ಪುಟ:Mrutyunjaya.pdf/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಮೂಲೆಯಲ್ಲಿ ನಿಂತಿದ್ದ ರಾಮೆರಿಪ್ ಟಾ ಗಾಂಭೀರ್ಯ ನಟಿಸಿದ. ದೊಡ್ಡ ವರು ತನ್ನ ಬಗೆಗೆ ಮಾತನಾಡುತ್ತಿರುವರೆಂದು ಕಿರಿಯನಿಗೆ ಹೆಮ್ಮೆ. “ಅಮ್ಮನನ್ನು ನೋಡ್ಕೋ ಅಂತ ರಾಮೆರಿಗೆ ಅವನ ತಂದೆ ಹೇಳಿದ್ದಾನಂತೆ,"ಎಂದ ಬಟಾ, ನಗುತ್ತ. ನೆಜಮುಟ್ ನ ಮಾತು ಕೇಳಿ, ತಂದೆಯನ್ನು ನೋಡಲು ಹೋಗುವ ಆಸೆ ರಾಮೆರಿಪ್ ಟಾನಲ್ಲಿ ಮತ್ತೆ ಗರಿಗೆದರಿತ್ತು, ಆದರೆ ಬಟಾ ಮಾವನ ಪರಿ ಹಾಸ್ಯದ ಧ್ವನಿಯಿಂದ ಅವನು ಕೆರಳಿದ. "ಹೌದು, ಹೌದು. ತಂದೆ ಹೇಳಿದ್ದಾರೆ," ಎಂದ ಗಟ್ಟಿಯಾಗಿ. ಸ್ನೊಘ್ರು ಅಂದ : "ಸಿಟ್ಟು ಬೇರೆ! ಇಲ್ಲಿ ಕೇಳು,ರಾಮೆರಿ. ಅಮ್ಮನನ್ನು ನಾವು ನೋಡ್ಕೊಳ್ತೇವೆ. ನೀನು ಹೋಗಿ ಅಪ್ಪನನ್ನು ಕರಕೊಂಡ್ಬಾ.” "ಹೌದು ಮಗ," ಎಂದಳು ನೆಫಿಸ್. ಸಂತಸದ ನೋವು ರಾಮೆರಿಪ್ ಟಾನನ್ನು ಹಿಂಡಿತು. ಒಸರಬಯಸಿದ ಹರ್ಷಾಶ್ರುವನ್ನು ಹತ್ತಿಕ್ಕಿ ಆತ ಮುಗುಳುನಗೆ ಬೀರಿದ.

              *             *              *            *

ಇನ್ನೂ ಒಂದಿಷ್ಟು ಬೆಳೆದಿದ್ದ ಮಗಳನ್ನೆತ್ತಿಕೊಂಡು ಅಹೂರಾ ತನ್ನ ಗಂಡನನ್ನೂ ಭಾವನನ್ನೂ ಕರೆದುಕೊಂಡು ಬಂದಳು. ಈ ಸಲವೂ ಇತ್ತು ಖಿವವದ ಚೀಲ.ಬೇರೆಡೆಗಳಿಂದಲೂ ಅಬ್ಟು ಯಾತ್ರಿಕರು ಆಗಮಿಸಿದರು. ಅದೇ ಊರಿನಲ್ಲಿದ್ದವರೂ ಅಣಿಯಾದರು. ಸುಮಾರು ನಾಲ್ವತ್ತು ಜನರಿಗೆ ಎಂಟು ಹತ್ತು ದಿನಗಳಿಗೆ ಸಾಲುವಷ್ಟು ಬುತ್ತಿ ಕಟ್ಟಿದರು. ಮಾರನೆಯ ಸಂಜೆ ರಾಜಧಾನಿಗೆ ಪ್ರಯಾಣ ಎಂದು ತೀರ್ಮಾನ ವಾಯಿತು. ಬಟಾ ತನ್ನ ಮನೆಯಲ್ಲಿ ಕಿರಿಯ ಮಗಳ ಜತೆ ಮೊಸಳೆ ಆಟ ಆಡುತ್ತಿ ದ್ದಾಗ ಶಿಲ್ಪಿ ನೆಖೆನ್ ಬಂದ. “ನಾಳೆ ಸಾಯಂಕಾಲ ಪ್ರಯಾಣವಂತೆ." "ಹ್ಞ."