧುಗಳ ಮಧ್ಯದಲ್ಲಿರ್ತಾನೆ” ಮಧ್ಯಾಹ್ನ ತಟ್ಟೆಯ ಮುಂದೆ ಕುಳಿತಾಗ ಅವನಿಗೆ ವಿಸ್ಮಯ ಃ “ರುಚಿ ಕರವಾದ ಇದೊಂದೂ ನನಗೆ ಸೇರುತ್ತಿಲ್ಲವಲ್ಲ. ನೆಫಿಸಾ ತಟ್ಟಿದ ರೊಟ್ಟಿ, ಈರುಳ್ಳಿ ಬೇಕು ಅಂತ ಆಸೆಯಾಗ್ತಿದೆಯಲ್ಲ....” ಬೇಸರ ಮತ್ತಷ್ಟು ಹೆಚ್ಚಿ. ಆತ ಪವಡಿಸಿದ. ಎಚ್ಚರವಾದಾಗ, ರಾ ಪಶ್ಚಿಮದತ್ತ ಹೊರಳಿ ಎಷ್ಟೋ ಹೊತ್ತಾಗಿತ್ತು. ರಾ ಬಿಂಬ ಥಳಥಳಸುತ್ತಿದ್ದರೂ ಪ್ರಖರತೆ ಕಡಿಮೆಯಾಗಿತ್ತು. ಕಿಟಕಿಯಿಂದ ತನ್ನ ದೃಷಿಯನ್ನು ಬಾಗಿಲಿನತ್ತ ಮೆನೆಪ್ಟಾ ಹರಿಸಿದ. ಅಲ್ಲಿ ಔಟ ಕುಳಿತಿದ್ದ. "ಏನು ಔಟ ?” ನಯಕ ಎಚ್ಚರಿರುವುದನ್ನೆ ಇದಿರುನೋಡುತ್ತಲಿದ್ದ ಔಟನಿಗೆ ಸಂತಸ. ಆತನೆಂದ : “ ಸ್ವಲ್ಪ ಹೊತ್ತಿಗೆ ಮುಂಚೆ ಮಹಾ ಅರ್ಚಕರು ಮತ್ತು ಹೆಖ್ವೆಟ್ ಬಂದರಂತೆ." ಮುಗುಳುನಗೆ ವೆುನೆಪ್ಟಾನ ಮುಖದಗಲಕ್ಕೂ ಹರಡಿತು. ಅವನು ನೀಳವಾಗಿ ಉಸಿರುಬಿಟ್ಟು. ಕೈಕಾಲುಗಳನ್ನು ಹಗುರಗೊಳಿಸಿ ಎದ್ದು ಕುಳಿತ. ಹರ್ಷದ ಭಾವನೆ. ಗಟ್ಟಿಯಾಗಿ ಧ್ವನಿಗಳನ್ನು ಹೊರಡಿಸ ಬೇಕೆನಿಸಿತು. 'ಬಟಾ ಇದ್ದಿದ್ದರೆ ಛಾವಣಿ ಎತ್ತರಕ್ಕೆ ನೆಗೆಯುತ್ತಿದ್ದ' ಎಂದು ಕೊಂಡ.