ಪುಟ:Mrutyunjaya.pdf/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೪೪೧

ಸಾಲದು.ಸೈನ್ಯ ಗಡಿಯಿಂದ ಅವರ ದಳ ವಾಪಸು ಬಂದರೊ ? ಅಲ್ದೆ
ನಮ್ಮಲ್ಲಿ ಆಯುಧಗಳೂ ಇಲ್ಲವಲ್ಲ...."
“ಆ ಕೆಫ್ಟು ಬರಲೇ ಇಲ್ಲ"__ಎಂದ ಖ್ನೆಮ್ ಹೊಟೆಪ್.ಈಗಿನ
ಅಸಹಾಯತೆಯ ಭಾವನೆಗೆ ಆ ವರ್ತಕನೇ ಹೊಣೆ ಎನ್ನುವಂತೆ.
ಥಾನಿಸ್ ಕೇಳಿದ :
“ನೀನು ಏನು ಹೇಳ್ತೀಯಪ್ಪ ಬಟಾ ?”
“ಅಣ್ಣ ರಾಜಧಾನಿಗೆ ನಿಂತಾಗ ಹೋದ ವರ್ಷ ಅಬ್ಟು
ಯಾತ್ರೆಗೆ ಬಂದಿದ್ದವರೆಲ್ಲ 'ನಾವೂ ಬರ್ತೇವೆ' ಅಂತ ಹೇಳಿದ್ದು, ಬೇಡ
ಅಂದಾಗ....'ಕರಕೊಂಡ್ಬರೋದಂತೂ ನಾವೇ' ಅಂತ ತಿಳಿಸಿದ್ದು__ನಿಮಗೆ
ನೆನಪಿರಬಹುದು.ಅವರು ರಾಜಧಾನಿಗೆ ಬಂದರೆ ಅಣ್ಣನಿಗೆ ಇಷ್ಟವಾಗ್ತದೆ.”
ತಕ್ಷಣ ಯಾರೂ ಮಾತನಾಡಲಿಲ್ಲ.
ಬಟಾನೇ ಮುಂದುವರಿಸಿದ :
"‍‍ಔಟ ಬೆಕ್ ಅಣ್ಣನನ್ನು ಕಾಯ್ತಾರೆ. ನಾವು ಹೋಗಿ ಸಮಿತಿಯ
ತೀರ್ಮಾನ ತಿಳಿಸಿ,ಮನ ಒಲಿಸಿ ಉಪಾಯವಾಗಿ ಕರಕೊಂಡ್ಬರ್ತೇವೆ.”
ಎಲ್ಲರ ಮುಖಗಳನ್ನೂ ನೋಡುತ್ತ ಸೆಮ ಕೇಳಿದ:
“ಆದೀತು, ಅಲ್ಲವೆ?”
ಹೂಂ-ಹೂಂ ಧ್ವನಿಗಳ ಉತ್ತರ.
“ಹಾಗಾದರೆ ನಾಳೆ ಬೆಳಿಗ್ಗೆ ಡಂಗುರ ಹೊಡಿಸೋಣ.ಒಳನಾಡಿಗೆ
ದೂತರನ್ನು ಅಟ್ಟೋಣ. ಯಾತ್ರಿಕರೆಲ್ಲ ಬಂದು ಸೇರೋದಕ್ಕೆ ಎರಡು ಮೂರು
ದಿನ ಬೇಕು."
ಬಟಾ ಖ್ನೆಮ್ ಹೊಟೆಪನ ಭುಜದ ಮೇಲೆ ಕೈ ಇರಿಸಿದ.ಕಾವಲು
ಪಡೆಯ ದಳಪತಿ ಆ ಸ್ಪರ್ಶಕ್ಕೆ ತುಸು ಕರಗಿದ.
ಹೆಮ್ಟ ಏಳುತ್ತ, “ಉದ್ಯಾನದಲ್ಲಿ ಜನರ ಸದ್ದಿಲ್ಲವಲ್ಲ ಇವತ್ತು,”
ಎಂದ.
ಒಂದು ನಗೆಯ ಅಲೆ ಕಿವಿಗೆ ಅಪ್ಪಳಿಸಿದಂತೆ ಇಪ್ಯುವರ್ ಗೆ ಅನಿಸಿತು.
ಉದ್ಯಾನದತ್ತ ಸಾಗಿ, ಬೇಗನೆ ಮರಳಿದ. ಸಭೆ ಮುಗಿಸಿ ಎದ್ದವರಿಗೆ ಅವನು
ತಿಳಿಸಿದ: