ಪುಟ:Mrutyunjaya.pdf/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮ್ರುತ್ಯುಂಜಯ ೪೭೧

     ತಾನು ಏಳಬೇಕೆ? ಈ ಬಂಧುಗಳೊಡನೆ ಮಾತನಾಡಬೇಕೆ? ತಮ್ಮ
ನಾಯಕ ನಿದ್ದೆಹೋಗಿದ್ದಾನೇಂತ ಇವರು ಭಾವಿಸಿದ್ದಾರೆ....
    "ಅಮನ್. ಅಮನ್."
     ಔಟ ದೇವರನ್ನು ಸ್ಮರಿಸುತ್ತಿದ್ದಾನೆ....
     ಈ ರತ್ರಿ ಗಾಳಿ ನಿಶ್ಚಲವಾಗಿದೆ.
     ....ಊಹೂಂ. ಬೇಗೆಯ ನಡುವೆ ತಣುಪಿನ ಸುಖಕರ ಅನುಭವ.
ಮಲಗಿದ್ದವರ ಎಚ್ಚತ್ತವರ ಎಡೆಯಿಂದ ನುಸುಳಿ ಗಾಳಿ ಒಳಕ್ಕೆ ಬಂದಿದೆ.
ಕಣ್ಣೆವೆಗಳನ್ನು ಮುದ್ದಿಡುತ್ತಿದೆ.ಆಹಾ!ಇದು ನೆಫಿಸ್ ಸ್ಪರ್ಶ.

ಈ ಆಲಿಂಗನದಲೇ ನಿದ್ರೆ....... ಅಂಗಾಂಗಗಳನ್ನು ವ್ಯಾಪಿಸುವ ಚೇತೋಹಾರಿ

ನಿದ್ರೆ.......
     .............
     ....“ಯಾರು ಅದು ? ಯಾರು? ನಿಲ್ಲಿ !”
     ಗದರಿ ನುಡಿದವನು ಬೆಕ್. ಕಾತರ. ರೋಷ.
     ಔಟ ಗಡಬಡಿಸಿ ಎದ್ದ, “ಯಾರು? ಯಾರು?” ಎಂದು ಕೂಗುತ್ತ.
     ತೆರೆದ ಕಣ್ಣೆವೆಗಳು, ಮೆನೆಪ್ಟಾ ತಟಕ್ಕನೆ ಎದ್ದು ಕುಳಿತ,ನಿಂತ,

"ಏನು? ಏನು?" ಎನ್ನುತ್ತ.

     ಉತ್ತರದ ಮಾತ್ತಿಲ್ಲ. ಪಂಜು ಬೆಳೆಕಿನಲ್ಲಿ ಈಟಿಗಳು ಹೋಳೆದವು.
     ಭಟರು ಬೆಕ್ ನನ್ನು ಸುತ್ತುವರಿದರು. ಆತ ಕೂಗಾಡಿದ : “ಎಚ್ಚರ !
ಮುಟ್ಬೇಡಿ !”
    “ನಿಲ್ಲಿ,ನಿಲ್ಲಿ !"ಎನ್ನುತ್ತ ಮುನ್ನುಗ್ಗಿದ ಔಟನನ್ನು,ಯೋಧರು ಹಲ

ವರು ಹಿಡಿದರು

     ಮೆನೆಪ್ ಟಾನ ಗುಂಡಿಗೆ ಬಡಿತ ತೀವ್ರಗೊಂಡಿತು. ('ಬಂತೆ, ಬರಲಾ

ರದು ಎಂದು ತಾನು ಭಾವಿಸಿದ್ದ ಆ ಕ್ಷಣ?") ಆದರೂ ನಿರ್ವಿಕಾರ ಸ್ವರದಲ್ಲಿ

ಅವನೆಂದ :
    "ಯಾರು ನೀವು? ನಿಮಗೇನು ಬೇಕು?”
    "ಹಿಡೀರಿ!"
    ಆಜ್ಞೆ. ಅವನು ಅರಮನೆ ಕಾವಲು ಪಡೆಯ ದಳಪತಿ. ಯೋಧರು