ಪುಟ:Mrutyunjaya.pdf/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ꮰ೪೦೨ ಮೃತ್ಯುಂಜಯ ದಾಸಿಯ ಕೈಗಳಲ್ಲಿ ಒಂದು ಬಂಗಾರದ ತಟ್ಟೆ, ರಾಜಕುಮಾರನಿಗೆ ಕೀರ್ತಿ ತಂದುಕೊಟ್ಟ ಬಾತುಕೋಳಿ ಆ ತಟ್ಟೆಯಲ್ಲಿ ನಿರ್ಜಿವವಾಗಿ ಕತ್ತು ಚಾಚಿ ಮಲಗಿತ್ತು. ಇನ್ನೊಬ್ಬಳು ದಾಸಿಯ ಕೈಯಲ್ಲಿದ್ದ ಬಂಗಾರದ ತಟ್ಟೆಯಲ್ಲಿ ಅಂಜೂರದ ಹಣ್ಣುಗಳು. ಅತಿಥಿಗೃಹದಲ್ಲಿದ್ದ ಮೆನೆಸ್ಟಾ ಆ ದೃಶ್ಯವನ್ನು ಕೌತುಕದಿಂದ ನೋಡಿದ. ರಾಮೆರಿಮಿಸೆ ಚಿಗುರೊಡೆಯೋದಕ್ಕೆ ಮುಂಚೆ ಬಾತುಕೋಳಿ ಹೊಡೀತಾನೋ, ನೂರಾರು ಲಿಸಿ ಸುರುಳಿಗಳ ವಾಚನ ಮಾಡ್ತಾನೊ' ನೋಡ್ಬೇಕು-ಎಂದುಕೊಂಡ ಆತ, ಮಗನ ನೆನಪಾಗಿ. ಸ್ವಲ್ಪ ಸಮಯದಲ್ಲೇ ರಾಜಕುಮಾರ ಮರಳಿದ. ಬಾತುಕೋಳಿಯಿದ್ದ ಬಂಗಾರದ ತಟ್ಟೆಯನ್ನು ಸುಂದರಿ ದಾಸಿಯೇ ಈಗಲೂ ಹಿಡಿದಿದ್ದಳು. ఆ ತಟ್ಟೆಯಲ್ಲಿ ಪ್ರಸಾದನೆಂದು ಅರ್ಚಕ ನೀಡಿದ್ದ ಕೆಲ ಹಣ್ಣುಗಳೂ ಇದ್ದುವು. ಅಂಜೂರದ ಹಣ್ಣುಗಳನ್ನು ಹೊತ್ತಿದ್ದವಳದು ಈಗ ಬರಿಗೈ. ಹಣ್ಣುಗಳ ಜತೆಗೆ ತಟ್ಟೆಯೂ ದೇವರಿಗೆ ಅರ್ಸಿತವಾಗಿತ್ತು. - ಮತ್ತೆ ಕೊಂಚ ಹೊತ್ತಿನಲ್ಲಿ ಸೆನೆಬ್ ಮಂದಿರದತ್ತ ಓಡಿದ. ಮೈಭಾರ ವನ್ನೂ ಲೆಕ್ಕಿಸದೆ ಬೇಗಬೇಗನೆ ಹೆಜ್ಜೆ ಇಡುತ್ತಿದ್ದ ಇನೇನಿಯೊಡನೆ ಹಿಂತಿರುಗಿದ. ಒಬ್ಬ ಚಾಕರನೆಂದ: “ಮಹಾ ಅರ್ಚಕರು ಈಗ ಅಮಾತ್ಯ ಭವನಕ್ಕೆ ದಯಮಾಡಿಸಿದ್ದಾರೆ.” ಅಲ್ಲಿಂದ ಹೇಪಾಟ್ ಮಂದಿರಕ್ಕೆ ಬಂದ. ಅಲ್ಲಿ ತುಸು ಕಾಲ ಇದ್ದ. ನೀರು ಸರಬರಾಜಿನ ವ್ಯವಸ್ಥೆಯನ್ನು ಈಕ್ಷಿಸಿ ಆದಮೇಲೆ ಪೆರೋನ ನಿವಾಸಕ್ಕೆ ತೆರಳಿದ. ಆಬ್ಟು ವಿನಲ್ಲಿ ಮಹಾ ಅರ್ಚಕನನ್ನು ಮೆನೆಸ್ಟಾ ಕಂಡಿದ್ದ.ಇಲ್ಲಿ ಆತಿಥಿ ಗೃಹದ ಮುಂದುಗಡೆಯಿಂದ ಆತ ಹೋದಾಗ ಇನ್ನಷ್ಟು ಹತ್ತಿರದಿಂದ ನೋಡಿದ. ಆತ ಯಾವ ಕಡೆಗೆ ಹೆಜ್ಜೆ ಇಟ್ಟರೂ ಇಕ್ಕೆಲಗಳಲ್ಲೊ ಜನ ಮಂಡಿಯೊರಿ ನಮಿಸುತ್ತಿದ್ದರು.ಬೆಳ್ಳಿ ಹಿಡಿಯ ಅಧಿಕಾರ ಕೋಲು ಕೈಯಲ್ಲಿದ್ದ , ಮುಖದ ಮೂಳೆಗಳು ಕಾಣಿಸುತ್ತಿದ್ದ ಈ ವ್ಯಕ್ತಿಯ ಬಗೆಗೆ ಇಷ್ಟೊಂದು ಭಯ, ಭಕ್ತಿ ?ಧಾರ್ಮಿಕ ಕಟ್ಟಕಟ್ಟಳೆಗಳಲ್ಲಿ ಜನ ಸಮುದಾಯಕ್ಕೆ ಇಂಥ ನಿಷ್ಟೆ ? ಐಗುಸ್ತದ ಆದ್ಯಂತ ಇರುವ ಸಾವಿರಾರು ಸಣ್ಣ ದೊಡ್ಡ ಮಂದಿರಗಳಲ್ಲೊ ಗುಡಿಸಲು