ಪುಟ:Mrutyunjaya.pdf/೪೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೪೦ ಮೃತ್ಯುಂಜಯ ಮರಳುವುದು ತಡವಾಗಿದೆಯಲ್ಲ ಎಂದು ಕಾತರ.
“ನಾನು ಹೊರಡೋದಕ್ಕೆ ಮುಂಚೆ ಅಣ್ಣ ಒಂದು ಮಾತು ಅಂದ:
ವೈಯಕ್ತಿಕವಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ, ಬಟಾ.
ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗ್ಬೇಕು.
ರಾಜಧಾನಿ ಇದಕ್ಕೆ ಆಸ್ಪದ ಇತ್ತರೆ ಎಲ್ಲರಿಗೂ ಹಿತವಾದೀತು. ಅದಕ್ಕಾಗಿ
ಇಲ್ಲಿದ್ದು ನಾನು ಪ್ರಯತ್ನಿಸುತ್ತೇನೆ. ಊರಲ್ಲಿ ಅದನ್ನು ಎಲ್ಲರಿಗು ವಿವರಿಸಿ
ಹೇಳು.”

ಮೆನೆಪ್ ಟಾನ ಮಾತುಗಳು. ಬಟಾನ ಧ್ವನಿ.

ಖ್ನೆಮ್ ಹೊಟಪ್ ಗುಡುಗಿದ:
“ವೈಯಕ್ತಿಕವಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ—
ಅಂದರೆ ಏನರ್ಥ ? ಅಣ್ಣನಿಗೇನಾದರೂ ಆದರೆ, ನೀಲನದಿಯೇ ಹತ್ತಿಕೊಂಡು
ಉರಿದೀತು!"
ಎಲ್ಲರ ಒಳಗಿನ ಸಂಕಟವನ್ನು ಖ್ನೆಮ್ ಹೊಟೆಪ್ ಮಾತಿನಲ್ಲಿ ಒಡ
ಮೂಡಿಸಿದ್ದ.
ಸೆಮ ನಿಧಾನವಾಗಿ ನುಡಿದ :
"ಮೆನೆಪ್ಟಾ ನಮ್ಮನ್ನು ಬಿಟ್ಟುಹೋಗಿ ಹತ್ತಿರ ಹತ್ತಿರ ಮೂರು
ತಿಂಗಳಾಗ್ತಾ ಬಂತು. ಕುಯಿಲಿನ ವೇಳೆಯಲ್ಲಿ ನಾಯಕ ಇರಲೇಬೇಕು. ಇನ್ನು
ಹೆಚ್ಚುದಿನ ಇಲ್ಲ. ಸೆಡ್ ಉತ್ಸವ ನಡೀಲಿ, ನಡೀದೆ ಇರಲಿ, ನಾಯಕನನ್ನು
ನಾವು ವಾಪಸು ಕರಕೊಂಡ್ಬರಬೇಕು.”
"ಇದು ಹಿರಿಯರ ಸಮಿತಿಯ ಅಂತ ತಿಳಿದರೆ ಮೆನೆಪ್ಟಾ
ಒಪ್ತಾರೆ," ಎಂದ ಹೆಮೊನ್.

ಖ್ನೆಮ್ ಹೊಟೆಪ್ ಅಂದ:
“ನಮ್ಮ ಯೋಧ ದಳದ ಐವತ್ತು ಜನರ ಜತೆ ನಾನು ಹೋಗಿ
ಬರ್ತೇನೆ.”
ಹೆಮ್ ಟ್ ಅಭಿಪ್ರಾಯ ವ್ಯಕ್ತಪಡಿಸಿದ :
“ರಾಜಧಾನಿಗೆ ಕದನಕ್ಕೆ ಹೋಗೋದಾದರೆ ಐವತ್ತು ಜನ, ನೂರು ಜನ