ಪುಟ:Mrutyunjaya.pdf/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೪೦೫
ಬಂದಿದ್ದ. ಮಹಾ ಅರ್ಚಕರು ಅರಮನೆಗೆ ಆಗಮಿಸಿದರೆಂಬ ಸುದ್ದಿ ಆ
ವಿಶಾಲ ಆವರಣದಲ್ಲೆಲ್ಲ ಹರಡಿತ್ತು.
ಮೆನೆಪ್‍ಟಾ ಆತನೆಂದ :
“ಮಹತ್ವದ ಸಭೆ, ಕಾತರಕ್ಕೆ ಕಾರಣವಿಲ್ಲ. ಯಾಕೆ ಅಂದರೆ ಇದು
ಸ್ನೇಹದ ವಾತಾವರಣದಲ್ಲಿ ನಡೀತಿದೆ, ದಾಸದಾಸಿಯರು ಯಾರೂ ಇಲ್ಲವಂತೆ.
ಮಾತುಕತೆಯಲ್ಲಿ ಮಹಾರಾಣಿಯವರೂ ಭಾಗವಹಿ‍ಸ್ತಿದ್ದಾರೆ. ಸೋಜಿಗ.”
ಅಂತೂ ಸೆಡ್ ಉತ್ಸವ ನಡೆಯೋ ಹಾಗೆ ಕಾಣದೆ, ಅಲ್ಲವಾ ?” ಎಂದ
ಮೆನೆ‍ಪ್‍ಟಾ.
“ನಡೀತದೆ, ನಡೀತದೆ. ಪೆರೋಗೆ ಕಾಯಕಲ್ಪ ಬೇಡ ಅಂತ ಯಾರು
ತಾನೇ ಅಂದಾರು ?”
ಕೆಲ ಕ್ಷಣಗಳ ಮನದ ಬಳಿಕ ಸೆನೆಟ್ “ಇನೇನಿ....ಇನೇನಿ”....ಎಂದು
ಗೊಣಗಿದ.
“ಏನದು ?”
“ಸಭೆಯ ತೀರ್ಮಾನಗಳು ಮಂದಿರಿದ ಅರ್ಚಕ ಇನೇನಿಗೆ ಮೊದಲು
ಗೊತ್ತಾಗ್ತವೆ. ಧರ್ಮ ಗುರು ಅವರಿಗೆ ಹೇಳ್ತಾರೆ.... ನಾನು ಪುನಃ ಬಂದು
ನಿಮ್ಮನ್ನು ನೋಡ್ತೇನೆ.”
ಅಷ್ಟು ಹೇಳಿ ಸೆನೆಟ್ ಬಿರಬಿರನೆ ರಾಣೀವಾಸದತ್ತ ಹೋದ.
ಮೆನೆಪ್‍ಟಾ ನಗು ಬಂತು.
ಯಾವಾಗಲೂ ಆ ಹೊತ್ತಿನಲ್ಲಿಶಾಂತವಾಗಿರುತ್ತಿದ್ದ ಅರಮನೆಯ ಆವ
ರಣದಲ್ಲಿ ಇಂದು ಅತೀವ ಚಟುವಟಿಕೆ. ಧರ್ಮಗುರುವನ್ನು ಕಂಡು ನಮಿಸಿ
ಪುಣ್ಯ ಸಂಪಾದಿಸುವ ಅಪೇಕ್ಷೆ ಅಲ್ಲಿನ ದುಡಿಯುವ ಜನರಿಗೆ, ಅತಿಥಿಗೃಹದ
ಸೇವಕನೊಬ್ಬ ಹಿಂದಿನ ಸಂಜೆಯೇ ರಾಜಕುಮಾರನ ಮೊದಲ ಬೇಟೆಯ ಸುದ್ದಿ
ತಂದಿದ್ದ. ಈಗ ಸೆನೆಬ್ ಹೋದ ಬಳಿಕ ಆತ ಇನ್ನೊಂದು ವಾರ್ತೆ ತಂದ :
“ಇವತ್ತು ಮಹಾ ಅರ್ಚಕರಿಗೆ ಅರಮನೆಯಲ್ಲಿ ಭೋಜನ, ರಾಜ
ಕುಮಾರ ಹೊಡೆದ ಬಾತುಕೋಳಿನ ಅಡುಗೆ ಮಾಡ್ತಾರೆ.”
ಮುಂದೆ ಕೆಲ ಕ್ಷಣಗಳಲ್ಲಿ ದಾಸಿಯರಿಂದ ಆವೃತನಾದ ಅಲಂಕೃತ ರಾಜ
ಕುಮಾರ ದೇವ ಮಂದಿರಕ್ಕೆ ಬಂದ. ಮುಗುಳು ನಗುತ್ತಲಿದ್ದ ಒಬ್ಬಳು ಸುಂದರಿ