ವಿಷಯಕ್ಕೆ ಹೋಗು

ಪುಟ:Mrutyunjaya.pdf/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೨ ಮೃತ್ಯುಂಜಯ “ಮೆನೆಪ್ಟಾ ಅಣ್ಣನನ್ನು ಕಂಡಿರಾ? “ಇಲ್ಲ, ಅಮಾತ್ಯ ಆಸ್ಪದ ಕೊಡಲಿಲ್ಲ.” “ಅಮಾತ್ಯ ಆಸ್ಪದ ಕೊಡಲಿಲ್ಲ! ಹಾಗಾದರೆ ಅರಮನೆಯ ಅಥಿತಿಗೃಹ దేళ్లి ಅಣ್ಣ ಇಲ್ಲವಾ ** “ಇದ್ದಾರೆ. ಶಾಂತವಾಗಿ ಕೇಳಿ, ನೀವು ರಾಜಧಾನಿ ಬಿಟ್ಮೇಲೆ ಮಹಾ ಅರ್ಚಕ ಆನ್ ನಗರಿಯಿಂದ ಬಂದ್ರು, ಅರಮನೆಯಲ್ಲಿ ಮಾತುಕತೆ ನಡೆದು ರಾಜಿಯಾಯ್ತು.” “ಆಯ್ತೆ? ಸೆಡ್ ಉತ್ಸವಕ್ಕೆ ದಿನ ಗೊತ್ತಾಯ್ತೆ ?” "ಹೌದು" ಕೆಫ್ಟು ತೋರು ಬೆರಳನ್ನು ಮೇಲಕ್ಕೆತ್ತಿ ಯೋಚಿಸಿದ. ಎಡ ಅಂಗೈ ಯನ್ನು ಬಲಗೈ ಬೆರಳುಗಳಿಂದ ಒಂದೊಂದಾಗಿ ಮುಟ್ಟುತ್ತ ಎಣಿಕೆ ಹಾಕಿ, ಅಂದ : “ಇವತ್ತು ರಾತ್ರೆ ಕಳೆದು ಬೆಳಗಾಗ್ತದಲ್ಲ, ಅಲ್ಲಿಂದ ಐದನೇ ಬೆಳಿಗ್ಗೆ.” "ಓ! ಪ್ರಯಾಣಕ್ಕೆ ಸಮಯ ಸಾಲದು. ನಾನು ತಕ್ಷಣ ಹೊರಡ್ಬೇಕು.” “ಸ್ಯೆನೆ ಗಡಿಯಿಂದ ಸೈನ್ಯದ ಒಂದು ಭಾಗ ರಾಜಧಾನಿಗೆ ಬರ್ತದೆ. ಇಷ್ಟು ಹೊತ್ತಿಗೆ ಬಂದು ತಲಪಿರಬಹುದು. ಐಗುಪ್ತದ ಎಲ್ಲ ಪ್ರಾಂತಪಾಲರೂ ಅಲ್ಲೇ ಇದ್ದಾರೆ. ಸಮಯ ಸಾಲದೂಂತ ಐಗುಪ್ತದ ಮೂಲೆಮೂಲೆಗೆ ಸುದ್ದಿ ಕಳಿಸಿ ಜನರನ್ನು ಅವರು ಕರೆಸ್ತಾ ಇಲ್ಲ. ಈಗಾಗಲೇ ತಡವಾಗಿದೆ.” "ನಮ್ಮ ನಾಯಕರು ಅತಿಥಿಗೃಹದಲ್ಲೇ ಇದ್ದಾರೆ ಅಂದ್ಮೇಲೆ ಸೆಡ್ ಉತ್ಸವ ಆದ ತಕ್ಷಣ ನಾವೆಲ್ಲ ಅಲ್ಲಿಂದ ಹೊರಡಬಹುದು.” “ಅದು ಸಾಧ್ಯವಾಗಲೀಂತ ಆ ಸರ್ವಶಕ್ತ ಸೃಷ್ಟಿಕರ್ತನನ್ನು ನಾನು ಪಾರ್ಥಿಸ್ತೆನೆ.” “ನಮ್ಮದು ಋಜುಮಾರ್ಗ. ನಮ್ಮ ಮಾಟ್ ನಮ್ಮನ್ನು ಕಾಯ್ತದೆ." “ನೀವು ತಕ್ಷಣ ಹೊರಟು ಬರ್ಬೇಕು ಅಂತ ಮೆನ್ನ ಹೇಳಿದ್ದಾನೆ.” “ನಾಳೆ ಸಂಜೆ ಪ್ರಯಾಣ ಅಂತ ತೀರ್ಮಾನವಾಗಿತ್ತು, ಬದಲು ಈಗಲೇ ಹೊರಡ್ತೇವೆ.”