ಪುಟ:Mrutyunjaya.pdf/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೦ ಮೃತುಂಜಯ

            "ಅಂಥದ್ದೇನು ? ಸರದಿಯಲ್ಲಿ ಒಂದಿಷ್ಟು ನಿದ್ದೆ ಮಾಡೋಣ,” ಎಂದ
      ನಾಯಕ.
             ತಾನು ಪವದಿಸಿದೆ,  ನಿದ್ದೆ ಮಾತ್ರ ಬರಲಿಲ್ಲ. ಯೋಚನೆಗಳು ಮೇಳೈಸಿ
      ಲಗ್ಗೆ ಇಟ್ಟುವು.  ಔಟ ತಲೆವಾಗಿಲಿನ  ಪಂಜೆಗೆ ಎಣ್ಣೆ ಎರೆದು ಹೊಸ್ತಿಲ ಬಲಿ
      ಕುಳಿತು.  ಬೆಕಾ ತೋಳದಿಂಬಿಗೆ ತಲೆ ಸೋಂಕಿಸಿ ನಿದ್ರಾವಶನಾದ.
            ಪ್ರಶ್ನಾವಳಿಯನ್ನು ಇದಿರಿಸಿದಂತೆ ಮೆನೆಪ್ ಟಾನ ಮೆದುಳು ತಪ್ತವಾ 
     ಯಿತು. ಪೆರೋ ಧಾರ್ಮಿಕ ವಿಧಿಗಳಿಗಾಗಿ ಮಹಾ  ಮಂದಿರಕ್ಕೆ  ಹೊರಟಾಗ
     ತಾನು ?  ಪ್ರಾಂತಪಾಲರೆಲ್ಲ ಅಲ್ಲಿಗೆ ಹೋಗುವುದು ಖಂಡಿತ.  ಪಾಂತಪಾಲ
     ನಲ್ಲದ ತಾನು? ಬಂಡಾಯಗಾರನಾದರೂ ಅತಿಥಿ ಅಲ್ಲವೆ? ಉತ್ಸವದಲ್ಲಿ 
     ತನ್ನ ಸ್ಥಾನ ಯಾವುದು ?  ಉಸಿರು ಕಟ್ಟುತ್ತಿದೆಯಲ್ಲ.... ಜಜ್ ಮಂಖ್ 
     ಮುಕ್ತನಾದ; ತನ್ನ ಮುಕ್ತಿ ? ತನ್ನ ಜನರನ್ನು ಬಿಟ್ಟು ಇಲ್ಲಿಗೆ ಹೀಗೆ ಬರ 
     ಬಾರದಾಗಿತ್ತು....ಈಗ....ಈಗ.... ಬೆಕ್ ಮೂಲಕ ಮೆನ್ನ ಹೇಳಿ ಕಳುಹಿದ್ದ :
     'ಊರ ಹೊರಗೆ ದಂಡೆಯ ಮೇಲಿರ್ತೇನೆ,  ಬಟಾನ ದಾರಿ ನೋಡ್ತೇನೆ.” ಈ 
     ಗದ್ದಲದಲ್ಲಿ ಮೆನ್ನ ಅದೃಶ್ಯನಾದರೂ ದೇವಮಂದಿರದವರು ತಲೆಕೆಡಿಸಿಕೊಳ್ಳ
     ಲಾರರು. ಆದರೆ ಬಟಾ ಅವನಿಗೆ ಸಿಗದೆ ಹೋದರೆ ? ಬಟಾ ಬಾರದೆ ಹೋದರೆ? 
     ಏನಾದರೂ ಅಪಘಾತ ? ಓ ಅಮನ್ ! ಹಾಗಾಗುವುದು ಸಾಧ್ಯವೆ ? 
     ಸಾಧ್ಯವೆ ?....
           ಮೆನೆಪಟಾ ನರಳಿದ; ಮಗ್ಗುಲು ಹೊರಳಿದ. ಮತ್ತೆ ಅವೇ ಯೋಚ 
     ಗಳು.  ಅವೇ.
           ನೀಲನದಿಯ ಹಾಗೆ ಕಾಲ.  ಹೀಗೆಯೇ ಇರುತ್ತದೆ.  ಸದಾ 
     ಹೀಗೆಯೇ.
           ಎಲ್ಲಿಯೋ ಒಂದು  ದೋಣಿಕಟ್ಟೆ, ಆಗ ಒಂದಷ್ಟು ಕಲರವ.
           " ಇನ್ನು ನೀನು ಮಲಕೊ.”
            ಅದು ಬೆಕನ ಧ್ವನಿ.  ಔಟ ಹೇಳುತ್ತಿದ್ದಾನೆ :
           "ಹೂಂ.  ಅರಮನೆ ಆವರಣದಲ್ಲಾ ಶಬ್ದ ಕಡಿಮೆಯಾಗಿದೆ.
    ದ್ವಾರೇಂತ  ತೋರ್ತದೆ. "