ಪುಟ:Mrutyunjaya.pdf/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೨೧

        ಎದೆಗೊತ್ತಿಕೊಂಡಳು. ಅವಳ ಗಂಟಲಿನಿಂದ ಅರ್ಥಹೀನ ಧ್ವನಿ ಹೊರಟಿತು.
        'ಬಸಿರಿನ ರಕ್ಷಣೆಗೂ ಸುಖಪ್ರಸವಕ್ಕೂ ಹೊಣೆಗಾರ್ತಿಯಾದ ದೇವತೆ.'
             ರಾಮೆರಿಯನ್ನು ಮಗ್ಗುಲಲ್ಲಿ ಕೂಡಿಸಿಕೊಂಡು ನೆಫಿಸ್ ಕೇಳಿದಳು.

"ಮೂ‍‍‍ರ್ತೀನ ರಾಮೆರಿಯ ತಂದೆಯೇ ಕಳಿಸಿದಾ ?” ಹೆಂಗಸಿನ ಲಲ್ಲೆಗರೆಯುವ ಮಾತು ಇದೆಲ್ಲ ಬಟಾ ಬಲ್ಲ. "‍‍ಹೂಂ, ಅತ್ತಿಗೆ, ತನಗೋಸ್ಕರ ಒಂದು ಅಮೆನ್ ಮೂರ್ತಿಯನ್ನೂ ಅಣ್ಣ ತಗೊಂಡ. ದೂರ ಪ್ರವಾಸದಲ್ಲಿರುವಾಗ ಅಮೆನ್ ದೇವರಲ್ಲವಾ ಬೇಕಾದ್ದು ?” ಹೌದು." ಎಂದಳು ನೆಫಿಸ್. ಮೂರ್ತಿಯನ್ನು ದಿಟ್ಟಿಸಿದ ರಾಮೆರಿಪ್ಟಾ ಹೇಳಿದ: "ಸ್ನೊಫ್ರು ಮಾವ ಇಂಥದೇ ಮಾಡ್ತಾರೆ.” ಬಟಾನ ಉಸಿರು ನಡುದಾರಿಯಲ್ಲೇ ನಿಂತಿತು. ಅರ್ಧ ಕ್ಷಣ, ಧೈರ್ಯ ತಂದುಕೊಂಡು ಆತನೆಂದ: "ಇನ್ನು ಐಗುಪ್ತದ ದೇಶದಲ್ಲೆಲ್ಲಾ ಸ್ನೊಫ್ರು ಮಾವ ಮಾಡಿದ ಮೂರ್ತಿಗಳೇಇರ್ತವೆ. ಇದು ವರ್ತಕ ಕೆಫ್ಟುವಿನ ಉಪಕಾರ,ಥೊಎರಿಸ್ ಅಮೆನ್ ರನ್ನು ರಾಜಧಾನಿಯ ಮೂರ್ತಿಗಳ ಅಂಗಡಿಯಿಂದ ಕೊಂಡ್ವಿ. ಅಂಗಡಿಕಾರನ ಹೆಸರು ಅಪೋಫಿಸ್ ಅಂತ, ಅರಮನೆಯ ದೇವಮಂದಿರದ ಅರ್ಚಕ ಇನೇನಿ ಪವಿತ್ರ ಜಲ ಪ್ರೋಕ್ಷಾಳನ ಮಾಡಿದ್ರು.” ಮೂರ್ತಿಯನ್ನು ಎದೆಗವಚಿಕೊಂಡೇ ನೆಫಿಸ್ ಅಂದಳು: "ಹೌದಾ? ಹೌದಾ? ಓ ಥೊಎರಿಸ್, ನಿನ್ನಿಂದಾಗಿ ಎಲ್ಲಿ ಸುಗಮ ವಾಗಲಿ ದೇವಿ...." ಸ್ನೊಫ್ರುವಿನ ಮನೆಯಲ್ಲಿ ಜನರೆದುರು ಹೇಳಿದುದನ್ನೇ ಇಲ್ಲಿಯೂ ಬಳಿಕ ಪ್ರಶ್ನೆ:

“ರಾಮೆರಿಯ ತಂದೆ ಪ್ರತಿ ದಿವಸವೂ ನನ್ನನ್ನು ‍ಜ್ಞಾಪಿಸ್ಕೋತ್ತಿದ್ನಾ?" 
“ಹೂಂ.ರಾಮೆರಿಯನ್ನು ಜ್ಞಾಪಿಸ್ಕೋತಿದ್ದ.” 

ಹುಡುಗ ಸಣ್ಣನೆ ನಕ್ಕ.

ನೆಫಿಸ್ ತನ್ನ ಕಣ್ಣುಗಳನ್ನು ಅಗಲಿಸಿ ಅಂದಳು: