ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೩೯೯
ಅಮಾತ್ಯ ದುರ್ಬಲನಾಗಿದ್ದಂತೆ ಹೇಪಾಟ್ ಗೆ ಅನಿಸಲಿಲ್ಲ. ತಾನು ಪಟ್ಟು ಬಿಡಬಾರದೆಂದು,ಅವನು ಸತ್ಯಕ್ಕೆ ಸುಳ್ಳನ್ನೂ ಬೆರೆಸಿದ. "ಧರ್ಮಗುರುವಿನ ಭೇಟಿಗೆ ಎಷ್ಟೋಜನ ಅಧಿಕಾರಿಗಳೂ ಪ್ರಾಂತಪಾಲರೂ ಬರ್ತಾರೆ. ಅವರನ್ನೆಲ್ಲ ಉದ್ಧಟರು ಅಂತ ಕರೀತೀರಾ?" ಮಹಾ ಅರ್ಚಕ ಸುಳ್ಳಾಡುತ್ತಿದ್ದಾನೆ ಎನಿಸಿತು ಅಮಾತ್ಯನಿಗೆ. ಸುಳ್ಳಿಗೆ ಪ್ರತಿಯಾಗಿ ಸುಳ್ಳೇ ಬೇಕು. "ಟೆಹುಟಿಯ ಸಿಡುಕು ದುಡುಕು ಒಂದು ಪ್ರಾಂತ ಬಂಡಾಯ ಏಳೋದಕ್ಕೆ ಕಾರಣವಾಯ್ತು. ಆ ಅಧಿಕಾರಿಯ ಅಂಕೆಮೀರಿದ ವರ್ತನೆ ಬಗ್ಗೆ ಬೇರೆ ಪ್ರಾಂತಗಳಿಂದಲೂ ದೂರುಗಳು ಬಂದಿವೆ." "ಟೆಹುಟಿ ಮೇಲೆ ರಾಜದ್ರೋಹದ ಆರೋಪ ಹೊರಿಸಿ ಅವನನ್ನು ವಿಚಾರಣೆಗೆ ಗುರಿಪಡಿಸೋ ಯೋಚನೆ ಏನಾದರೂ ಇದ್ದರೆ, ಅದನ್ನು ಬಿಟ್ಬಿಡಿ !" ನೆಫರ್ ಟೀಮ್ ಅಂದಳು: "ವಿಚಾರಣೆಯ ಪ್ರಸ್ತಾಪ ಯಾರೂ ಮಾಡಿಲ್ವಲ್ಲ...." ಅಮಾತ್ಯನಿಗೆ ಸಂತಸ. ಮೊದಲ ಸುತ್ತಿನಲ್ಲಿ ಅವನಿಗೆ ಜಯ. ಟಿಹುಟ ಪ್ರತಿಸ್ಪರ್ಧಿಯಾಗುವ ಮಾತು ದೂರ ಉಳಿಯಿತು. ಈ ಸಲ ಅವನನ್ನು ದಂಡಿಸುವುದಕ್ಕಾಗುವುದಿಲ್ಲ, ಅಷ್ಟೆ. ಹೇಪಾಟ್ ಮಹಾರಾಣಿಯತ್ತ ನೋಡಿ ಸ್ವರ ಬದಲಾಯಿಸದೆಯೇ ಕಾಯಿ ಸರಿಸಿದ: "ವಿಚಾರಣೆಗೆ ನಡೀಬೇಕಾದ್ದು ಟೆಹುಟೀದ್ದಲ್ಲ_ ನೀರಾನೆ ಪ್ರಾಂತದ ಬಂಡಾಯಗಾರರ ನಾಯಕನದು. ಆತ ರಾಜ ಅತಿಥಿಯಾಗಿದ್ದಾನೆ, ಅಮಾತ್ಯರ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದಾನೆ_ಹೌದೆ?" ಅಮಾತ್ಯ ಉತ್ತರಿಸಿದ: "ರಾಜ ನೀತಿ ಅರಿಯದ ಅವಿದ್ಯಾವಂತರು ಮಹಾ ಅರ್ಚಕರಿಗೆ ಆ ರೀತಿ ವರದಿ ಮಡಿರ್ಬೇಕು. ಮಹಾ ವೈದ್ಯರೂ ಆದ ನಿಮಗೆ ತಿಳಿಯದ್ದಲ್ಲ? ಒಂದು ಕಾಹಿಲೇನ ಗುಣ ಪಡಿಸೋದಕ್ಕೆ ಬೇರೆ ಬೇರೆ ವಿಧಾನಗಳಿವೆ." "ಪಾಪ! ವೈದ್ಯಿಕೆ ವಿಷಯ ಅಮಾತ್ಯರು ಮಾತಾಡಬಾರದು. ಬಂಡಾಯ ರೋಗಕ್ಕೆ ಶಸ್ತ್ರಕ್ರಿಯೆಯೊಂದೇ ಮದ್ದು! ಅವನನ್ನು ನ್ಯಾಯ ಸ್ಥಾನದಲ್ಲಿ