ಪುಟ:Mrutyunjaya.pdf/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ಭಂಗವಾಯಿತೆಂದು ಸಿಡುಕದೆ, ಬೇಗನೆದ್ದು, ಲವಲವಿಕೆಯಿಂದ ದಾಸಿಯರಿಗೆ ಅನುಜ್ಞೆಗಳನ್ನು ನೀಡಿದಳು.

    ನಾಪಿತರು, ಉಗುರು ಕತ್ತರಿಸುವವರು, ಆಭ್ಯಂಜನ ಮಾಡಿಸುವವರು, ಹೊಸ ದುಕೂಲ ತೊಡಿಸುವವರು, ಪಾದರಕ್ಷೆಯವರು, ಸುಗಂಧ ಪೂಸುವವರು, ಕಿರೀಟದವರು ಹೀಗೆ ವಿವಿಧ ಕರ್ಮಚಾರಿಗಳೂ ಆಧಿಕಾರಿಗಳೂ ಕಾಧು ನಿ೦ತಿದ್ದರು. ಸೂರ್ಯ ಬೆಳಕಿಲ್ಲದ ಕೊರತೆಯನ್ನು ತೈಲದೀಪಗಳು ನೀಗಿದುವು.
     ಅರಮನೆಯ ಸ೦ಗೀತ ವಿದುಷಿಯರಿಬ್ಬರು ಅಂತಃಪುರದ ಮೊಗಸಾಲೆ ಯಲ್ಲಿ ಕುಳಿತು ತಂತೀವಾದ್ಯಗಳನ್ನು ವಾಟಿದರು.
    ಹಿರಿಯ ಕ್ಷೌರಿಕನಿಗೂ ಅವನ ಸಹಾಯಕನಿಗೂ ಈ ದಿನ ವಿಶೇಷ ಹೊಣೆ. ಅರಸ ಅರಸಿ ಇಬ್ಬರಿಗೂ ಕೇಶಮುಂಡನವಾಗಬೇಕು. ಕೇಶಕವಚ ಧಾರಣೆಗೆ ಪೂರ್ವಭಾವಿಯಾಗಿ ಆ ಕ್ರಿಯೆ.ಈ ಅಪೂರ್ವ ಸಮಾರ೦ಭದಲ್ಲಿ ಬಳಸಲೆ೦ದು ರತ್ನ ಖಚಿತ ಬ೦ಗಾರದ ಕತ್ತರಿಯನ್ನು ಅರಮನೆಯ ಅಕ್ಕಸಾಲಿಗ ಒ೦ದು ತಿ೦ಗಳ ಹಿ೦ದೆಯೇ ನಿರ್ಮಿಸಿದ್ದ.
    ಅವಸರದಲ್ಲಿ ಪ್ರಾತರ್ವಿಧಿ ಮುಗಿಸಿ ಬಂದ ಪೆರೋ ನಾಪಿತನ ಮುಂದೆ ಮುಗ್ಗಾಲು ಪೀಠದ ಮೇಲೆ ಕುಳಿತ. ಅರಮನೆಯ ಆಭರಣಗಳ ಅಧಿಕಾರಿ ಬ೦ಗಾರದ ತಟ್ಟೆಯಲ್ಲಿ ಬಂಗಾರದ ಕತ್ತರಿಯನ್ನಿಟ್ಟು ತ೦ದ.
   ಒಬ್ಬಳು ದಾಸಿ ಹೊರಗಿನಿ೦ದ ಧಾವಿಸಿ ಬ೦ದು, “ ಅಮಾತ್ಯರು ಆಗಮಿಸಿದ್ದಾರೆ,” ಎಂದು ಮಹಾಪ್ರಭುವಿನ ಕಿವಿಯಲ್ಲಿ ಉಸುರಿದಳು.
   "ಬರಲಿ," ಎ೦ದ ಪೆರೋ.
   ಕ್ಷೌರಿಕ ಹಿಂದಕ್ಕೆ ಸರಿದು ನಿಂತ.
   " ಪೆರೋನ ಆಯುರಾರೋಗ್ಯ ವರ್ಧಿಸಲಿ !"ಎ೦ದ ಅಮಾತ್ಯ,ಒಳಗೆ ಬ೦ದು. ಕ್ಷಣ ಮೌನದ ಬಳಿಕ ಆತ ಮುಂದುವರಿದ: “ಪ್ರಜೆಗಳೆಲ್ಲ ಎಚ್ಚತ್ತಿದ್ದಾರೆ. ಮಹಾಪ್ರಭು ಮಹಾಮಂದಿರಕ್ಕೆ ಮೆರವಣಿಗೆ ಹೋಗುವು ದನ್ನು ನೋಡಲು ದಾರಿಯ ಇಕ್ಕೆಲಗಳಲ್ಲೂ ಕಿಕ್ಕಿರಿದು ನಿಂತಿದ್ದಾರೆ. ಕ್ರೂರ ಮೃಗವನ್ನು ಬಂಧನದಲ್ಲಿಟ್ಟಿದ್ದೇವೆ. ಅಲಂಕೃತ ಮಹಾ ಮ೦ದಿರ ಪೆರೋನ ಸ್ವಾಗತಕ್ಕೆ ಸಿದ್ಧವಾಗಿದೆ. ಮಹಾ ಅರ್ಚಕರು ಎದ್ದು ಪವಿತ್ರಕೊಳದಲ್ಲಿ ಸ್ನಾನ ಮಾಡ್ತಿದ್ದಾರೆ.”