ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ಸಾಧನ, ದಂತದ-ಹಾಲುಗಲ್ಲಿನ-ಕಂಚಿನ ಪಾತ್ರೆಗಳಲ್ಲಿ ವಿವಿಧ ಸುಗಂಧ ದ್ರವ್ಯಗಳು-ಅಲ್ಲಿದುವು. ಸ್ವರೂಪದರ್ಶಕದ ಇಕ್ಕೆಲೆಗಳಲ್ಲೂ ತಾಮ್ರದ ತೆರೆದ ಕಪಾಟಗಳಲ್ಲಿ ಝಗಝಗಿಸುತ್ತಿದ್ದುವು. ಕಿರೀಟಗಳು, ಕೊರಳಿನ, ತೋಳು ಮಣಿಕಟ್ಟುಗಳ ಎಣಿಕೆಗೆ ನಿಲುಕದ ಆಭರಣಗಳು
“ನಿಧಾನಿಸ್ಬೇಡಿ....ನಾನು ಹೋಗ್ತಿರೋದು ದೇವದರ್ಶನಕ್ಕೆ, ಔತಣಕ್ಕల్ల." ದಾಸಿಯರು ಒರೆಸುವ-ಹಚ್ಚುವ, ಕಳಚುವ-ತೊಡಿಸುವ ತಮ್ಮ ಕೆಲಸ ವನ್ನು ತೀವ್ರಗೊಳಿಸಿದರು. ಅನುಜ್ಞೆಗಳಿಗಾಗಿ ಕಾದಿದ್ದ ಸೇವಕಿಯರನ್ನು ಉದ್ದೇಶಿಸಿ ನೆಫರ್ ಟೀಮ್ ಅಂದಳು : “ಹೊವಿನ ತಟ್ಟೆಗಳನ್ನು ಸಿದ್ಧಗೊಳಿಸಿ." ಮೇಲುದವನ್ನು ಬಲ ಸ್ತನದ ಕೆಳಗೆ ದಾಸಿ ಬಿಗಿಯುತ್ತಿದ್ದಂತೆ, ರಾಣಿ ಆದೇಶವಿತ್ತಳು: “ಹೊರಗಿರೋ ಚಿರತೆ ಚರ್ಮವನ್ನು ಸುರುಳಿ ಸುತ್ತಿ.” ಇದು ಯಾಕೆ ಎಂಬುದನ್ನು ಒಬ್ಬಿಬ್ಬರು ಊಹಿಸಿದರು.
ನೆಫರ್ ಟೀಮ್ ಳ ಸರಳ ಅಲೊಕಾರ ಮುಗಿಯಿತು. ಕೊನೆಯದಾಗಿ ತನ್ನ ಪ್ರತಿಬಿಂಬವನ್ನು ಆಕೆ ನೋಡಿಕೊಂಡಳು. ತಲೆಯ ಹಿಂದೆ ದಾಸಿ ಹಿಡಿದ ಸ್ವರೂಪದರ್ಶಕದಲ್ಲಿ ಮೂಡಿಬಂದ ಹಿಂಭಾಗದ ಪ್ರತಿಫಲನವನ್ನೂ ಗಮ ನಿಸಿದಳು.
ನದೀತಟದ ಬಳಿಗೆ ಓಡಿಹೋಗಿ ಮರಳಿದ ಬೆಂಟ್ ರಷ್ಟ್ ಅಂದಳು : “ರಾಜಕುಮಾರ ನದಿಯ ಆಚೆ ದಡದಲ್ಲಿ ಇರೋ ಹಾಗೆ ಕಾಣ್ತಿದೆ, ಮಹಾರಾಣಿ, ಕರಕೊಂಡು ಬರಲು ಅಂಬಿಗರು ಹೋಗಿದ್ದಾರೆ.” ಕಾಯುವುದೆಂದರೆ ಕಾಲವ್ಯಯ. ತನ್ನ ಮೆಚ್ಚುಗೆಯ ಪರಿಚಾರಿಕೆಯನ್ನು ಕರೆದು ರಾಣಿ ಅಂದಳು : “ಹೊರಡೋಣ. ಚಿರತೆ ಚರ್ಮ ಮತ್ತು ಹೂವಿನ ತಟ್ಟೆ ಗಳ ಜತೆ ಇನ್ನೊಂದು ಪಲ್ಲಕೀಲಿ ನೀನು ಬಾ.” * * * *